ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ವೀಕೆಂಡ್ ಪಂಚಾಯ್ತಿನಲ್ಲಿ ಈ ವಾರದಲ್ಲಿ ನಡೆದ ಹಲವು ವಿಚಾರಗಳ ಬಗ್ಗೆ ಸುದೀಪ್ ಸ್ಪರ್ಧಿಗಳೊಂದಿಗೆ ಮಾತನಾಡಿದ್ದಾರೆ.
ಜೈಲು ಶಿಕ್ಷೆಯಲ್ಲಿರುವ ಧನರಾಜ್ ಹಣ್ಣು- ಹಂಪಲುಗಳನ್ನು ತಿಂದಿದ್ದು, ಇದರಿಂದಾಗಿ ಮನೆಯ ಮೂಲ ನಿಯಮವೇ ಉಲ್ಲಂಘನೆ ಆಗಿದೆ. ಪರಿಣಾಮ ಮನೆಗಳಿಸಿದ್ದ ಲಕ್ಷುರಿ ಸಾಮಾಗ್ರಿಗಳನ್ನು ಬಿಗ್ ಬಾಸ್ ಹಿಂದಕ್ಕೆ ತೆಗೆದುಕೊಂಡಿದ್ದಾರೆ.
ಧನರಾಜ್ ಹಣ್ಣುಗಳನ್ನು ತಿಂದಿದ್ದು, ನಿಯಮದ ಪ್ರಕಾರ ತರಕಾರಿ ಕತ್ತರಿಸುವುದನ್ನು ಜೈಲುವಾಸಿಗಳು ಜವಬ್ದಾರಿ ಆಗಿರುತ್ತದೆ. ಆದರೆ ಮಂಜು ಅವರು ತರಕಾರಿಯನ್ನು ಕತ್ತರಿಸಿದ್ದಾರೆ ಇದರಿಂದ ನಿಯಮದ ಉಲ್ಲಂಘನೆ ಆಗಿದೆ.
ಹನುಮಂತು ಅವರ ಕ್ಯಾಪ್ಟನ್ಸಿ ಬಗ್ಗೆ ಸ್ಪರ್ಧಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರ ಕ್ಯಾಪ್ಟನ್ಸಿಯಲ್ಲಿ ಯಾವುದೇ ತಪ್ಪು ನಿರ್ಧಾರಗಳು ಅಥವಾ ಫೇವರಿಸಮ್ ಇರಲಿಲ್ಲ. ಒಂದು ರೀತಿ ಆಶ್ಚರ್ಯಕರವಾಗಿತ್ತು ಎಂದು ಚೈತ್ರಾ ಹೇಳಿದ್ದಾರೆ.
ಹನುಮಂತುಗೆ ಗೋಲ್ಡ್ ಚೈನ್ ಕೊಟ್ಟ ಸುರೇಶ್..
ಸುರೇಶ್ ಅವರು ತಮ್ಮ ಗೋಲ್ಡ್ ಚೈನ್ವೊಂದನ್ನು ತೆಗೆದು ಹನುಮಂತು ಅವರಿಗೆ ಹಾಕಿದ್ದಾರೆ. ಕಿಚ್ಚ ಅವರ ಮಾತಿಗೆ ಗೌರವ ಕೊಟ್ಟು ಹನುಮಂತು ಅವರಿಗೆ ಗೋಲ್ಡ್ ಚೈನ್ ಹಾಕಿದ್ದಾರೆ. ಇದನ್ನು ವಾಪಸ್ ಕೇಳುವಂತಿಲ್ಲ ಎಂದು ಕಿಚ್ಚ ಹೇಳಿದ್ದಾರೆ. ಹನುಮಂತು ಸುರೇಶ್ ಅವರು ಖುಷಿಯಿಂದ ಇದನ್ನು ಕೊಟ್ಟಿಲ್ಲ ಎಂದು ಸುರೇಶ್ ಅವರಿಗೆ ಮತ್ತೆ ಚೈನ್ ವಾಪಾಸ್ ಕೊಟ್ಟಿದ್ದಾರೆ. ಮದುವೆಗೆ ಬಂದು ಕೊಡೋದು ಬೇಡ ಇಲ್ಲಿ ಚೈನ್ ಕೊಡಿ ಎಂದು ಹನುಮಂತು ಅವರು ತಮಾಷೆ ಮಾಡಿದ್ದಾರೆ.
