ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಭಾನುವಾರ ಐಎಂಎ ಸಮೂಹ ಸಂಸ್ಥೆ ಮುಖ್ಯಸ್ಥ ಮನ್ಸೂರ್ ಖಾನ್ ಆಪ್ತ ಹಾಗೂ ಬಿಬಿಎಂಪಿ ಜೆಡಿಎಸ್‌ನ ನಾಮನಿರ್ದೇಶಿತ ಸದಸ್ಯ ಸೈಯದ್ ಮುಜಾಹಿದ್‌ನನ್ನು ಬಂಧಿಸಿ, ಹದಿಮೂರು ದಿನಗಳ ಕಾಲ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ, ವಂಚಕ ಸಂಸ್ಥೆಯ 1,16,94,307 ರೂ. ಇದ್ದ 101 ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಿದೆ.
ಆರೋಪಿಯು ಮನ್ಸೂರ್ ಖಾನ್ ಜತೆ ಒಡನಾಡ ಹೊಂದಿದ್ದು, ಮನ್ಸೂರ್ ದೇಶ ಬಿಟ್ಟು ಹೋಗುವ ವಿಚಾರ ಗೊತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಈ ಸಂಬಂಧ ಶನಿವಾರ ತಡರಾತ್ರಿ ಫ್ರೆಜರ್‌ಟೌನ್‌ನಲ್ಲಿರುವ ಸೈಯದ್ ಮುಜಾಹಿದ್ ಮನೆ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಕೃತ್ಯಕ್ಕೆ ಸಂಬಂಧಿಸಿದ ಕೆಲ ಮಹತ್ವದ ದಾಖಲೆಗಳು, ಒಂದು ಫಾರ್ಚುನರ್ ಕಾರು, ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿತ್ತು.
ಅವುಗಳ ಪರಿಶೀಲನೆಯಲ್ಲಿ ವಂಚನೆಯಲ್ಲಿ ಮುಜಾಹಿದ್ ಪಾತ್ರ ಇದೆ ಎಂಬುದ ಸ್ಪಷ್ಟವಾಗಿದೆ. ಹೀಗಾಗಿ ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೆಚ್ಚುವರಿ ವಿಚಾರಣೆಗಾಗಿ 13 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದರು. ಅಲ್ಲದೆ, ಆರೋಪಿ ಜೆಡಿಎಸ್‌ನಿಂದ ನಾಮನಿರ್ದೇಶಿತನಾಗಿದ್ದರು. ಸಚಿವ ಜಮೀರ್ ಅಹಮದ್ ಜತೆ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದ ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಮನ್ಸೂರ್‌ನ ವಿಚಾರ ಮರೆಮಾಚಿದ: ಐಎಂಎ ಮಾಲೀಕ ಮನ್ಸೂರ್ ಖಾನ್‌ನ ಅತ್ಯಾಪ್ತನಾಗಿದ್ದ ಮುಜಾಹಿದ್, ಮನ್ಸೂರ್ ಖಾನ್ ದೇಶ ಬಿಟ್ಟು ಹೋಗುವ ಮೊದಲು ಆತನನ್ನು ಸಂಪರ್ಕ ಮಾಡಿದ್ದ. ಅಲ್ಲದೆ, ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾದ ಬಳಿಕವೂ ಆತನೊಂದಿಗೆ ನಿರಂತವಾಗಿ ಸಂಪರ್ಕದಲ್ಲಿದ್ದ. ಮನ್ಸೂರ್ ದೇಶ ಬಿಟ್ಟು ಹೋಗುವ ವಿಚಾರ ಗೊತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ.
ಅಲ್ಲದೆ, ಮನ್ಸೂರ್ ಖಾನ್‌ನಿಂದ ಹಾಸನದಲ್ಲಿ ಆಸ್ತಿ ಖರೀದಿ ಮಾಡುವಾಗ ಸೈಯದ್ ಅಕ್ರಮವಾಗಿ 10 ಕೋಟಿ ಹಣ ವರ್ಗಾವಣೆ ಮಾಡಿಕೊಂಡಿದ್ದ. ಮನ್ಸೂರ್ ನಾಪತ್ತೆಯಾಗುವ ಕೆಲ ದಿನಗಳ ಹಿಂದಷ್ಟೇ ಹೂಡಿಕೆದಾರರಿಗೆ ಬಡ್ಡಿ ಹಣ ನೀಡುವ ಸಂಬಂಧ ಕಂಪನಿಯ ನಿರ್ದೇಶಕರ ಜತೆ ನಡೆದ ಚರ್ಚೆಯಲ್ಲೂ ಮುಜಾಹಿದ್ ಭಾಗಿಯಾಗಿದ್ದ. ಈ ವೇಳೆ ಕೋಲಾರದ ರಿಯಲ್ ಎಸ್ಟೇಟ್ ಏಜೆಂಟ್‌ವೊಬ್ಬರಿಂದ 3 ಕೋಟಿ ರೂ. ಸಂಗ್ರಹಿಸುವಂತೆ ಕಂಪನಿಯ ಇಬ್ಬರು ನಿರ್ದೇಶಕರಿಗೆ ಸೂಚನೆ ಕೂಡ ನೀಡಿದ್ದ ಎಂದು ಹೇಳಲಾಗಿದೆ.
ಪಾಲಿಕೆಯ ನಾಮನಿರ್ದೇಶಿತ ಪಾಲಿಕೆ ಸದಸ್ಯನಾಗಿರುವ ಮುಜಾಹಿದ್, ಈ ಹಿಂದೆ ಶಿವಾಜಿನಗರದ ವಾರ್ಡ್‌ವೊಂದರಿಂದ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಪರಭಾವಗೊಂಡಿದ್ದ. ಅಲ್ಲದೇ, ಈತನ ವಿರುದ್ಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಕೆಲ ಅಪರಾಧ ಪ್ರಕರಣಗಳು ದಾಖಲಾಗಿದ್ದು, 2014ರಲ್ಲಿ ಆತನ ವಿರುದ್ಧ ರೌಡಿಪಟ್ಟಿ ಕೂಡ ತೆರೆಯಲಾಗಿತ್ತು. ಆಗಿನ ರೌಡಿಪಟ್ಟಿಯಲ್ಲಿ ಆತನ ಹೆಸರನ್ನು ಮುಜಾಹಿದ್ ಅಲಿಯಾಸ್ ಖಚೀìಫ್ ಮಚ್ಚು ಎಂದು ನೊಂದಾಯಿಸಲಾಗಿದೆ. ಇತ್ತೀಚೆಗಷ್ಟೇ ಆತನನ್ನು ರೌಡಿಪಟ್ಟಿಯಿಂದ ಕೈಬಿಡಲಾಗಿತ್ತು ಎಂದು ಎಸ್‌ಐಟಿ ಮೂಲಗಳು ತಿಳಿಸಿದೆ.
101 ಖಾತೆ ಪತ್ತೆ: ಇದುವರೆಗಿನ ತನಿಖೆಯಲ್ಲಿ ಐಎಂಎ ಒಡೆತನದ ವಿವಿಧ ಕಂಪನಿಗಳ ಹೆಸರಿನಲ್ಲಿದ್ದ ಒಟ್ಟು 101 ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿ, ಈ ಎಲ್ಲ ಖಾತೆಗಳ ಮುಂದಿನ ಎಲ್ಲ ವ್ಯವಹಾರಗಳನ್ನು ಸœಗಿತಗೊಳಿಸಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.