Advertisement

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

06:43 AM Dec 22, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 13ನೇ ವಾರ‌ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿರುವವರ ಹೃದಯದಲ್ಲಿ ಢವ ಢವ ಶುರುವಾಗಿದೆ.

Advertisement

ಕಳೆದ ವಾರ ಫಿನಾಲೆಗೆ ಅರ್ಹವಾಗಿದ್ದ ಸ್ಪರ್ಧಿಯೆಂದೇ ಹೇಳಲಾಗುತ್ತಿದ್ದ ಶಿಶಿರ್ ಅವರು ದೊಡ್ಮನೆಯಿಂದ ಎಲಿಮಿನೇಷನ್ ಆಗಿದ್ದರು. ಗೋಲ್ಡ್ ಸುರೇಶ್ ಅವರು ವೈಯಕ್ತಿಕ ಕಾರಣದಿಂದ ಮನೆ ಬಿಟ್ಟು ಆಚೆ ಬಂದಿದ್ದರು.

ಈ ವಾರ ಎರಡು ತಂಡಗಳಾಗಿ ಟಾಸ್ಕ್ ಗಳು ರಚನೆ ಆಗಿತ್ತು. ಅದರ ಪ್ರಕಾರ ಗೆದ್ದ ತಂಡ ಎದುರಾಳಿ ತಂಡದ ಸದಸ್ಯರನ್ನು ಮಾತ್ರ ನಾಮಿನೇಟ್ ಮಾಡುವ ಅಧಿಕಾರವನ್ನು ಪಡೆದುಕೊಂಡಿತ್ತು. ಅದರ ಅಂಗವಾಗಿ ಆರಂಭಿಕ ಟಾಸ್ಕ್ ಗಳಲ್ಲಿ ತ್ರಿವಿಕ್ರಮ್ ಅವರ ತಂಡ ಗೆದ್ದಿತ್ತು. ನಂತರ ಅಂತಿಮ ಟಾಸ್ಕ್ ನಲ್ಲಿ ರಜತ್ ಅವರ ತಂಡ ಮೇಲುಗೈ ಸಾಧಿಸಿತು.

ಟಾಸ್ಕ್ ಗೆದ್ದು ಎದುರಾಳಿ ತಂಡ ರಜತ್, ಮೋಕ್ಷಿತಾ ಹಾಗೂ ಹನುಮಂತ ಅವರನ್ನು ನಾಮಿನೇಟ್ ಮಾಡಿದೆ. ತ್ರಿವಿಕ್ರಮ್ ಅವರು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದಾರೆ. ಭವ್ಯ ಅವರು ಐಶ್ವರ್ಯಾ ಅವರನ್ನು ‌ನೇರವಾಗಿ ನಾಮಿನೇಟ್ ಮಾಡಿದ್ದಾರೆ.

Advertisement

ಈ ನಾಲ್ವರು ಪೈಕಿ ಒಬ್ಬರನ್ನು ಬಿಗ್ ಬಾಸ್ ಈ ವಾರ ಆಚೆ ಕಳುಹಿಸಲಿದ್ದಾರೆ ಅವರು ಯಾರಾಗಿರಬಹುದೆಂದು ವೀಕ್ಷಕರು ಊಹಿಸುತ್ತಿದ್ದಾರೆ.

ದೊಡ್ಡ ಸ್ಪರ್ಧಿಯೇ ಮನೆಯಿಂದ ಔಟ್!

ಟಾಸ್ಕ್ ವೊಂದರಲ್ಲಿ ತಂಡದ ಕ್ಯಾಪ್ಟನ್ ಆಗಿದ್ದ ತ್ರಿವಿಕ್ರಮ್ ಅವರು ಟಾಸ್ಕ್ ಸೋತ ಕಾರಣದಿಂದ ತಮ್ಮನ್ನು ತಾವೇ ನಾಮಿನೇಟ್ ‌ಮಾಡಿಕೊಂಡಿದ್ದರು. ಇದೀಗ ಈ ರೀತಿ ‌ಮಾಡಿದರೆ ಏನಾಗುತ್ತದೆ ಎನ್ನುವ ಚಮಕನ್ನು ತ್ರಿವಿಕ್ರಮ್ ಅವರಿಗೆ ಬಿಗ್ ಬಾಸ್ ನೀಡಲಿದ್ದಾರೆ ಎನ್ನಲಾಗಿದೆ.

ತ್ರಿವಿಕ್ರಮ್ ಹಾಗೂ ಐಶ್ವರ್ಯಾ ಅವರು ಬಾಟಮ್ 2 ಗೆ ಬರಲಿದ್ದು ಇದರಲ್ಲಿ ತ್ರಿವಿಕ್ರಮ್ ಅವರನ್ನು ಎಲಿಮಿನೇಟ್ ಆಗಿದ್ದೀರಿ ಎಂದು ಬಿಗ್ ಬಾಸ್ ಭಯ ಹುಟ್ಟಿಸುವ ನಿಟ್ಟಿನಲ್ಲಿ ಪ್ರ್ಯಾಂಕ್ ಮಾಡಲಿದ್ದಾರೆ ಎನ್ನಲಾಗಿದೆ.

ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿರುವ ತ್ರಿವಿಕ್ರಮ್ ಅವರಿಗೆ ಶಾಕ್ ನೀಡುವ ‌ನಿಟ್ಟಿನಲ್ಲಿ ಬಿಗ್ ಬಾಸ್ ಈ ವಾರ ಪ್ರ್ಯಾಂಕ್ ಎಲಿಮಿನೇಷನ್ ಮಾಡಲಿದ್ದಾರೆ ಎನ್ನಲಾಗಿದೆ.

ನಾಲ್ಕನೇ ಪ್ರ್ಯಾಂಕ್ ಎಲಿಮಿನೇಷನ್: ಈ ರೀತಿ ಪ್ರ್ಯಾಂಕ್ ಆಗಿ ಎಲಿಮಿನೇಷನ್ ಮಾಡುತ್ತಿರುವುದು ಈ ಸೀಸನ್ ನಲ್ಲಿ ಇದು ನಾಲ್ಕನೇ ಬಾರಿ. ಈ ಹಿಂದೆ ರಂಜಿತ್- ತ್ರಿವಿಕ್ರಮ್, ಭವ್ಯ, ಚೈತ್ರಾ ಅವರಿಗೆ ಇದೇ ರೀತಿ ಎಲಿಮಿನೇಷನ್ ಪ್ರ್ಯಾಂಕ್ ಮಾಡಲಾಗಿತ್ತು.

ಈ ವಾರ ದೊಡ್ಮನೆಯಲ್ಲಿ ಯಾವುದೇ ಎಲಿಮಿನೇಷನ್ ಇಲ್ಲವೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next