Advertisement

ಪಾಲಿಕೆ ವಾರ್ಡ್‌ವಾರು ಪುನರ್‌ ವಿಂಗಡಣೆ ಕರಡು ಅಧಿಸೂಚನೆ

05:30 AM Jun 25, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ 198 ವಾರ್ಡ್‌ ಗಳನ್ನು ಪುನರ್‌ ವಿಂಗಡಣೆ ಮಾಡಿ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ಕಳೆದ 2011ರ ಜನಗಣತಿ ಆಧಾರದ ಮೇಲೆ ಮುನಿಸಿಪಲ್‌ ಕಾರ್ಪೊರೇಷನ್‌  ಕಾಯಿದೆ-1976, ಕಲಂ (7)(2)(ಎ) ಅನ್ವಯ ಈ ಮರುವಿಂಗಡಣೆ ಮಾಡಲಾಗಿದ್ದು, ಬಿಬಿಎಂಪಿಯ ಬಹುತೇಕ ವಾರ್ಡ್‌ಗಳ ಸಂಖ್ಯೆ ಬದಲಾವಣೆಯಾಗಿದ್ದರೆ ಇನ್ನೂ ಕೆಲ ವಾರ್ಡ್‌ಗಳ ಹೆಸರು ಬದಲಾಗಿದೆ.

Advertisement

ಬಿಬಿಎಂಪಿಯು 2007ರಲ್ಲಿ  ರಚನೆಯಾಗಿದ್ದು, 198 ವಾರ್ಡ್‌ಗಳನ್ನು ಅಂದಿನ ಜನಸಂಖ್ಯೆ ಮಾಹಿತಿ ಆಧರಿಸಿ ವಿಂಗಡಿಸಲಾಗಿತ್ತು. ನಂತರ 2011ರ ಜನಗಣತಿ ಆಧಾರದ ಮೇಲೆ ಪುನರ್‌ ವಿಂಗಡಿಸುವ ಪ್ರಕ್ರಿಯೆ ಇತ್ತೀಚೆಗೆ ಶುರುವಾಗಿತ್ತು.  ಕಳೆದ ಮಾರ್ಚ್‌ನಲ್ಲಿ ವಾರ್ಡ್‌ವಾರು ಕ್ಷೇತ್ರ ಪುನರ್‌ ವಿಂಗಡಿಸಿ ಕರಡು ಅಧಿಸೂಚನೆ ಹೊರಡಿಸಿ 15 ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸಲ್ಲಿಕೆಯಾಗಿದ್ದ ಆಕ್ಷೇಪಣೆ ಗಳು, ಸಲಹೆಗಳನ್ನು ಪರಿಶೀಲಿಸಿ ಕೆಲವನ್ನು ಪರಿಗಣಿಸಲಾಗಿತ್ತು.ಅದರಂತೆ 2011ರ ಜನಗಣತಿಯ  ಆಧಾರದ ಮೇರೆಗೆ ಬಿಬಿಎಂಪಿಯ 198 ವಾರ್ಡ್‌ಗಳನ್ನು ಪುನರ್‌ವಿಂಗಡಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತಾವಧಿ ಸೆಪ್ಟೆಂಬರ್‌ಗೆ  ಅಂತ್ಯವಾಗಲಿದ್ದು, ಮುಂದೆ ನಡೆಯುವ ಚುನಾವಣೆಗೆ ಅಧಸೂಚನೆಯಲ್ಲಿ ಹೊರಡಿಸುವ ವಾರ್ಡ್‌ ಪುನರ್‌ ವಿಂಗಡಣೆ ಆಧಾರದ ಮೇಲೆ ಮತದಾನ ನಡೆಯಲಿದೆ. ಈ ಸಂಬಂಧ ರಾಜ್ಯಪತ್ರ ಹೊರಡಿಸಿದ ದಿನ ಸಾರ್ವಜನಿಕರಿಗೆ ಪ್ರತಿ ಲಭ್ಯವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವು ದರಿಂದ ಹಾಗೂ ಬಿಬಿಎಂಪಿ ಆಡಳಿತವೂ ಬಿಜೆಪಿ ಕೈಯ್ಯಲ್ಲಿರುವುದರಿಂದ ಸಹಜವಾಗಿ ಆ ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ.

