Advertisement

ಬಿಬಿಎಂಪಿ ಮಾರ್ಷಲ್‌ಗ‌ಳಿಂದ 10 ಮಂದಿಗೆ ದಂಡ

06:42 AM Jan 02, 2019 | |

ಬೆಂಗಳೂರು: ಹೊಸ ವರ್ಷದ ದಿನದಂದು ನಗರದ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಬಿಬಿಎಂಪಿ ನೇಮಿಸಿದ್ದ ಮಾರ್ಷಲ್‌ಗ‌ಳು ಸಾರ್ವಜನಿಕ ಸ್ಥಳವನ್ನು ಅಸ್ವತ್ಛಗೊಳಿಸಿದ 10 ಮಂದಿಗೆ ದಂಡ ವಿಧಿಸಿದ್ದಾರೆ.

Advertisement

ಹೊಸ ವರ್ಷದ ಆಚರಣೆ ವಿಜೃಂಭಣೆಯಿಂದ ಕುಡಿದ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಕಿಡಿಗೇಡಿಗಳು ಮೂತ್ರ ವಿರ್ಸಜನೆ ಮಾಡುವುದು, ಬಾಟಲ್‌ ಬಿಸಾಡುವುದನ್ನು, ಉಗುಳುವುದು, ತಿಂಡಿ ತಿನಿಸುಗಳ ಕವರ್‌ ಎಸೆದು ಆ ಸ್ಥಳವನ್ನು ಮಾಲಿನ್ಯ ಮಾಡುತ್ತಿದ್ದರು.

ಇದಕ್ಕೆ ಕಡಿವಾಣ ಹಾಕಲು ಈ ಬಾರಿ ಹೊಸ ವರ್ಷಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ ಬಿಬಿಎಂಪಿ 40 ಮಾರ್ಷಲ್‌ಗ‌ಳನ್ನು ನೇಮಿಸಿತ್ತು.
ಸೋಮವಾರ ರಾತ್ರಿ ಮಾರ್ಷಲ್‌ಗ‌ಳು ಪೊಲೀಸ್‌ ಸಿಬ್ಬಂದಿ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡಿದವರಿಗೆ, ರಸ್ತೆಯಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಎಸೆದವರಿಗೆ  ಹಾಗೂ ಕಸ ಬಿಸಾಡಿದ 10 ಮಂದಿಗೆ ತಲಾ 100 ರೂ.ನಂತೆ ಒಟ್ಟಾರೆ 1000 ರೂ. ದಂಡ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next