Advertisement
ಬೆಂಗಳೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಎಲ್ಲ ಘನತ್ಯಾಾಜ್ಯ ಸಂಗ್ರಹ, ಸಾಗಾಣಿಕೆ ಹಾಗೂ ಕಸ ವಿಲೇವಾರಿಗೆ ಸರ್ಕಾರಿ ಸ್ವಾಾಮ್ಯದ ‘ಬೆಂಗಳೂರು ಘನತ್ಯಾಾಜ್ಯ ನಿರ್ವಹಣೆ ಲಿ. ಕಂಪನಿ’ಸ್ಥಾಪನೆ ಆಗಲಿದೆ. ಆದರೆ, ಕಂಪನಿ ರಚನೆ ಮಾಡುವ ಸಂಬಂಧ ಸರ್ಕಾರದ ಆದೇಶದಲ್ಲಿ ನಗರದ ಸ್ವಚ್ಛತೆ ಜವಾಬ್ದಾಾರಿಯ ಬಗ್ಗೆ ವಿವರಣೆ ನೀಡಿಲ್ಲ. ಕಸ ಸಂಗ್ರಹ ಮತ್ತು ಸಂಸ್ಕರಣೆಯನ್ನು ಕಂಪನಿಗೆ ನೀಡುವುದಾಗಿ ಉಲ್ಲೇಖಿಸಿದೆ.
Related Articles
Advertisement
ಸಗಟು ತ್ಯಾಾಜ್ಯ ಉತ್ಪಾಾದಕರ ಬಗ್ಗೆ ಗೊಂದಲ:
ನಗರದಲ್ಲಿ ಕಸ ಸಂಗ್ರಹವನ್ನು ಒಣ ಹಾಗೂ ಹಸಿಕಸದ ಮಾದರಿಯಲ್ಲಿ ಸಂಗ್ರಹಿಸುವ ರೀತಿಯೇ ಪಾಲಿಕೆ ಮನೆ -ಮನೆ ಕಸ ಸಂಗ್ರಹ ಮತ್ತು ಸಗಟು ತ್ಯಾಜ್ಯ ಉತ್ಪಾದಕರಿಂದ ಸಂಗ್ರಹ ಎಂದು ಎರಡು ವಿಭಾಗವಾಗಿ ವಿಂಗಡಿಸಿಕೊಂಡಿದೆ. ಸಗಟು ತ್ಯಾಜ್ಯ ಉತ್ಪಾಾದಕರ ಸರ್ವೇ ಹಲವು ವರ್ಷಗಳಿಂದ ಆಗಿಲ್ಲ. ಇದರ ಪರಿಶೀಲನೆ ಮತ್ತು ಪರವಾನಗಿ ಅಧಿಕಾರ ಪಾಲಿಕೆಯ ಆರೋಗ್ಯ ವಿಭಾಗಕ್ಕೆ ನೀಡಲಾಗಿದೆ. ಹೀಗಾಗಿ, ಕಂಪನಿ ಮತ್ತು ಪಾಲಿಕೆ ನಡುವೆ ಕಸ ಸಂಗ್ರಹ ಹಾಗೂ ವಿಲೇವಾರಿ ಜವಾಬ್ದಾಾರಿಗೆ ಹಲವು ಹಂತದ ಸಭೆ ಮತ್ತು ಪರಿಷ್ಕರಣೆ ಆಗಬೇಕಿದೆ.
ಸಮನ್ವಯತೆ ಸವಾಲು: ಸರ್ಕಾರ ಕಂಪನಿಯನ್ನು ಪ್ರತ್ಯೇಕ ಮಂಡಳಿ ಮಾದರಿಯಲ್ಲಿ ರಚನೆ ಮಾಡಿಲ್ಲ. ಇದರಿಂದ ಅಧಿಕಾರ ಹಂಚಿಕೆಯಲ್ಲೂ ಗೊಂದಲ ಸೃಷ್ಟಿ ಸಾಧ್ಯತೆ ಇದೆ. ಇಲ್ಲಿಯವರೆಗೆ ಪಾಲಿಕೆಯ ಒಟ್ಟಾಾರೆ ಕಸ ನಿರ್ವಹಣೆಯ ಬಗ್ಗೆ ಪಾಲಿಕೆಯ ಘನತ್ಯಾಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರು ಪಾಲಿಕೆಯ ಆಯುಕ್ತರಿಗೆ ವರದಿ ಮಾಡಿಕೊಳ್ಳುತ್ತಿದ್ದರು. ಆದರೆ, ಇನ್ನು ಮುಂದೆ ಹಲವರಿಗೆ ವರದಿ ನೀಡಬೇಕು ಮತ್ತು ಒಂದು ನಿರ್ದಿಷ್ಟ ನಿರ್ಧಾರಕ್ಕೆ ಹಲವು ಹಂತದಲ್ಲಿ ಒಪ್ಪಿಗೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ.
