Advertisement

ಬಸನಗೌಡ ಯತ್ನಾಳ ಹೇಳಿದ್ದೆಲ್ಲವೂ ವೇದವಾಕ್ಯವಲ್ಲ: ಬಿ.ಸಿ ಪಾಟೀಲ್

03:59 PM Nov 01, 2020 | keerthan |

ಕೊಪ್ಪಳ: ಪದೆ ಪದೆ ರಾಜ್ಯ ಸರ್ಕಾರದ ವಿರುದ್ದ ಗುಡುಗುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರು ಹೇಳುವುದೆಲ್ಲ ವೇದವಾಕ್ಯವಲ್ಲ ಎಂದು ಕೃಷಿ‌ ಸಚಿವ ಬಿ.ಸಿ ಪಾಟೀಲ್ ಹೇಳಿದರು.

Advertisement

ಕೊಪ್ಪಳದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನೆರೆ ಪರಿಹಾರ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಮತ್ತೆ ತಾರತಮ್ಯ ಮಾಡಿದೆ ಎನ್ನುವ ಶಾಸಕ ಯತ್ನಾಳ ಹೇಳಿಕೆಗೆ ಬಿ.ಸಿ ಪಾಟೀಲ್ ಈ ರೀತಿ ಟಾಂಗ್ ನೀಡಿದರು.

ಯತ್ನಾಳ ಹೇಳಿದಾಕ್ಷಣ ಎಲ್ಲವೂ ವೇದವಾಕ್ಯವಲ್ಲ. ನೆರೆ ಪರಿಹಾರ ವಿತರಣೆಯ ಪಟ್ಟಿಯನ್ನ ನೋಡಬೇಕು. ಎಲ್ಲಿ ಎಷ್ಟು ನೆರೆ ಹಾನಿಯಾಗಿದೆ. ಅಧಿಕಾರಿಗಳು ಎಷ್ಟು ವರದಿ ಕೊಟ್ಟಿದ್ದಾರೆ. ಸುಮ್ಮನೆ ಹೇಳೋದು ಸರಿಯಲ್ಲ ಎಂದರು.

ಶಾಸಕ ಯತ್ನಾಳ ಅವರ ಮೇಲೆ ಸಮಯ ಬಂದಾಗ ಸಂಬಂಧಿಸಿದವರು ಖಂಡಿತ ಕ್ರಮ‌ಕೈಗೊಳ್ಳುತ್ತಾರೆ ಎಂದರು.

17 ಶಾಸಕರ ಭವಿಷ್ಯ ಎಕ್ಕೂಟ್ಟೂ ಹೋಗುತ್ತೆ ಎಂದಿರುವ ಮಾಜಿ‌ ಸಿಎಂ ಸಿದ್ದು ಅವರು, ಮೊದಲು ತಮ್ಮ ಸ್ಥಾನವನ್ನ ಭದ್ರ ಮಾಡಿಕೊಳ್ಳಲಿ. ತಮ್ಮ ಭವಿಷ್ಯ ಏನಾಗಲಿದೆ ಎನ್ನುವುದನ್ನು ನೋಡಿಕೊಳ್ಳಲಿ ಎಂದರು.

Advertisement

ಆರ್ ಆರ್ ನಗರ, ಶಿರಾ ಸೇರಿ ನಾಲ್ಕೂ ವಿಧಾನ ಪರಿಷತ್ ಕ್ಷೇತ್ರನೂ ನಾವು ಗೆಲ್ಲುತ್ತೇವೆ. ಅದ್ಭುತ ಸ್ಪಂದನೆ ಸಿಕ್ಕಿದೆ.  ಇನ್ನೂ ಭತ್ತದ ಬೆಂಬಲ ಬೆಲೆ ನಿಗಧಿಯಾಗಿದೆ. ನ.1 ರಿಂದ ನ.30ರ ವರೆಗೂ ಖರೀದಿಗೆ ನೊಂದಣಿ ನಡೆಯುತ್ತದೆ. ನಂತರ ಖರೀದಿ ಆರಂಭ ಮಾಡಲಿದ್ದೇವೆ. ಮೆಕ್ಕೆಜೋಳ ಖರೀದಿ ಪಡಿತರ ವ್ಯವಸ್ಥೆಯಡಿ ಬರುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೀವಿ. ಪಡಿತರ ವ್ಯವಸ್ಥೆಯಡಿ ತನ್ನಿ ಎಂದು, ಕೇಂದ್ರದಿಂದ ಎಂಎಸ್ ಪಿಯಡಿ ಖರೀದಿ ಮಾಡಿ ಎಂದರೆ ನಾವು ಖರೀದಿ ಮಾಡಲಿದ್ದೇವೆ ಎಂದರು.

ಗಂಗಾವತಿ ನಗರಸಭೆ ಸದಸ್ಯನ ಕಿಡ್ನ್ಯಾಪ್ ವಿಚಾರ ರಾಜಕೀಯದಲ್ಲಿ ಅವೆಲ್ಲವೂ ಸಹಜ, ಕಿಡ್ನ್ಯಾಪ್ ಆಗ್ತಾರೆ. ಮತ್ತೆ ಬರ್ತಾರೆ. ಗಂಗಾವತಿ ಪ್ರಕರಣದಲ್ಲಿ ಪೊಲೀಸ್ ತನಿಖೆಯಲ್ಲಿ ಅದು ಗೊತ್ತಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next