Advertisement
ಸಹವರ್ತಿನ್ ಅನಿಮಲ್ ವೆಲ್ ಫೇರ್ ಟ್ರಸ್ಟ್ ಸೇರಿದಂತೆ ಮತ್ತಿತರರ ಸಂಘ ಸಂಸ್ಥೆಗಳ ಜತೆಗೂಡಿ ಪಾಲಿಕೆ ಪಶುಸಂಗೋಪನೆ ವಿಭಾಗವು ಈ ಉತ್ಸವ ಆಯೋಜಿಸುತ್ತಿದೆ. ಪಾಲಿಕೆ ಎಂಟೂ ವಲಯಗಳ ಪ್ರತಿ ವಾರ್ಡ್‌ಗಳಲ್ಲಿ ಸಹಬಾಳ್ವೆಯ ಚಾಂಪಿಯನ್ ಗಳನ್ನು ಸಕ್ರಿಯಗೊಳಿಸುವ ನಿರ್ಧಾರವನ್ನು ಮಾಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
Related Articles
Advertisement
ಪ್ರತಿ ವಾರ್ಡ್‌ನಲ್ಲಿಯೂ ಆರೈಕೆದಾರರೊಂದಿಗೆ ರೆಸ್ಟೋರೆಂಟ್‌ಗಳನ್ನು ಸಂಪರ್ಕಿಸುವ ಮೂಲಕ ಉಳಿದ ಆಹಾರವನ್ನು ಸದುಪಯೋಗಿಸುವ ನಿರ್ಧಾರ ಪಾಲಿಕೆ ನಿರ್ಧರಿಸಿದೆ. ಈ ರೀತಿಯಲ್ಲಿ ನಾಯಿಗಳಿಗೆ ನಿರಂತರ ವಾಗಿ ಪ್ರತಿದಿನ ಒಂದು ಬಾರಿ ಆಹಾರವನ್ನು ನೀಡುವ ಕೆಲಸ ನಡೆಯಲಿದೆ ಎಂದಿದ್ದಾರೆ.
ನಾಯಿ ಉತ್ಸವ ಏಕೆ?:
ನಗರದಲ್ಲಿ ಸುಮಾರು 2.8 ಲಕ್ಷ ಬೀದಿ ನಾಯಿಗಳಿವೆ. ಮಾನವ-ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿಯ ಪಶು ಸಂಗೋಪನಾ ವಿಭಾಗವು ಈ ಉತ್ಸವವನ್ನು ಆಯೋಜಿಸುತ್ತಿದೆ. ಸಮಾಜದಲ್ಲಿ ನಾಯಿಗಳ ಬಗ್ಗೆ ನಕಾರಾತ್ಮಕ ಭಾವನೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಹಾಗೂ ನಾಯಿಗಳ ಜೊತೆಗೆ ಭಾವನಾತ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ “ನಾಯಿಗಳಿಗಾಗಿ ಉತ್ಸವ’ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ಏನೇನು ಇರಲಿದೆ?:
ಉತ್ಸವ ದಿನದಂದು ಪಾಲಿಕೆಯ ಆಯಾ ವಾರ್ಡ್‌ನ ರೆಸ್ಟೋರೆಂಟ್‌ಗಳ ಸಹಯೋಗದೊಂದಿಗೆ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಪ್ರಾಯೋಗಿಕವಾಗಿ 4 ವಾರ್ಡ್‌ಗಳಲ್ಲಿ ಪೌರಕಾರ್ಮಿಕರ ಸಹಕಾರದೊಂದಿಗೆ ಆಹಾರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ನಲ್ಲೂ ಆರೈಕೆದಾರರೊಂದಿಗೆ ರೆಸ್ಟೋರೆಂಟ್‌ಗಳನ್ನು ಸಂಪರ್ಕಿಸುವ ಮೂಲಕ ಉಳಿದ ಆಹಾರವನ್ನು ಸದುಪಯೋಗ ಪಡಿಸಿಕೊಳ್ಳಲು ನಾಯಿಗಳಿಗೆ ನೀಡಲಾಗುತ್ತದೆ. ಈ ರೀತಿಯಲ್ಲಿ ನಾಯಿಗಳಿಗೆ ನಿರಂತರವಾಗಿ ಪ್ರತಿದಿನ ಒಂದು ಬಾರಿ ಆಹಾರ ಪೂರೈಸಲು ಚಿಂತಿಸಲಾಗಿದೆ. ಜೊತೆಗೆ ಕಾರ್ಯಕ್ರಮದಲ್ಲಿ ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಪ್ರಾಣಿ ಪಾಲಕರು ಹಂಚಿಕೊಳ್ಳಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.