Advertisement

ನಾಗರೀಕರಿಗೆ ಸಸಿ ವಿತರಿಸುವ “ಬಿಬಿಎಂಪಿ ಗ್ರೀನ್‌’ಆ್ಯಪ್‌ ಮೇ 21ಕ್ಕೆ

11:43 AM May 16, 2017 | Team Udayavani |

ಬೆಂಗಳೂರು: ನಗರವನ್ನು ಹಸಿರೀಕರಣಗೊಳಿಸುವಲ್ಲಿ ನಾಗರಿಕರನ್ನು ಪಾಲ್ಗೊಳ್ಳುವಂತೆ ಮಾಡಲು ಆನ್‌ಲೈನ್‌ ಮೂಲಕ ಗಿಡ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಿಬಿಎಂಪಿ ಮುಂದಾಗಿದೆ. ಅದರ ಹಿನ್ನೆಲೆಯಲ್ಲಿ ಮೇ 21ರಂದು ಗಿಡಗಳಿಗಾಗಿ ಮನವಿ ಸಲ್ಲಿಸುವ “ಬಿಬಿಎಂಪಿ ಗ್ರೀನ್‌’ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. 

Advertisement

ನಗರದಲ್ಲಿ 16 ಲಕ್ಷ ಗಿಡಗಳನ್ನು ನಡೆಲು ತೀರ್ಮಾನಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಗಿಡಗಳ ವಿತರಣೆಗಾಗಿ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಸಸಿಗಳನ್ನು ಬೆಳೆಯುವ ಸಲುವಾಗಿ ಪಾಲಿಕೆಯಿಂದ ಹೊಸದಾಗಿ 5 ನರ್ಸರಿ ಅಭಿವೃದ್ಧಿಪಡಿಸಲಾಗಿದೆ. ಅದರ ಜತೆಗೆ ಒಣಗಿದ ಮರ ಮತ್ತು ರೆಂಬೆಗಳಿಂದ ಯಾವುದೇ ಅಪಾಯ ಸಂಭಂವಿಸಿದಂತೆ ತಡೆಯಲು 21 ಮರ ನಿರ್ವಹಣಾ ತಂಡ ನೇಮಿಸಲಾಗಿದೆ.

ಒಂದೊಂದು ತಂಡದಲ್ಲೂ 8ರಿಂದ 10 ಸದಸ್ಯರಿರಲಿದ್ದಾರೆ. ಅವರು ತಮ್ಮ ವ್ಯಾಪ್ತಿಯಲ್ಲಿ ಯಾವ ಮರಗಳು ಮತ್ತು ರೆಂಬೆಗಳು ಒಣಗಿವೆ ಎಂಬುದನ್ನು ಗುರುತಿಸಲಿದ್ದು, ಬಿಬಿಎಂಪಿ ಅರಣ್ಯ ವಿಭಾಗದ ಅನುಮತಿ ಪಡೆದು ಅವುಗಳನ್ನು ತೆರವುಗೊಳಿಸಲಿದ್ದಾರೆ.  ಸಾರ್ವಜನಿಕರು ಬಿಬಿಎಂಪಿ ಗ್ರೀನ್‌ ಆ್ಯಪ್‌ನಲ್ಲಿ ಮೊದಲು ನೋಂದಣಿ ಮಾಡಿಕೊಂಡು ಅಗತ್ಯವಿರುವ ಸಸಿಗಳ ಜಾತಿ ಮತ್ತು ಪ್ರಮಾಣವನ್ನು ನಮೂದಿಸಬೇಕು.

ಆದಾದ ಬಳಿಕ ಯಾವ ಸ್ಥಳದಲ್ಲಿ ಗಿಡ ನೆಡಲಾಗುತ್ತದೆ ಮತ್ತು ಸಸಿ ಪಡೆಯುವವರ ವಾರ್ಡ್‌ ಯಾವುದು ಎಂಬ ಮಾಹಿತಿ ನೀಡಬೇಕಾಗುತ್ತದೆ. ಪಾಲಿಕೆಯಿಂದ ಸಸಿ ನೀಡಿದ ನಂತರ ಸಾರ್ವಜನಿಕರು ಸಸಿಯ ಬೆಳವಣಿಗೆಯ ಕುರಿತು ಫೋಟೋ ತೆಗೆದು ಕಳುಹಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next