Advertisement
ಗುರುವಾರ ಹುಣಸೂರು ನಗರದ ಹೊರವಲಯದ ಗೋವಿಂದನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಮು ಬಡಾವಣೆಯಲ್ಲಿ 80 ಲಕ್ಷ ರೂ.ವೆಚ್ಚದಡಿ ನಿರ್ಮಾಣಗೊಂಡಿರುವ ಕೃಷಿ ಇಲಾಖೆ ಉಪನಿರ್ದೇಶಕರ ಕಚೇರಿ ಉದ್ಘಾಟಿಸಿದ ನಂತರ ಮಾದ್ಯಮದೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೇಡಿಕೆ 1.09 ಲಕ್ಷ ಮೆಟ್ರಿಕ್ ಟನ್ ಆಗಿದ್ದು, ಏಪ್ರಿಲ್ ತಿಂಗಳಿನಲ್ಲಿ 13 ಸಾವಿರ ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರ ಬೇಡಿಕೆಯಿದ್ದು, ಈಗಾಗಲೆ 18 ಸಾವಿರ ಮೆಟ್ರಿಕ್ ಟನ್‌ನಷ್ಟು ಪೂರೈಸಿದ್ದೇವೆ. ಇನ್ನೂ 4085 ಮೆಟಿಕ್ ಟನ್‌ನಷ್ಟು ದಾಸ್ತಾನು ಇದೆ. ವಾಡಿಕೆ ಮಳೆಗಿಂತ (80ಮಿ.ಮಿ.) ಈ ಬಾರಿ ಹೆಚ್ಚಾಗಿದೆ. ಬಿತ್ತನೆಬೀಜ, ಕೀಟನಾಶಕ ಪೂರೈಕೆಯಲ್ಲೂ ವ್ಯತ್ಯಯವಾಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
Related Articles
Advertisement
ಕೃಷಿ ಇಲಾಖೆ ವತಿಯಿಂದ ರೈತರ ಬೆಳೆ ಹಾಳಾಗದಂತೆ ಕ್ರಮ ವಹಿಸಲು ರಾಜ್ಯದ 13 ಕಡೆ ಕೋಲ್ಡ್ ಸ್ಟೋರೇಜ್‌ಗಳನ್ನು ಸ್ಥಾಪಿಸಲಾಗಿದೆ (ತಲಾ 9 ಕೋಟಿ ರೂ.ವೆಚ್ದದಡಿ). ರೈತರ ಅನುಕೂಲಕ್ಕಾಗಿ ಎಲ್ಲ ರೀತಿಯ ಕ್ರಮವಹಿಸಲಾಗಿದೆ. ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 58 ಸಾವಿರ ವಿದ್ಯಾರ್ಥಿಗಳು ಪ್ರೋತ್ಸಾಹಧನ (17.7 ಕೋಟಿ ರೂ.ಗಳು) ಪಡೆದಿದ್ದಾರೆ. ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯಡಿ ಒಟ್ಟು 54.75 ಕೋಟಿ ರೂ.ಗಳು ರೈತರ ಖಾತೆಗೆ ನೇರವಾಗಿ ಜಮೆಯಾಗಿದೆ. ಇವೆಲ್ಲವೂ ನಮ್ಮ ಸರ್ಕಾರದ ಹೆಮ್ಮೆಯ ಯೋಜನೆೆ ಎಂದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ರೈತಪರ ಕಾಳಜಿಯಿಂದ ಕಾರ್ಯಕ್ರಮಗಳ ಅನುಷ್ಠಾನಗೊಳ್ಳಬೇಕಿದೆ. ಕೋವಿಡ್ ನಂತರದ ದಿನಗಳಲ್ಲಿ ರೈತರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದು, ರಾಗಿ ಖರೀದಿ ಕೇಂದ್ರದ ಮರು ಆರಂಭದ ನಿರ್ದಾರ ಸ್ವಾಗತಾರ್ಹ ಎಂದರು.
ಇದೇ ಸಂರ್ಭದಲ್ಲಿ 2 ಮಹಿಳಾ ಸ್ವಸಹಾಯ ಸಂಘಗಳಿಗೆ ಟ್ರಾಕ್ಟರ್‌ಗಳನ್ನು ಸಚಿವರು ವಿತರಿಸಿದರು. ತಲಾ 5 ಮಂದಿ ರೈತರಿಗೆ ರೋಟಾವೇಟರ್, ಸ್ಪ್ಲಿಂಕ್ಲರ್‌ಗಳು ಮತ್ತು ಕಲ್ಟಿವೇಟರ್‌ಗಳನ್ನು ವಿತರಿಸಿದರು. 50 ಲಕ್ಷ ರೂ.ವೆಚ್ಚದಲಿ ನಿರ್ಮಾಣಗೊಂಡಿರುವ ಹನಗೋಡು ರೈತಸಂಪರ್ಕ ಕೇಂದ್ರದ ನಾಮಫಲಕವನ್ನು ಅನಾವರಣಗೊಳಿಸಿದರು. ಕೃಷಿ ಅಭಿಯಾನದ ರಥಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷೆ ಸಿರೀನ್ ತಾಜ್, ಕೃಷಿ ಇಲಾಖೆ ನಿರ್ದೇಶಕಿ ನಂದಿನಿಕುಮಾರಿ, ಕೃಷಿ ಇಲಾಖೆ ಜೆಡಿ ಮಹಂತೇಶಪ್ಪ, ಉಪನಿರ್ದೇಶಕ ಧನಂಜಯ್, ಸಹಾಯಕ ನಿರ್ದೇಶಕ ಜೆ.ವೆಂಕಟೇಶ್, ಸಿಬ್ಬಂದಿ ಮತ್ತು ರೈತರು ಹಾಜರಿದ್ದರು.