1 ಕೆಂಪೇಗೌಡ
2 ಚೌಡೇಶ್ವರಿ
3 ಅಟ್ಟೂರು
4 ಯಲಹಂಕ ಉಪನಗರ
5 ಕೋಗಿಲು
6 ಥಣಿಸಂದ್ರ
7 ಜಕ್ಕೂರು
8 ಗುಂಡಾಂಜನೇಯ ವಾರ್ಡ್‌
9 ಅಮೃತಹಳ್ಳಿ
10 ಕೊಡಿಗೇಹಳ್ಳಿ
11 ವಿದ್ಯಾರಣ್ಯಪುರ
12 ದೊಡ್ಡಬೊಮ್ಮಸಂದ್ರ
13 ರಾಮಚಂದ್ರಪುರ
14 ಶೆಟ್ಟಿಹಳ್ಳಿ
15 ಚಿಕ್ಕಸಂದ್ರ
16 ಬಾಗಲಗುಂಟೆ
17 ಮಲ್ಲಸಂದ್ರ
18 ಟಿ. ದಾಸರಹಳ್ಳಿ
19 ಜಾಲಹಳ್ಳಿ
20 ಬೃಂದಾವನನಗರ
21 ಜೆ.ಪಿ. ಉದ್ಯಾನವನ
22 ಯಶವಂತಪುರ
23 ಮತ್ತಿಕೆರೆ
24 ರಾಧಾಕೃಷ್ಣ ದೇವಸ್ಥಾನ
25 ಸಂಜಯನಗರ
26 ಹೆಬ್ಟಾಳ
27 ವಿಶ್ವನಾಥ ನಾಗೇನಹಳ್ಳಿ
28 ಗೋವಿಂದಪುರ
29 ಹೆಣ್ಣೂರು
30 ಚಳ್ಳಕೆರೆ
31 ಹೊರಮಾವು
32 ಕಲ್ಕೆರೆ
33 ಬಾಣಸವಾಡಿ
34 ಕಮ್ಮನಹಳ್ಳಿ
35 ಕಾಚರಕನಹಳ್ಳಿ
36 ಎಚ್‌ಬಿಆರ್‌ ಲೇಔಟ್‌
37 ಕಾಡುಗೊಂಡನಹಳ್ಳಿ
38 ಕುಶಾಲನಗರ
39 ಕಾವಲ್‌ಭೈರಸಂದ್ರ
40 ಚಾಮುಂಡಿನಗರ
41 ಗಂಗಾನಗರ
42 ಅರಮನೆ ನಗರ
43 ಚೊಕ್ಕಸಂದ್ರ
44 ದೊಡ್ಡಬಿದರಕಲ್ಲು
45 ಪೀಣ್ಯ ಕೈಗಾರಿಕಾ ಪ್ರದೇಶ
46 ಲಕ್ಷ್ಮೀದೇವಿನಗರ
47 ನಂದಿನಿಲೇಔಟ್‌
48 ಮಾರಪ್ಪನಪಾಳ್ಯ
49 ಮಲ್ಲೇಶ್ವರ
50 ಜಯಚಾಮರಾಜೇಂದ್ರನಗರ
51 ದೇವರಜೀವನಹಳ್ಳಿ
52 ಮುನೇಶ್ವರನಗರ
53 ಲಿಂಗರಾಜಪುರ
54 ಬೆನ್ನಿಗಾನಹಳ್ಳಿ
55 ವಿಜ್ಞಾನಪುರ
56 ರಾಮಮೂರ್ತಿನಗರ
57 ಕೆ.ಆರ್‌.ಪುರ
58 ಬಸವನಪುರ
59 ದೇವಸಂದ್ರ
60 ಎ.ನಾರಾಯಣಪುರ
61 ಸಿ.ವಿ.ರಾಮನ್‌ನಗರ
62 ಸರ್ವಜ್ಞನಗರ
63 ಮಾರುತಿ ಸೇವಾನಗರ
64 ಸಗಾಯಪುರ
65 ಪುಲಿಕೇಶಿನಗರ
66 ರಾಮಸ್ವಾಮಿಪಾಳ್ಯ
67 ರಾಜಮಹಲ್‌ ಗುಟ್ಟಹಳ್ಳಿ
68 ಸುಬ್ರಹ್ಮಣ್ಯನಗರ
69 ನಾಗಪುರ
70 ಮಾರುತಿನಗರ
71 ಲಗ್ಗೆರೆ
72 ರಾಜಗೋಪಾಲನಗರ
73 ಹೆಗ್ಗನಹಳ್ಳಿ
