ಬೆಂಗಳೂರು: ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಸರ್ಕಾರ ನವ ಬೆಂಗಳೂರು ಯೋಜನೆಯಡಿಯಲ್ಲಿ 8,015 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಅದರಂತೆ ಯೋಜನೆ ಪ್ರಸಕ್ತ ಸಾಲಿನಲ್ಲಿ 2,300 ಕೋಟಿ ರೂ. ಒದಗಿಸಿದೆ.
ಜತೆಗೆ ನಗರದಲ್ಲಿ 5 ಲಕ್ಷ ಬೀದಿ ದೀಪಗಳನ್ನು ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ ಎಲ್‌ಇಡಿ ಬೀದಿ ದೀಪಗಳನ್ನಾಗಿ ಪರಿವರ್ತಿಸುವ ಮೂಲಕ ವಿದ್ಯುತ್ ಉಳಿತಾಯ ಮಾಡುವ ಯೋಜನೆ ಘೋಷಿಸಿದೆ.
ತೀವ್ರ ಸಂಚಾರದಟ್ಟಣೆ ಎದುರಿಸುತ್ತಿರುವ ಹೆಬ್ಟಾಳ, ಕೆ.ಆರ್. ಪುರ ಹಾಗೂ ಗೊರಗುಂಟೆಪಾಳ್ಯದಲ್ಲಿ ವಾಹನದಟ್ಟಣೆ ನಿವಾರಣೆಗೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಮುಂದಾಗಿದೆ. ಅದರಂತೆ ಹೆಬ್ಟಾಳ ಹಾಗೂ ಕೆ.ಆರ್. ಪುರ ಮೇಲ್ಸೇತುವೆಗಳಿಗೆ ಹೆಚ್ಚುವರಿ ಲೂಪ್ ನಿರ್ಮಾಣ. ಗೊರಗುಂಟೆಪಾಳ್ಯದಲ್ಲಿ ಕೇಳಸೇತುವೆ ನಿರ್ಮಾಣಕ್ಕಾಗಿ 195 ಕೋಟಿ ರೂ. ಮೀಸಲಿಟ್ಟಿದೆ.
* ಬೆಂಗಳೂರು ಸಂಚಾರಿ ವ್ಯವಸ್ಥೆ ಬಲಪಡಿಸುವ ಆರುಪಥದ ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1,000 ಕೋಟಿ ರೂ.
* ತ್ಯಾಜ್ಯ ಸಮಸ್ಯೆ ಪರಿಹಾರಕ್ಕಾಗಿ ಕೆಪಿಸಿಎಲ್‌ನಿಂದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ 400 ಮೆಟ್ರಿಕ್ ಟನ್ ಸಾಮರ್ಥಯದ ಘಟಕ ಸ್ಥಾಪನೆ.
* ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನೆ ನೀತಿ ರೂಪಿಸಿ 87 ರಸ್ತೆಗಳಲ್ಲಿ 10,000 ವಾಹನಗಳಿಗೆ ನಿಲುಗಡೆ ಕಲ್ಪಿಸಲು ಸ್ಮಾರ್ಟ್ ಪಾರ್ಕಿಂಗ್ ಯೋಜನೆ.