Advertisement
ಮಂಗಳವಾರ ಇಲ್ಲಿನ ಕೃಷಿ ಮಹಾವಿದ್ಯಾಲಯದಲ್ಲಿ ಬೆಳೆ ಸಮೀಕ್ಷೆ ಹಾಗೂ ಇಲಾಖೆಯ ವಿಭಾಗ ಮಟ್ಟದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟೋತ್ತಿಗೆ ಬೆಳೆ ವಿಮೆ ಮಂಜೂರಾಗಿ ರೈತರ ಖಾತೆಗೆ ಪರಿಹಾರ ಮೊತ್ತ ಜಮಾವಾಗಬೇಕಿತ್ತು.ಆದರೆ ಬೆಳೆ ಹಾನಿಯ ಪ್ರಮಾಣ ವರದಿ ರೂಪಿಸುವಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ಕೆಲವು ತಿಂಗಳು ಹಿಡಿದಿದೆ. ಈಗ ಎಲ್ಲ ಕಾರ್ಯ ಮುಗಿದಿದೆ. ಹೀಗಾಗಿ ವಾರ ಇಲ್ಲವೇ 15 ದಿನದಲ್ಲಿ ಬೆಳೆ ವಿಮೆ ಮಂಜೂರಾಗಲಿದೆ ಎಂದರು.
Related Articles
Advertisement
ಬಿಎಸ್ಸಿ ಕೃಷಿ, ಪಶು ಸಂಗೋಪನಾ, ತೋಟಗಾರಿಕೆ ಸೇರಿ ಇತರ ವೃತ್ತಿಪರ ಕೋರ್ಸುಗಳ ರೈತರ ಮಕ್ಕಳು ಶೇ. 40ರಷ್ಟು ಸೀಟುಗಳ ಮೀಸಲಾತಿಗೆ ಯಾವುದೇ ಧಕ್ಕೆ ಬಾರದಂತೆ ನಿಗಾ ವಹಿಸಲಾಗುವುದು. ಕೊವಿಡ್- ೧೯ ಹಿನ್ನಲೆ ಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಿಕ್ಕಾಗಿಲ್ಲ. ಸಿಇಟಿ ಫಲಿತಾಂಶ ಹಾಗೂ ರೈತ ಮಕ್ಕಳ ಸರ್ಟಿಫಿಕೇಟ್ ಆಧಾರದ ಮೇಲೆ ಪ್ರವೇಶಾತಿ ಕಲ್ಪಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಶಾಸಕ ಬಿ.ಜಿ.ಪಾಟೀಲ್, ಮಾಜಿ ಶಾಸಕ ದೊಡ್ಡ ಪ್ಪಗೌಡ ಪಾಟೀಲ್ ನರಿಬೋಳ, ಜಿ.ಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತಗೌಡ ಪಾಟೀಲ್ ಹಾಜರಿದ್ದರು.