ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ವಾರದ ಟಾಸ್ಕ್ಗಳಿಗಾಗಿ ಸ್ಪರ್ಧಿಗಳು ಜೋಡಿಗಳಾಗಿ ಕಣಕ್ಕೆ ಇಳಿದಿದ್ದಾರೆ. ಬಿಗ್ ಬಾಸ್ ಕೊಟ್ಟಿರುವ ಟಾಸ್ಕ್ನಲ್ಲಿ ಜಿದ್ದಾಜಿದ್ದಿಯ ಹೋರಾಟವನ್ನು ಮಾಡಲಿದ್ದಾರೆ.
ಜೋಡಿಗಳಿದ್ದರೂ ಬಿಗ್ ಬಾಸ್ ಆಟದಲ್ಲಿ ಟ್ವಿಸ್ಟ್ ತಂದಿದ್ದಾರೆ. ತಮ್ಮ ಇಬ್ಬರ ಪೈಕಿ ಒಬ್ಬರನ್ನು ನಾಮಿನೇಟ್ ಮಾಡುವ ಸವಾಲಿನಲ್ಲಿ ಕೆಲ ಸ್ಪರ್ಧಿಗಳು ಆತಂತ್ರಕ್ಕೆ ಸಿಲುಕಿದ್ದಾರೆ. ಇನ್ನು ಕೆಲವರು ತಾವೇ ಉಳಿಯಬೇಕೆನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಈ ವಾರ 10 ಮಂದಿ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ.
ಮನೆಯ ಕ್ಯಾಪ್ಟನ್ ಆಗಿರುವ ತ್ರಿವಿಕ್ರಮ್ ಯಾರೊಂದಿಗೂ ಜೋಡಿ ಮಾಡಿಕೊಂಡಿಲ್ಲ. ಅವರು ಟಾಸ್ಕ್ ಉಸ್ತುವಾರಿಯನ್ನು ವಹಿಸಲಿದ್ದಾರೆ. ಬಿಗ್ ಬಾಸ್ ಕನ್ಫೆಷನ್ ಕೋಣೆಗೆ ಮಹಿಳಾ ಸ್ಪರ್ಧಿಗಳನ್ನು ಕರೆದು “ನೀವು ನಿಮ್ಮ ಜೋಡಿ ಸದಸ್ಯನ ಜತೆಯನ್ನು ಬಿಟ್ಟು ತ್ರಿವಿಕ್ರಮ್ ಜತೆ ಜೋಡಿಯಾಗಲು ಬಯಸುತ್ತೀರಾ” ಎಂದು ಕೇಳಲಾಗಿದೆ.
ಇದಕ್ಕೆ ಚೈತ್ರಾ ಅವರು ಶಿಶಿರ್ ಅವರ ಜತೆಗಿನ ಜೋಡಿಯನ್ನು ಮುರಿದು ತ್ರಿವಿಕ್ರಮ್ ಜತೆ ಜೋಡಿ ಆಗಲು ಮುಂದಾಗಿದ್ದಾರೆ. ತ್ರಿವಿಕ್ರಮ್ ದೈಹಿಕವಾಗಿ, ಮಾನಸಿಕವಾಗಿ ಬಹಳ ಗಟ್ಟಿ ಆಗಿರುವ ವ್ಯಕ್ತಿ ಎಂದು ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ತ್ರಿವಿಕ್ರಮ್ ಜತೆ ಜೋಡಿ ಆಗುವ ವಿಚಾರವನ್ನು ಚೈತ್ರಾ ಅವರು ಎಲ್ಲರ ಮುಂದೆ ಬಂದು ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಶಿಶಿರ್ “ನಾನೇನು ಕಡ್ಲೇಪುರಿ ತಿಂತೀನಾ ಅಲ್ಲಿ. ಇಲ್ಲಿ ಬಂದು ದೈಹಿಕವಾಗಿ, ಮಾನಸಿಕವಾಗಿ ಬಂದು ಮಾತನಾಡ್ತಾರೆ. ನಾಮಿನೇಷನ್ ಅಂಥ ಬಂದಾಗ ಅಯ್ಯೋ ಅಮ್ಮ ಅಂಥ ಬಂದು ಬಿಡ್ತಾರೆ” ಎಂದು ಗರಂ ಆಗಿದ್ದಾರೆ.
ಇದಕ್ಕೆ ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಇಡೀ ವಾರದ ಟಾಸ್ಕ್ನಿಂದ ಆಚೆ ಇಡುತ್ತಾರೆ ಅಂಥ ದೇವ್ರಾಣೆ ಗೊತ್ತಿರಲಿಲ್ಲ ಅಣ್ಣಾ ಅಂಥ ತಲೆ ಮುಟ್ಟಿ ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
12 ವರ್ಷದಿಂದ ಮಣ್ಣು ಹೊತ್ತಿರೋ ನಾವಲ್ಲ ಆ್ಯಕ್ಟರ್ ಗಳು. ಇಲ್ಲಿದ್ದಾರೆ ನೋಡಿ ದೊಡ್ಡ ಆ್ಯಕ್ಟರ್ ಗಳು ಎಂದು ಶಿಶಿರ್ ಗರಂ ಆಗಿದ್ದಾರೆ.
ನಿನ್ನೆ ನಾಮಿನೇಷನ್ ವಿಚಾರದಲ್ಲಿ ಚೈತ್ರಾ ಅವರಿಗೋಸ್ಕರ ಶಿಶಿರ್ ತಮ್ಮನ್ನು ತಾವೇ ನಾಮಿನೇಟ್ ಆಗಿದ್ದರು. ಯಾರೆಲ್ಲ ಹಂಗಿಸಿದ್ದಾರೆ ಅವರಿಗೆಲ್ಲ ಉತ್ತರ ಕೊಟ್ಟು ನಿನ್ನನ್ನು ನೀನು ಪ್ರೂವ್ ಮಾಡು ಎಂದು ಶಿಶಿರ್ ಚೈತ್ರಾಗೆ ಧೈರ್ಯ ತುಂಬಿದ್ದರು.
ಈ ಸಂಚಿಕೆ ಬುಧವಾರ(ನ.13ರಂದು) ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.