ಮಧ್ಯವರ್ತಿಗಳಿಗೆ ಕಡಿವಾಣ:
ಕಂಪನಿ ರಚನೆ ಮಾಡುವುದರಿಂದ ಮೋಸದಾಟಕ್ಕೆ ಕಡಿವಾಣ ಬೀಳಲಿದೆ. ಅಲ್ಲದೆ, ಆಟೋಟಿಪ್ಪರ್ ಮತ್ತು ಕಾಂಪ್ಯಾಾಕ್ಟರ್‌ಗಳಿಗೆ ಜಿಪಿಎಸ್ ಅಳವಡಿಕೆ, ಮಧ್ಯವರ್ತಿಗಳಿಂದ ಮುಕ್ತಿ ಹಾಗೂ ಕಸದ ವಿಚಾರದಲ್ಲಿ ಪರಾದರ್ಶಕತೆ ಸಾಧ್ಯವಾಗಲಿದೆ. ಗುತ್ತಿಿಗೆದಾರರಿಗೆ ಸಕಾಲದಲ್ಲಿ ಬಿಲ್ ಬಿಡುಗಡೆ ಸಹ ಆಗಲಿದೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ತಿಳಿಯುವುದಿಲ್ಲ ಎನ್ನುವಂತೆ ಕಸ ಗುತ್ತಿಗೆಯಲ್ಲಿ ಕೆಲವು ಪ್ರಭಾವಿಗಳೇ ಇದ್ದಾಾರೆ. ನೇರವಾಗಿ ಮೂರನೇ ಹಂತದಲ್ಲಿ ಕಂಪನಿ ರಚನೆ ಆಗುತ್ತಿರುವುದರಿಂದ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಕಸ ಸಂಗ್ರಹ ಹಾಗೂ ವಿಲೇವಾರಿಗೆ ಕಡ್ಡಾಾಯ ಜಿಪಿಎಸ್ ಹಾಗೂ ಪರವಾನಗಿ ಪರಿಶೀಲನೆಯಲ್ಲಿ ಸುಧಾರಣೆ ಸಾಧ್ಯವಾಗಲಿದೆ.
ಕಸ ಕಂಪನಿ ಅಧಿಕಾರ ಹಂಚಿಕೆ ಸರ್ಕಾರದ ಆದೇಶ ಕಂಪನಿ ಅಧ್ಯಕ್ಷರಾಗಿ ನಗರಾಭಿವೃದ್ಧಿಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ. ಬಿಬಿಎಂಪಿ ಆಯುಕ್ತರು ಸಹ ಅಧ್ಯಕ್ಷರಾಗಿರಲಿದ್ದಾಾರೆ. ನಿಗದಿತ ಅರ್ಹತೆ ಹೊಂದಿರುವ ಅಧಿಕಾರಿಯನ್ನು ಆಡಳಿತ ಮಂಡಳಿಯು ಸಂಸ್ಥೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯನ್ನಾಾಗಿ ನೇಮಕವಾಗಲಿದ್ದಾಾರೆ. ಬಿಬಿಎಂಪಿಯಿಂದ ಘನತ್ಯಾಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಮತ್ತು ಜಂಟಿ ಆಯುಕ್ತರು ಪದನಿಮಿತ್ತ ನಿರ್ದೇಶಕರಾಗಿರುತ್ತಾರೆ. ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರಾಗಿ ಘನತ್ಯಾಜ್ಯ ನಿರ್ವಹಣೆಯಲ್ಲಿ ನುರಿತ ಇಬ್ಬರು ತಜ್ಞರು ಹಾಗೂ ಪರಿಸರ ಇಲಾಖೆ ಕಾರ್ಯದರ್ಶಿ, ಆರ್ಥಿಕ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಪ್ರಾಾದೇಶಿಕ ಆಯುಕ್ತರು ಪದನಿಮಿತ್ತ ನಿರ್ದೇಶಕರಾಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕಂಪನಿಗೆ ಪ್ರತ್ಯೇಕವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇರಲಿದ್ದಾಾರೆ.