ನೀವು ಆವತ್ತು ಹೇಳಿದ ಮಾತಿನಿಂದ ನಾನು ಖಡ್ಗ ಹಾಕಿಲ್ಲ. ಹಾಗಾಗಿ ನಾನು ಇಲ್ಲಿಂದ ಹೊರಗೆ ಹೋದ ಮೇಲೆ ಅದನ್ನು ಮಾರಿ ಬಡವರಿಗೆ ಅದರಿಂದ ಬರುವ ಹಣದಿಂದ ಸಹಾಯ ಮಾಡುತ್ತೇನೆ ಎಂದು ಸುರೇಶ್ ಹೇಳಿದ್ದಾರೆ. ಇದಕ್ಕೆ ಕಿಚ್ಚ ಕಷ್ಟಪಟ್ಟು ನಿಮ್ಮದೇ ಹಣದಿಂದ ಮಾಡಿಕೊಂಡಿದ್ದೀರಿ ಅದನ್ನು ನೀವು ಹಾಕಿಕೊಳ್ಳಿ. ನಮ್ಮ ಹತ್ರ ಯಾವುದು ಹೆಚ್ಚಿರುತ್ತದೆ ನೋಡಿ ಅದರಿಂದ ಸಹಾಯ ಮಾಡಿ ಎಂದು ಹೇಳಿದ್ದಾರೆ.
ಹನುಮಂತು ಮುಗ್ಧ ಅಲ್ಲವೆಂದ ಮನೆಮಂದಿ.. ಕಿಚ್ಚ ಅವರು ಒಂದೊಂದು ಕಾರ್ಡ್ ಹಿಡಿದು ಇದಕ್ಕೆ ಯಾರು ಸೂಕ್ತವೆಂದು ಅಭಿಪ್ರಾಯವನ್ನು ಹೇಳಿದ್ದಾರೆ. ಇದಕ್ಕೆ ಒಬೊಬ್ಬರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
“ಹನುಮಂತ ಮುಗ್ಧರಾಗೆ ಕಾಣಿಸುತ್ತಾರೆ ಆದ್ರೆ ಅವರು ಹಾಗೆ ಇಲ್ಲ. ಅವರಿಗೆ ಮೈಂಡ್ ಗೇಮ್ ಹೇಗೆ ಆಡೋದು ಅಂಥ ಚೆನ್ನಾಗಿ ಗೊತ್ತಿದೆ ಎಂದು ಮೋಕ್ಷಿತಾ ಹೇಳಿದ್ದಾರೆ.
ಅವನ ಮುಖ ಮಾತ್ರ ಮುಗ್ಧನಂತೆ ಕಾಣುತ್ತದೆ ಆದರೆ ಅವನು ವೆರಿ ಕ್ಲೇವರ್ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಎಲ್ಲವನ್ನು ಕೇಳಿದ ಹನುಂತು ಬಂದವರೆಲ್ಲರೂ ಇನೋಸೆಂಟ್. ಯಾರು ಗೊತ್ತಿಲ್ಲದಾಗೆ ನಾಟಕ ಮಾಡುತ್ತಾರೆ. ನನ್ನನ್ನು ಇಟ್ಟುಕೊಂಡಿದ್ದಾರೆ ನಾನು ಕೂಡ ಹಾಗೆಯೇ ಎಂದು ಹನುಮಂತು ಹೇಳಿದ್ದಾರೆ. ಗೌತಮಿ, ಚೈತ್ರಾ ಅವರು ಕೂಡ ಹನುಮಂತು ಅವರ ಹೆಸರು ಹೇಳಿದ್ದಾರೆ.
