Advertisement

ಬಿಬಿಎಂಪಿ ಬಜೆಟ್‌: ಲಾಕ್‌ಡೌನ್‌ನಲ್ಲೂ “ಅಭಿವೃದ್ಧಿ’ಜಪ!

12:46 AM Apr 21, 2020 | Sriram |

ಬೆಂಗಳೂರು: ದಿಲ್ಲಿ ಮಾದರಿಯಲ್ಲಿ ಮಾಸಿಕ ಹತ್ತು ಸಾವಿರ ಲೀ.ವರೆಗೆ ಉಚಿತ ಕಾವೇರಿ ನೀರು ಮತ್ತು ಸ್ಮಾರ್ಟ್‌ ಶಿಕ್ಷಣ, ಪ್ರತಿ ವಾರ್ಡ್‌ನಲ್ಲಿಯ ಬಡ ವಿದ್ಯಾರ್ಥಿಗಳಿಗೆ ತಲಾ 15 ಲ್ಯಾಪ್‌ಟಾಪ್‌ಗ್ಳ ವಿತರಣೆ, ಕೋವಿಡ್‌-19 ನಿಯಂತ್ರಣಕ್ಕೆ 49.50 ಕೋಟಿ ರೂ. ಅನುದಾನ, ಪಾಲಿಕೆ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್‌ ಸೇವೆ, ನೂರು ಕನ್ನಡಪರ ಹೋರಾಟಗಾರರು ಮತ್ತು ಅಶಕ್ತ ಕನ್ನಡ ಕಲಾವಿದರಿಗೆ ಲಕ್ಷ ರೂ. ಆರ್ಥಿಕ ನೆರವಿನ ಹೊಸ ಬೆಳಕು’…

Advertisement

– ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ವೀಡಿಯೊ ಕಾನ್ಫರೆನ್ಸ್‌ ಮೂಲಕ ಮಂಡಿಸಿದ 2020-21ನೇ ಸಾಲಿನ ಬಜೆಟ್‌ನಲ್ಲಿ ನೀಡಿದ ಕೊಡುಗೆಗಳಿವು. ಒಂದೆಡೆ ಆರೋಗ್ಯ ತುರ್ತು ಪರಿಸ್ಥಿತಿ ಮತ್ತೂಂದೆಡೆ ಆರ್ಥಿಕ ಸಂಕಷ್ಟದ ನಡುವೆಯೂ ಪಾಲಿಕೆ 10,895.84 ಕೋಟಿ ರೂ.ಗಳ ಬಜೆಟ್‌ ಮಂಡಿಸಿದೆ. ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಿ, ಕೌಶಲ ಮತ್ತು ಮೌಲ್ಯಗಳನ್ನು ಹೆಚ್ಚಿಸಲು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸ್ಮಾರ್ಟ್‌ ತರಗತಿ ನಡೆಸಲು ಏಳು ಕೋಟಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next