ಕಟ್ಟುನಿಟ್ಟಾಾಗಿ ಜಾರಿಯಾದರೆ ದಶಕಗಳ ಸಮಸ್ಯೆ ಮುಕ್ತಿ: ಕೆಲವು ನಿರ್ದಿಷ್ಟ ಸವಾಲುಗಳ ಹೊರತಾಗಿಯೂ ಕಂಪನಿ ಮತ್ತು ಪಾಲಿಕೆಗೆ ಸಮಾನವಾಗಿ ಜವಾಬ್ದಾಾರಿ ಹಂಚಿಕೆ ಮಾಡಿದರೆ, ನಗರದಲ್ಲಿ ದಶಕಗಳಿಗೂ ಹೆಚ್ಚು ಕಾಲದಿಂದ ಸಮಸ್ಯೆೆ ಆಗಿ ಉಳಿದಿರುವ ಕಸ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಲ್ಲದೆ, ಮಹತ್ವದ ನಿರ್ಣಯಗಳು ಕೌನ್ಸಿಿಲ್‌ನಿಂದ ದೂರ ಉಳಿಯಲಿದ್ದು, ಸರ್ಕಾರದ ಹಂತದಲ್ಲಿ ಯಾವುದೇ ಆಕ್ಷೇಪಣೆ ಇಲ್ಲದೆ ನಿರ್ಣಯವಾಗುವ ಸಾಧ್ಯತೆಯೂ ಇದೆ.
ಕಸದ ನಿರ್ವಹಣೆ ಅಧಿಕಾರ ಹಂಚಿಕೆ (ನಿರೀಕ್ಷಿತ) ಪಾಲಿಕೆ :
– ನಗರದ ರಸ್ತೆಗಳ ಸ್ವಚ್ಛತೆ ಮತ್ತು ಕಸ ಗುಡಿಸುವ ಯಂತ್ರಗಳ ನಿರ್ವಹಣೆ.
– ಪೌರಕಾರ್ಮಿಕರ ವೇತನ ಹಾಗೂ ಜವಾಬ್ದಾರಿ
– ಸಿ ಮತ್ತು ಡಿ ತ್ಯಾಜ್ಯ (ಕಟ್ಟಡ ಮತ್ತು ಕಾಮಗಾರಿ ವೇಳೆ ಉತ್ಪತ್ತಿ ಆಗುವ ತ್ಯಾಾಜ್ಯ).
– ನಗರದ ಎಲ್ಲ ಶೌಚಾಲಯಗಳ ನಿರ್ವಹಣೆ.
ಕಂಪನಿ :
ಬಯೋಮೆಡಿಕಲ್ ತ್ಯಾಜ್ಯ, ಸಾರ್ವಜನಿಕ ಶೌಚಾಲಯ ತ್ಯಾಜ್ಯ ಹೊರತುಪಡಿಸಿ, ಎಲ್ಲ ಪ್ರಕಾರದ ಘನತ್ಯಾಜ್ಯ ಸಂಗ್ರಹಣೆ, ವಿಂಗಡಣೆ, ಸಾಗಣೆ, ವ್ಯಾಪಾರ, ಸಂಸ್ಕರಣೆ, ಗೊಬ್ಬರ ತಯಾರಿಕೆ, ಮರುಬಳಕೆ ಮತ್ತು ವಿಲೇವಾರಿಯ ವ್ಯವಸ್ಥೆ ನಿರ್ವಹಿಸಲಿದೆ.
ಕಂಪನಿ ರಚನೆ ಮತ್ತು ಅಧಿಕಾರ ಹಂಚಿಕೆಯ ಬಗ್ಗೆ ಪೂರ್ಣ ಪ್ರಮಾಣದ ಮಾರ್ಗಸೂಚಿ ಸರ್ಕಾರದಿಂದ ಇನ್ನಷ್ಟೇ ಬರಬೇಕಿದ್ದು, ಬಂದ ಮೇಲೆ ಕ್ರಮ ವಹಿಸಲಾಗುವುದು. ಅಲ್ಲಿಯವರೆಗೆ ಪಾಲಿಕೆಯೇ ಸಂಪೂರ್ಣ ಕಸ ಸಂಗ್ರಹ ಹಾಗೂ ವಿಲೇವಾರಿ ಮಾಡಲಿದೆ. -ಡಿ.ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)