ಧನರಾಜ್ ಅವರು ಇನೋಸೆಂಟ್ ಅಲ್ಲವೆಂದು ಮಂಜು ಹೇಳಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಕಾರ್ಡ್ ಆಗಿ ಇರುವುದು ಯಾರು?:
ಮ್ಯಾಚ್ ಫಿಕ್ಸಿಂಗ್ ಕಾರ್ಡ್ ಬಗ್ಗೆ ಮಂಜು ಅವರು ಭವ್ಯ ಅವರ ಹೆಸರು ಹೇಳಿದ್ದಾರೆ. ಗೌತಮಿ, ಭವ್ಯ ಅವರು ಮಂಜು ಅವರ ಹೆಸರು ಹೇಳಿದ್ದಾರೆ.
ಯಾರು ಒಬ್ಬರ ಸ್ಟಾಟರ್ಜಿಗಳನ್ನು ಅರ್ಥ ಮಾಡಿಕೊಳ್ಳವಲ್ಲಿ ಇಲ್ಲಿ ವಿಫಲರಾಗುತ್ತಾರೋ ಅವರ ಮುಂದಿನ ವಾರದಲ್ಲಿ ಆಚೆ ಬರುತ್ತಾರೆ ಎಂದು ಕಿಚ್ಚ ಹೇಳಿದ್ದಾರೆ.
ನೀವು ಯಾರು ಕೂಡ ಒಳಗಡೆ ಸಮಾಜವನ್ನು ಎದುರಿಸುತ್ತಿಲ್ಲ. ಒಳಗಡೆ ಇರುವರನ್ನಷ್ಟೇ ಎದುರಿಸುತ್ತಿದ್ದೀರಿ ಎಂದು ಕಿಚ್ಚ ಹೇಳಿದ್ದಾರೆ.
ವುಮೆನ್ ಕಾರ್ಡ್ ಬಗ್ಗೆ ಸುರೇಶ್ ಅವರು ಚೈತ್ರಾ ಅವರ ಹೆಸರು ಹೇಳಿದ್ದಾರೆ. ಶಿಶಿರ್ ಕೂಡ ಚೈತ್ರಾ ಅವರ ಹೆಸರನ್ನು ಹೇಳಿದ್ದಾರೆ.
ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಇದೊಂದು ಶಕ್ತಿಯುತ್ತ ಕಾರ್ಡ್ ಎಂದು ಚೈತ್ರಾ ಅವರಿಗೆ ಕಿಚ್ಚ ಹೇಳಿದ್ದಾರೆ. ಈ ಕಾರ್ಡ್ ನಮ್ಮ ಮನೆಯಲ್ಲಿ ನಮ್ಮ ತಾಯಿ ಅವರಿಗಿತ್ತು ಎಂದು ಕಿಚ್ಚ ಹೇಳಿದ್ದಾರೆ.
ಅನುಕಂಪದ ಕಾರ್ಡ್ ಕುರಿತು ಮಂಜು ಅವರು ಭವ್ಯ ಅವರ ಹೆಸರನ್ನು ಹೇಳಿದ್ದಾರೆ. ಅದನ್ನು ಅವರು ತುಂಬಾ ಚೆನ್ನಾಗಿ ಬಳಸುತ್ತಿದ್ದಾರೆ ಎಂದು ಮಂಜು ಹೇಳಿದ್ದಾರೆ. ಧರ್ಮ ನಿಮಗೆ ಈ ಕಾರ್ಡ್ ಅನ್ವಯವಾಗುತ್ತದೆ ಇರಬೇಕು. ಯಾವುದರಲ್ಲೂ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಕಿಚ್ಚ ಪರೋಕ್ಷವಾಗಿ ಧರ್ಮ ಅವರ ಆಟದ ಬಗ್ಗೆ ಹೇಳಿದ್ದಾರೆ.
