Advertisement

ಬಿಬಿಎಂಪಿಗೆ ರಾಜ್ಯ ಸರ್ಕಾರದ ಕೊಡುಗೆ

03:51 PM Jun 27, 2017 | Team Udayavani |

ರಾಜಧಾನಿ ಬೆಂಗಳೂರಿನಲ್ಲಿ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಖ್ಯಾತಿಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಕಳೆದ ನಾಲ್ಕು ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ನೂರಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿಯೂ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. 

Advertisement

ಕಳೆದ ನಾಲ್ಕು ವರ್ಷಗಳಲ್ಲಿ ಬಿಬಿಎಂಪಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ನಗರ ವಾಣಿಜ್ಯ ಪ್ರದೇಶದ ಸುಮಾರು 16.57 ಕಿ.ಮೀ. ಉದ್ದದ ಪ್ರಮುಖ 12 ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಡಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಮೊದಲ ಹಂತ 9 ರಸ್ತೆಗಳು ಪೂರ್ಣಗೊಂಡಿದ್ದು, ಜುಲೈ ಅಂತ್ಯದ ವೇಲೆ ಉಳಿದ 4 ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳಲಿವೆ. 

ಪ್ರಸಕ್ತ ಬಜೆಟ್‌ನಲ್ಲಿ ಪಾಲಿಕೆ ಪಾಲು: ನಗರದ ಆಯ್ದ ರಸ್ತೆಗಳನ್ನು ವೈಟ್‌ ಟಾಪಿಂಗ್‌ಗೆ ಪರಿವರ್ತಿಸಲು ಮತ್ತು ಪಾದಚಾರಿ ಮಾರ್ಗಗಳನ್ನು ಮೇಲ್ದರ್ಜೆಗೇರಿಸಲು 690 ಕೋಟಿ ರೂ. ವೆಚ್ಚ ದಲ್ಲಿ ಸುಮಾರು 80 ಕಿ.ಮೀ. ಉದ್ದ ಆಯ್ದ 43 ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗು ತ್ತಿದೆ. ಕೇಂದ್ರ ವಾಣಿಜ್ಯ ವಲಯದಲ್ಲಿ 3ನೇ ಹಂತ ಟೆಂಡರ್‌ ಶ್ಯೂರ್‌ ಮಾದರಿಯ 25 ಕಿ.ಮೀ. ಉದ್ದದ 25 ಅಂತರ್‌ ಸಂಪರ್ಕ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು 250 ಕೋಟಿ ರೂ. ಒದಗಿಸುವುದಾಗಿ ತಿಳಿಸಿದೆ. 

ಇದರೊಂದಿಗೆ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಸಂಚಾರ ದಟ್ಟಣೆಯ 12 ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 150 ಕೋಟಿ ರೂ. ಮೀಸಲಿಡಲಾಗಿದೆ. 200 ಕಿ.ಮೀ. ಉದ್ದ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 200 ಕೋಟಿಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ. ನಗರದಲ್ಲಿ ತಡೆರಹಿತ ವಾಹನಗಳ ಸಂಚಾರ ಕ್ಕಾಗಿ ಆಯ್ದ 9 ವಾಹನ ದಟ್ಟಣೆ ಜಂಕ್ಷನ್‌ಗಳಲ್ಲಿ ಗ್ರೇಡ್‌ ಸಪರೇಟರ್‌ಗಳ ನಿರ್ಮಾಣಕ್ಕೆ 421 ಕೋಟಿ ರೂ ನೀಡಲಾಗಿದೆ.

ಜತೆಗೆ ವಾಹನಗಳ ತಡೆರಹಿತ ಚಾಲನೆಗೆ ಅನುವಾಗುವಂತೆ ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಕ್ಕಾಗಿ ಬಿಬಿಎಂಪಿಗೆ 150 ಕೋಟಿ ರೂ. ಅನುದಾನ ಒದಗಿಸುವ ಭರವಸೆ ನೀಡಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಬೃಹತ್‌ ಮಳೆ ನೀರುಗಾಲುವೆಗಳ ಅಭಿವೃದ್ಧಿಗಾಗಿ ಪ್ರಸಕ್ತ ಬಜೆಟ್‌ನಲ್ಲಿಯೂ 300 ಕೋಟಿ ರೂ.ಗಳನ್ನು ನೀಡುವುದು, ಸಂಚಾರ ನಿರ್ವಹಣೆಗಾಗಿ ರಸ್ತೆ ಉಬ್ಬುಗಳು, ಲೇನ್‌ ಮಾರ್ಕಿಂಗ್‌, ಸೈನೇಜ್‌, ಮೀಡಿಯನ್‌, ಜಂಕ್ಷನ್‌ ಅಭಿವೃದ್ಧಿ ಇತ್ಯಾದಿ ಸಂಚಾರಿ ಎಂಜಿನಿಯರಿಂಗ್‌ ಕಾಮಗಾರಿಗಳಿಗಾಗಿ 200 ಕೋಟಿ ರೂ. ನೀಡಲಾಗುವುದು. 

Advertisement

ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಅನುಕೂಲವಾಗುವಂತೆ ನಗರದ ವಿವಿಧ ಸ್ಥಳಗಳಲ್ಲಿ ಸೈವಾಕ್‌ಗಳನ್ನು ನಿರ್ಮಿಸುವುದು ಅಗತ್ಯವಾಗಿದೆ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಇವುಗಳನ್ನು ನಿರ್ಮಿಸುವುದನ್ನು ಉತ್ತೇಜಿಸಲು ಪಾಲಿಕೆಗೆ 80 ಕೋಟಿ ರೂ. ಹೊಂದಾಣಿಕೆ ವೆಚ್ಚವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ 50 ಕೋಟಿ ರೂ. ವೆಚ್ಚದಲ್ಲಿ 1000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದೆ. 

ಇದರೊಂದಿಗೆ ಜನಸಾಮಾನ್ಯರಿಗೆ ಊಟ ಮತ್ತು ಉಪಹಾರವನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಸಲುವಾಗಿ ಇಂದಿರಾ ಕ್ಯಾಂಟೀನ್‌ ಯೋಜನೆ ಪ್ರಾರಂಭಿಸಲಾಗುವುದು. ಈ ಯೋಜನೆಯಡಿ ಪಾಲಿಕೆಯ 198 ವಾರ್ಡ್‌ ಗಳಲ್ಲಿ ಒಂದರಂತೆ ಕ್ಯಾಂಟೀನ್‌ ತೆಗದು ಬೆಳಗಿನ ಉಪಹಾರವನ್ನು 5 ರೂಗಳಿಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ತಲಾ 10 ರೂ. ಗಳಂತೆ ವಿತರಿಸುವ ಉದ್ದೇಶವನ್ನು ಹೊಂದಿದ್ದು, ಇದಕ್ಕಾಗಿ ಸರ್ಕಾರ ಪಾಲಿಕೆಗೆ 100 ಕೋಟಿ ರೂ. ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next