Advertisement
ಅವರು ಅ. 27ರಂದು ಬಿ.ಸಿ. ರೋಡ್ ಸ್ಪರ್ಶಾ ಕಲಾಮಂದಿರದಲ್ಲಿ ಸಿರಿಧಾನ್ಯಗಳ ಆಹಾರ ಮೇಳವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಶ್ರೀಕ್ಷೇತ್ರ ಧ.ಗ್ರಾ.ಯೋ. ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಸಸ್ಯಾಹಾರ ಸೇವನೆ ಮಾಡಿದವರಿಗೆ ರೋಗ ಕಡಿಮೆ. ಸಿರಿಧಾನ್ಯ ಆಹಾರ ಸೇವಿಸಿದವರು ಇತರರಿಗಿಂತ ಹೆಚ್ಚು ಆರೋಗ್ಯಪೂರ್ಣ ಆಗಿರುತ್ತಾರೆ. ಇಂತಹ ಮೇಳಗಳ ಮೂಲಕ ಜನಸಾಮಾನ್ಯರಿಗೆ ಹೊಸ ಚಿಂತನೆ ಮೂಡಿಸುವುದಾಗಿದೆ ಎಂದರು.
Related Articles
ದೋಸೆ ಮಾಡುವ ಮೂಲಕ ಸಿರಿಧಾನ್ಯ ಆಹಾರ ಮೇಳದ ತಿಂಡಿ ತಿನಿಸುಗಳನ್ನು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಉದ್ಘಾಟಿಸಿದರು. ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಕಾರಂತ, ಸ್ಪರ್ಶ ಕಲಾ ಮಂದಿರದ ಮಾಲಕ ಸುಭಾಷ್‌ಚಂದ್ರ ಜೈನ್ ಸೇವಾಂಜಲಿ ಪ್ರತಿಷ್ಟಾನ ಪರಂಗಿಪೇಟೆ ಅಧ್ಯಕ್ಷ ಕೃಷ್ಣಕುಮಾರ್ ಪೂಂಜ, ಬಂಟ್ವಾಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ನಾವೂರ, 2016ನೇ ಸಾಲಿನ ಕೃಷಿ ಉತ್ಸವ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರೊನಾಲ್ಡ್ ಡಿ’ಸೋಜಾ, ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಪಿ. ಜಯಾನಂದ್, ಮಾಣಿ ಜನಜಾಗೃತಿ ವೇದಿಕೆ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.
Advertisement
ಸಿರಿಧಾನ್ಯ ವಿಭಾಗದ ಯೋಜನಾಧಿಕಾರಿ ಮಂಜುಳಾ ಪ್ರಸ್ತಾವಿಸಿದರು. ವಲಯ ಮೇಲ್ವಿಚಾರಕ ಚಂದ್ರಹಾಸ ಸ್ವಾಗತಿಸಿ, ಮೇಲ್ವಿಚಾರಕ ಶಶಿದರ್ ವಂದಿಸಿದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಲಾೖಲ, ಬೆಳ್ತಂಗಡಿ, ಶ್ರೀಕೇತ್ರ ಧ.ಗ್ರಾ. ಯೋ. ಬಂಟ್ವಾಳ ತಾಲೂಕು, ಸೇವಾಂಜಲಿ ಪ್ರತಿಷ್ಠಾನ ಫರಂಗೀಪೇಟೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸಹಕರಿಸಿದ್ದವು. ಅ. 29 ರಂದು ಸಿರಿಧಾನ್ಯಗಳ ಆಹಾರ ಮೇಳ ನಡೆಯುವುದು.
ಸಾವಯವ ಆಹಾರ ಸಂಕಲ್ಪ ಇಂದು ಆರೋಗ್ಯ ಮಹತ್ವದ ವಿಚಾರವಾಗಿದ್ದು, ಸಾವಯವ ಆಹಾರ ಸೇವನೆ ಮಾಡುವ ಸಂಕಲ್ಪ ಮಾಡಬೇಕು. ಮಾನಸಿಕವಾಗಿ-ದೈಹಿಕವಾಗಿ ಸದೃಢತೆಯನ್ನು ಪಡೆದಾಗ ಮಾತ್ರ ಸಮರ್ಥರಾಗಲು ಸಾಧ್ಯ. ಆಹಾರದ ಕ್ರಮಗಳ ಬಗ್ಗೆ ಎಲ್ಲರೂ ಗಮನಹರಿಸಬೇಕು.
– ಪುರಂದರ ಹೆಗ್ಡೆ, ತಹಶೀಲ್ದಾರ್ ಆರೋಗ್ಯ ವೃದ್ಧಿ
ನಾವು ಹೊಟ್ಟೆ ತುಂಬುವಂತೆ ಆಹಾರ ಸೇವಿಸಿದರೆ, ವಿದೇಶೀಯರು ಕ್ಯಾಲೋರಿ ಕ್ರಮದಲ್ಲಿ ಗ್ರಾಂ ಲೆಕ್ಕಾಚಾರದಲ್ಲಿ ಆಹಾರ ಸೇವಿಸುತ್ತಾರೆ. ನಾವು ಬಾಯಿ ರುಚಿ ಕಡೆಗೆ ಚಿಂತನೆ ಮಾಡುತ್ತೇವೆ. ಪ್ರಗತಿಪರ ದೇಶಗಳು ದೇಹಕ್ಕೆ ಶಕ್ತಿ ತುಂಬುವ ಕಡಿಮೆ ತೂಕದ, ಹೆಚ್ಚು ವಿಟಮಿನ್ ಇರುವ ಆಹಾರ ಸೇವಿಸುತ್ತಾರೆ. ಸಿರಿಧಾನ್ಯಗಳು ದೇಹದ ತೂಕ ಹೆಚ್ಚಿಸುವ ಬದಲು ಆರೋಗ್ಯ ಹೆಚ್ಚಿಸುತ್ತವೆ.
– ಚಂದ್ರಶೇಖರ್ ನೆಲ್ಯಾಡಿ
ಧ.ಗ್ರಾ.ಯೋ. ಜಿಲ್ಲಾ ನಿರ್ದೇಶಕರು