Advertisement
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಪರವಾಗಿ ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಮತ ಯಾಚಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲ ಸಮಯದಲ್ಲೂ ಯಾವುದೇ ಪರಿಷ್ಕರಣೆಯಾದಾಗ ಗೊಂದಲಗಳಿರುತ್ತವೆ. ವೈಚಾರಿಕವಾಗಿ ವಸ್ತುನಿಷ್ಠವಾಗಿ ವಾದ ಮಾಡಲು ಹತಾಶರಾಗಿ ಮಾತನಾಡಿದ್ದಾರೆ. ಕಾಂಗ್ರೆಸ್‌ನವರು ಹಿಜಾಬ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಪ್ರಯತ್ನಿಸಿ ವಿಫಲರಾದರು. ಕೋವಿಡ್ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸಿದಾಗ ಈ ರೀತಿಯ ಮಾತುಗಳನ್ನಾಡಿ ವಿಫಲರಾದರು. ಉತ್ತರ ಪ್ರದೇಶ ಚುನಾವಣೆ ಬಳಿಕ ಕಾಂಗ್ರೆಸ್ ದೇಶದಲ್ಲಿ ಎಲ್ಲೂ ಇಲ್ಲದಾಗಿಬಿಡುತ್ತದೆಯೋ ಎಂಬ ಭಯ ಶುರುವಾಗಿ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
Related Articles
Advertisement
ಪ್ರಶ್ನೆಗೆ ಉತ್ತರಿಸಿದ ಅವರು, ದೇವನೂರು ಮಹಾದೇವ ಅವರ ಬಗ್ಗೆ ಅಪಾರವಾದ ವಿಶ್ವಾಸವಿದೆ. ಅಲ್ಲದೇ ಅವರ ಬುದ್ದಿವಂತಿಕೆ, ಹೋರಾಟದ ಬಗ್ಗೆ ಕಳಕಳಿಯೂ ಇದೆ. ಅವರು ಯಾವ ಒತ್ತಡದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾನು ಅವರನ್ನು ಭೇಟಿ ಮಾಡಲಿದ್ದೇನೆ. ಪರಿಷ್ಕರಣಾ ಸಮಿತಿ ಆಗಿ ತುಂಬಾ ತಿಂಗಳಾಗಿದೆ. ಪುಸ್ತಕಗಳೆಲ್ಲ ಪ್ರಿಂಟ್ ಆಗಿ ಆಚೆ ಬಂದಿದ್ದು ಮಕ್ಕಳ ಕೈ ಸೇರುವ ಹಂತದಲ್ಲಿದೆ ಎಂದರು.
ಚುನಾವಣೆಯಲ್ಲಿ ಮೈ.ವಿ.ರವಿಶಂಕರ್ ಪರ ವಾತಾವರಣ ತುಂಬಾ ಚೆನ್ನಾಗಿದ್ದು ರವಿ ಅವರು ಗೆಲ್ಲುವ ವಿಶ್ವಾಸವಿದೆ. ಕಳೆದ 30 ವರ್ಷಗಳಿಂದಲೂ ಒಂದೇ ವಿಚಾರಕ್ಕೋಸ್ಕರ ಪೂರ್ಣ ಸಮಯ ಕೊಟ್ಟು ಸಂಘಟನೆ ಕಟ್ಟಿ ಕೆಲಸ ಮಾಡಿದ ಸಾಮಾನ್ಯ ಕಾರ್ಯಕರ್ತರಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ 150 ಮತಗಳಿಂದ ಸೋತರೂ ಜನರ ಪರವಾಗಿ ಕೆಲಸ ಮಾಡಲು ಯಾವುದೇ ರೀತಿಯ ಹಿಂದೇಟು ಹಾಕದೆ ಪ್ರಾಮಾಣಿಕ ಕಾರ್ಯಕರ್ತನಾಗಿ ದೇಶ ಸೇವೆ ಮಾಡುತ್ತಿದ್ದಾರೆ. ಎಲ್ಲ ಕಡೆ ಶಿಕ್ಷಕರನ್ನು ಹಾಗೂ ಪದವೀಧರರನ್ನು ಭೇಟಿ ಮಾಡಿದಾಗ ಎಲ್ಲ ಕಡೆ ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಚಿವರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಪದವೀಧರರ ಬಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್. ಬಿಜೆಪಿ ಮುಖಂಡರಾದ ದತ್ತೇಶ್ ಕುಮಾರ್, ನಾಗಶ್ರೀ ಪ್ರತಾಪ್, ಸಿ.ಎನ್. ಬಾಲರಾಜ್, ಬಾಲಸುಬ್ರಹ್ಮಣ್ಯ, ಮಂಜುನಾಥ್, ಆಲೂರು ಮಲ್ಲು ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿದ ಸಂಬಂಧ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದು ಪಕ್ಷದ ಒಳಗಿನ ತೀರ್ಮಾನ. ಹಿರಿಯರೆಲ್ಲ ಕೂತು ನಿಶ್ಚಯ ಮಾಡಿರುವಂಥದ್ದು. ಯಡಿಯೂರಪ್ಪ ಅವರು ಸಹ ಅಲ್ಲೇ ಇದ್ದರು. ಪಕ್ಷದಲ್ಲಿ ಎಲ್ಲವೂ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತದೆ. ಟಿಕೆಟ್ ಕೈ ತಪ್ಪಿರುವ ಸಂಬಂಧ ವಿಜಯೇಂದ್ರ ಅವರು ಮಾತನಾಡಿಲ್ಲ. ವಿಜಯೇಂದ್ರ ಅವರು ಪಕ್ಷದ ಹಿರಿಯ ಉಪಾಧ್ಯಕ್ಷರಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಅವರಿಗೆ ಅವಕಾಶ ಸಿಗಲಿದೆ ಎಂದರು.
ಶೇ.80 ರಷ್ಟು ಪುಸ್ತಕಗಳು ಪೂರೈಕೆ:ಈಗಾಗಲೇ ಶೇ.80 ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. ಕಲಿಕಾ ಚೇತರಿಕೆ ಒಂದು ತಿಂಗಳ ಕಾರ್ಯಕ್ರಮವಿದೆ. ಮೊದಲ ಬಾರಿ ಶಿಕ್ಷಣ ಇಲಾಖೆಯಲ್ಲಿ ಇಷ್ಟು ಮುಂದೆ ಆಲೋಚನೆ ಮಾಡಿ ಮಾಡಲಾಗಿದೆ. ನಮ್ಮ ಆಲೋಚನೆಉಕ್ರೇನ್ ಯುದ್ದ ಅಡಚಣೆಯಾಯಿತು. ಕಾಗದ ಸಿಗದ ಹಿನ್ನೆಲೆಯಲ್ಲಿ ನಿಧಾನವಾಗಿದೆ. ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಿಗೆ ಉಪಕರಣಗಳನ್ನು ಪೂರೈಕೆ ಮಾಡಲಾಗಿದ್ದು ಕಲಿಕಾ ಚೇತರಿಕೆ ಎಲ್ಲ ಕಡೆ ಶುರುವಾಗಿದೆ ಎಂದರು.