ಮಂಜು, ತ್ರಿವಿಕ್ರಮ್ ಅವರ ಡೀಲ್ ಮಾತುಕತೆ ವಿಚಾರವಾಗಿ ಕಿಚ್ಚನ ಜತೆ ಸ್ಪರ್ಧಿಗಳು ಮಾತನಾಡಿದ್ದಾರೆ ಈ ಬಗ್ಗೆ ಮಾತು ಬೇಡ ಎಂದು ಮಂಜು ಹೇಳಿದ್ದಾರೆ. ಈ ಬಗ್ಗೆ ಮಾತುಗಳು ಬೇಕಾ ಬೇಡ್ವಾ ಅಂಥ ನೀವು ನಿರ್ಧಾರ ಮಾಡಬೇಡಿ. ಬಿಳಿ ಬಟ್ಟೆ ಹಾಕಿದ್ದೇನೆ. ಆದ್ರೆ ನಾನು ವೋಟಿಗೆ ನಿಂತಿರುವ ರಾಜಕಾರಣಿ ಅಲ್ಲವೆಂದು ಕಿಚ್ಚ ಹೇಳಿದ್ದಾರೆ.
ನಾಮಿನೇಟ್ ಮಾಡುವಾಗಲೂ ನಿಮ್ಮ ಧ್ವನಿ ಬಂದಿಲ್ಲ. ಗೇಮ್ ಫಸ್ಟ್ ಅರ್ಥ ಮಾಡಿಕೊಳ್ಳಿ, ಎಲ್ಲಿ ನಿಮಗೆ ನೀವು ಧ್ವನಿ ಎತ್ತಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಮಂಜು ಅವರ ಮಾತನ್ನು ನೀವು ಕೇಳಿದ್ರಿ. ನಿಮಗೆ ಮಾತು ಕೊಟ್ಟಾಗ ಅದನ್ನು ಉಳಿಸಿಲ್ಲ ಅಂದಾಗ ನೀವು ಅದನ್ನು ಪ್ರಶ್ನೆ ಮಾಡಬೇಕಿತ್ತು ಭವ್ಯ ಅವರೇ. ನೀವು ಇಷ್ಟರಲ್ಲೇ ಈ ವಾರ ಕಿಚ್ಚನ ಚಪ್ಪಾಳೆ ಕಳೆದುಕೊಂಡ್ರಿ. ಪ್ರಶ್ನೆ ಮಾಡುವ ಟೈಮ್ ಅಲ್ಲಿ ಪ್ರಶ್ನೆ ಮಾಡಬೇಕಿತ್ತು ಎಂದು ಕಿಚ್ಚ ಖಡಕ್ ಆಗಿ ಪಾಠ ಹೇಳಿದ್ದಾರೆ. ಭವ್ಯ ತಮ್ಮ ತಪ್ಪನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಎಲ್ಲರ ತಲೆಯಲ್ಲಿ ಸೀರಿಯಲ್ ನಿಂದ, ವ್ಯಕ್ತಿತ್ವದಿಂದ ಸೇಫ್ ಆಗುತ್ತೀನಿ ಅನ್ನೋ ಭ್ರಮೆಯಲ್ಲಿ ಇದ್ದೀರಿ. ಆ ಭ್ರಮೆಯಲ್ಲಿ ಯಾರೂ ಇರಬೇಡಿ. ಇಲ್ಲಿ ದೊಡ್ಡ ದೊಡ್ಡ ಸೆಲಬ್ರಿಟಿಗಳು ಬಂದು ಹೋಗಿದ್ದಾರೆ ಎಂದು ಕಿಚ್ಚ ಹೇಳಿದ್ದಾರೆ.
ಮೋಕ್ಷಿತಾ, ತ್ರಿವಿಕ್ರಮ್ ಅವರು ಈ ವಾರ ಸೇಫ್ ಆಗಿದ್ದಾರೆ.