74 ಸುಂಕದಕಟ್ಟೆ
75 ಗೊಲ್ಲರಪಾಳ್ಯ (ಹೊಸಹಳ್ಳಿ)
76 ಹೇರೋಹಳ್ಳಿ
77 ಸರ್‌ ಎಂ. ವಿಶ್ವೇಶ್ವರಯ್ಯ
78 ಕೊಟ್ಟಿಗೇಪಾಳ್ಯ
79 ಶಕ್ತಿಗಣಪತಿನಗರ
80 ಶಂಕರಮಠ
81 ಮಂಜುನಾಥನಗರ
82 ಶ್ರೀರಾಮಮಂದಿರ
83 ದಯಾನಂದನಗರ
84 ಗಾಯಿತ್ರಿನಗರ
85 ದತ್ತಾತ್ರೇಯ ದೇವಸ್ಥಾನ
86 ಶೇಷಾದ್ರಿಪುರ
87 ವಸಂತನಗರ
88 ಭಾರತಿನಗರ
89 ಹಲಸೂರು
90 ಹೊಯ್ಸಳನಗರ
91 ಹೊಸ ತಿಪ್ಪಸಂದ್ರ
92 ವಿಜ್ಞಾನನಗರ
93 ಗರುಡಾಚಾರ್‌ಪಾಳ್ಯ
94 ಹೂಡಿ
95 ಕಾಡುಗೋಡಿ
96 ಹಗದೂರು
97 ವೈಟ್‌ಫೀಲ್ಡ್‌
98 ದೊಡ್ಡನೆಕ್ಕುಂದಿ
99 ಎಚ್‌ಎಎಲ್‌
ವಿಮಾನನಿಲ್ದಾಣ
100 ಕೋನೇನ ಅಗ್ರಹಾರ
101 ಜೀವನ್‌ಬಿಮಾನಗರ
102 ಜೋಗುಪಾಳ್ಯ
103 ಶಾಂತಲಾನಗರ
104 ಸಂಪಂಗಿರಾಮನಗರ
105 ಗಾಂಧೀನಗರ
106 ಓಕಳಿಪುರ
107 ರಾಜಾಜಿನಗರ
108 ಬಸವೇಶ್ವರನಗರ
109 ವೃಷಭಾವತಿನಗರ
110 ಕಾವೇರಿಪುರ
111 ಅಗ್ರಹಾರ ದಾಸರಹಳ್ಳಿ
112 ಡಾ.ರಾಜ್‌ಕುಮಾರ್‌
113 ಚಿಕ್ಕಪೇಟೆ
114 ಛಲವಾದಿಪಾಳ್ಯ
115 ಬಿನ್ನಿಪೇಟೆ
116 ಜಗಜೀವನರಾಂನಗರ
117 ಕೆಂಪಾಪುರ ಅಗ್ರಹಾರ
118 ವಿಜಯನಗರ
119 ಹೊಸಹಳ್ಳಿ
120 ಮಾರೇನಹಳ್ಳಿ
121 ಹನುಮಗಿರಿ ದೇವಸ್ಥಾನ
122 ಕಲ್ಯಾಣನಗರ
123 ಮಾರುತಿ ಮಂದಿರ
124 ಅತ್ತಿಗುಪ್ಪೆ
125 ಹಂಪಿನಗರ
126 ಬಾಪೂಜಿನಗರ
127 ಪಾದರಾಯನಪುರ
128 ಕೆ.ಆರ್‌.ಮಾರುಕಟ್ಟೆ
129 ಧರ್ಮರಾಯ ಸ್ವಾಮಿ ದೇವಸ್ಥಾನ
130 ಹೊಂಬೇಗೌಡನಗರ
131 ಶಾಂತಿನಗರ
132 ನೀಲಸಂದ್ರ
133 ವನ್ನಾರಪೇಟೆ
134 ಈಜೀಪುರ
135 ಕೋರಮಂಗಲ
136 ಲಕ್ಕಸಂದ್ರ
137 ಸಿದ್ದಾಪುರ
138 ವಿಶ್ವೇಶ್ವರಪುರ
139 ಸುಂಕೇನಹಳ್ಳಿ
140 ಆಜಾದ್‌ನಗರ
141 ಗಾಳಿ ಆಂಜನೇಯ ದೇವಸ್ಥಾನ
