Advertisement

ಪಾಲಿಕೆಯ ನೂತನ ಕಾಯ್ದೆ ಅನುಷ್ಠಾನಕ್ಕೆ ಸರ್ಕಾರದಿಂದ ಚಾಲನೆ 

09:25 PM Mar 31, 2021 | Team Udayavani |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಅಧಿನಿಯಮ -2020ರ ಅನ್ವಯ ಬಿಬಿಎಂಪಿ ಆಯುಕ್ತರ ಹುದ್ದೆಯನ್ನು ಮುಖ್ಯ ಆಯುಕ್ತರ ಹುದ್ದೆಯನ್ನಾಗಿ ಮತ್ತು ಜಂಟಿ ಆಯುಕ್ತರ ಹುದ್ದೆಯನ್ನು ವಲಯ ಜಂಟಿ ಆಯುಕ್ತರ ಹುದ್ದೆಯನ್ನಾಾಗಿ ಬದಲಾಯಿಸಿ ಸರ್ಕಾರ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ.

Advertisement

ಈ ಮೂಲಕ ಹೊಸ ಕಾಯ್ದೆೆಯಲ್ಲಿರುವ ಅಂಶಗಳನ್ನು ಅನುಷ್ಠಾಾನ ಪ್ರಾರಂಭವಾದಂತಾಗಿದೆ. ಪರಿಷ್ಕೃತ ಆದೇಶ ಏ.1ರಿಂದ (ಇಂದಿನಿಂದಲೇ) ಜಾರಿಗೆ ಬರಲಿದೆ. ಈಗಾಗಲೇ ಪಾಲಿಕೆಯ ಎಂಟು ವಲಯಗಳಿಗೆ ವಿಶೇಷ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನೇ ವಲಯ ಆಯುಕ್ತರ ಹುದ್ದೆಗೆ ನಿಯೋಜಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಹಾಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿಿರುವ ಅಧಿಕಾರಿಗಳು ವಲಯ ಜಂಟಿ ಆಯುಕ್ತರ ಅಧೀನರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಯುಕ್ತರ ಅಧಿಕಾರ ಮತ್ತು ಜವಾಬ್ದಾರಿಯನ್ನು  ಮುಖ್ಯ ಆಯುಕ್ತರಿಗೆ ನೀಡಲಾಗಿದ್ದು, ನಿರ್ಣಯ, ಸುತ್ತೋಲೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸರ್ಕಾರಕ್ಕೆ ವರದಿ ಮಾಡಲು ಸೂಚಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವ ಕ್ರಮಗಳು ಪಾಲಿಕೆಯ ನೂತನ ಕಾಯ್ದೆೆಯ 375ರ ಅಡಿ ಹಾಗೂ ಪರವಾನಗಿ, ಪ್ರಮಾಣ ಪತ್ರ ಸೇರಿದಂತೆ ಎಲ್ಲ ಆದೇಶಗಳು ಹೊಸ ಕಾಯ್ದೆೆಯ 376 ಅಡಿಯಲ್ಲಿ ಮುಂದುವರಿಯಲಿದೆ ಎಂದು ಸರ್ಕಾರ ಉಲ್ಲೇಖಿಸಿದೆ.

ವಲಯ ಆಯುಕ್ತರು :

Advertisement

ಪೂರ್ವ : ಮನೋಜ್‌ ಜೈನ್ (ಯೋಜನೆ)           

ಪಶ್ಚಿಮ : ಬಸವರಾಜು ಎಸ್. (ಕಂದಾಯ)

ದಕ್ಷಿಣ : ತುಳಸಿ ಮದ್ದಿನೇನಿ       (ಹಣಕಾಸು)

ದಾಸರಹಳ್ಳಿ :  ರವೀಂದ್ರ               (ಕಲ್ಯಾಾಣ)     

ಆರ್.ಆರ್. ನಗರ : ಬಿ.ರೆಡ್ಡಿ ಶಂಕರಬಾಬು (ಆಸ್ತಿ, ಶಿಕ್ಷಣ, ಮಾರುಕಟ್ಟೆ)

ಬೊಮ್ಮನಹಳ್ಳಿ    :         ರಾಜೇಂದ್ರ ಚೋಳನ್(ಆರೋಗ್ಯ ಮತ್ತು ಮಾಹಿತಿ)     

ಮಹದೇವಪುರ :     ಡಿ. ರಂದೀಪ್    (ಘನತ್ಯಾಾಜ್ಯ ನಿರ್ವಹಣೆ)

ಯಲಹಂಕ  :    ಡಿ. ರಂದೀಪ್ (ಆಡಳಿತ)

Advertisement

Udayavani is now on Telegram. Click here to join our channel and stay updated with the latest news.

Next