Advertisement

ಬಿಬಿಎಂಪಿ: ಕಸ ಗುಡಿಸುವ ಯಂತ್ರ ಟೆಂಡರ್‌ ರದ್ದು

06:43 AM May 19, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕಸಗುಡಿಸಲು ಯಾಂತ್ರಿಕ ವಾಹನ ಖರೀದಿಗೆ ಸಂಬಂಧಿಸಿದಂತೆ ಬಿಬಿಎಂಪಿ ಕೌನ್ಸಿಲ್‌ನಲ್ಲಿ ಅನುಮೋದನೆ ನೀಡಿದ್ದ ಟೆಂಡರ್‌ಗೆ ರಾಜ್ಯ ಸರ್ಕಾರ ತಡೆ ನೀಡಿದ್ದು, ಮರು ಟೆಂಡರ್‌ ಕರೆಯಲು ಸೂಚಿಸಿದೆ.  ಕಸ  ಗುಡಿಸುವ ಯಂತ್ರ ಖರೀದಿಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‌ಗೆ ಜನವರಿಯಲ್ಲಿ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿತ್ತು.

Advertisement

ಆದರೆ, ಇದರಲ್ಲಿನ ಲೋಪದ ಬಗ್ಗೆ ನಗರಾಭಿವೃದಿಟಛಿ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೌನ್ಸಿಲ್‌ ನಿರ್ಣಯವನ್ನು ರದ್ದುಪಡಿಸಿದ್ದು, ಮರು ಟೆಂಡರ್‌ ಕರೆಯಲು  ಸೂಚನೆ ನೀಡಿದೆ. ನಗರದಲ್ಲಿನ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಲ್ಲಿ ಕಸ ಗುಡಿಸಲು 17 ಹೊಸ ಯಂತ್ರಗಳನ್ನು ಖರೀದಿಸಲಾಗಿತ್ತು. ಆ ವಾಹನಗಳನ್ನು ಪೂರೈಸಿರುವ ಗುತ್ತಿಗೆದಾರರೇ ಅದನ್ನು ನಿರ್ವಹಣೆ  ಮಾಡಬೇಕು ಮತ್ತು ರಸ್ತೆ ಗುಡಿಸಲು ಸಿಬ್ಬಂದಿ ನಿಯೋಜಿಸಬೇಕು ಎಂದು ನಿಗದಿ ಮಾಡಲಾಗಿತ್ತು. ಇದಕ್ಕೆ ಬದಲಾಗಿ ಬಿಬಿಎಂಪಿ ಪ್ರತಿ ಕಿ.ಮೀ. ಕಸಗುಡಿಸಲು 600 ರೂ.  ನೀಡುವ ಬಗ್ಗೆಯೂ ಕೌನ್ಸಿಲ್‌ ನಲ್ಲಿ ಅನುಮೋದನೆ ಪಡೆಯಲಾಗಿದೆ.

ಈ ಪ್ರಕ್ರಿಯೆ ಕಾನೂನು ಬಾಹಿರ ಎಂದು ನಗರಾಭಿವೃದಿ ಇಲಾಖೆ ಅಭಿಪ್ರಾಯಪಟ್ಟಿದೆ. ಪ್ರತಿದಿನ 65 ಕಿ.ಮೀ. ರಸ್ತೆ ಗುಡಿಸಬೇಕು ಎಂಬ ದೂರವನ್ನು 40 ಕಿ.ಮೀ.ಗೆ  ಇಳಿಸಲಾಗಿದೆ. ಅಲ್ಲದೆ, ರಸ್ತೆ ಗುಡಿಸಲು ನಿಗದಿ ಮಾಡಿರುವ ದರದಲ್ಲೂ ಬದಲಾವಣೆ ಮಾಡಲಾಗಿದ್ದು, ಈ ಹಿಂದೆ ಇದ್ದಂತಹ ದರಕ್ಕಿಂತ ಹೆಚ್ಚಿಸಲಾಗಿದೆ. ಇದರಿಂದ ಕೆಟಿಟಿಪಿ ಕಾಯ್ದೆ ಸ್ಪಷ್ಟ ಉಲ್ಲಂಘನೆ ಎಂದು ಆದೇಶದಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next