142 ದೀಪಾಂಜಲಿನಗರ
143 ನಾಯಂಡಹಳ್ಳಿ
144 ನಾಗರಬಾವಿ
145 ಜ್ಞಾನಭಾರತಿ
146 ಉಲ್ಲಾಳು
147 ನಾಗದೇವನಹಳ್ಳಿ
148 ಕೆಂಗೇರಿ
149 ರಾಜರಾಜೇಶ್ವರಿನಗರ
150 ಹೊಸಕೆರೆಹಳ್ಳಿ
151 ಗಿರಿನಗರ
152 ಶ್ರೀನಗರ
153 ಹನುಮಂತನಗರ
154 ಕತ್ರಿಗುಪ್ಪೆ
155 ವಿದ್ಯಾಪೀಠ
156 ಬಸವನಗುಡಿ
157 ಯಡಿಯೂರು
158 ಭೈರಸಂದ್ರ
159 ಜಯನಗರ ಪೂರ್ವ
160 ಗುರಪ್ಪನಪಾಳ್ಯ
161 ಸುದ್ದಗುಂಟೆಪಾಳ್ಯ
162 ಬಿಟಿಎಂ ಬಡಾವಣೆ
163 ಮಡಿವಾಳ
164 ಜಕ್ಕಸಂದ್ರ
165 ದೊಮ್ಮಲೂರು
166 ಮಾರತ್‌ಹಳ್ಳಿ
167 ವರ್ತೂರು
168 ದೊಡ್ಡಕಮನ್ನ‌ಳ್ಳಿ
169 ಬೆಳ್ಳಂದೂರು
170 ಅಗರ
171 ಎಚ್‌ಎಸ್‌ಆರ್‌ ಲೇಔಟ್‌
172 ಬೊಮ್ಮನಹಳ್ಳಿ
173 ಬಿಳೇಕಹಳ್ಳಿ
174 ಸಾರಕ್ಕಿ
175 ರಾಗೀಗುಡ್ಡ
176 ಕರೀಸಂದ್ರ
177 ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಾಲಯ
178 ಪದ್ಮನಾಭನಗರ
179 ಇಟ್ಟಮಡು
180 ಉತ್ತರಹಳ್ಳಿ
181 ಸುಬ್ರಹ್ಮಣ್ಯಪುರ
182 ವಸಂತಪುರ
183 ಕುಮಾರಸ್ವಾಮಿ ಲೇಔಟ್‌
184 ಬನಶಂಕರಿ ದೇವಸ್ಥಾನ
185 ಯಲಚೇನಹಳ್ಳಿ
186 ಜರಗನಹಳ್ಳಿ
187 ಚುಂಚಘಟ್ಟ
188 ಪುಟ್ಟೇನಹಳ್ಳಿ
189 ಹೊಂಗಸಂದ್ರ
190 ಸಿಂಗಸಂದ್ರ
191 ಕೂಡ್ಲು
192 ಬೇಗೂರು
193 ದೇವರಚಿಕ್ಕನಹಳ್ಳಿ
194 ಅರಕೆರೆ
195 ಕಾಳೇನ ಅಗ್ರಹಾರ
196 ಗೊಟ್ಟಿಕೆರೆ
197 ಅಂಜನಾಪುರ
198 ಹೆಮ್ಮಿಗೆಪುರ

ಬುಧವಾರ ಸಂಜೆಯೇ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಶೀಘ್ರದಲ್ಲೇ ಸಾರ್ವಜನಿಕರಿಗೂ ಇದರ ಪ್ರತಿ ಲಭ್ಯವಾಗಲಿದೆ. 
-ರಾಕೇಶ್‌ ಸಿಂಗ್‌, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next