Advertisement

ಬಯಲಾಟ ಅಕಾಡೆಮಿ: ನಾಳೆ ಪ್ರಶಸ್ತಿ

11:45 AM Apr 17, 2022 | Team Udayavani |

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ 2020ನೇ ಸಾಲಿನ ರಾಜ್ಯ ಮಟ್ಟದ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏ.18 ರಂದು ನವನಗರದ ಡಾ| ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಯಲಾಟ ಅಕಾಡೆಮಿಯ ಆಡಳಿತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಹೇಳಿದರು.

Advertisement

ನವನಗರದ ಕಲಾಭವನದ ಸಂಕೀರ್ಣದಲ್ಲಿರುವ ಬಯಲಾಟ ಅಕಾಡೆಮಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲಕುಮಾರ ಕಾರ್ಯಕ್ರಮ ಉದ್ಘಾಟಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಶಾಸಕ ಡಾ|ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿ ಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಬಯಲಾಟ ರಂಗ ಸಂಗಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ, ಚಿತ್ರಕಲಾ ಪ್ರದರ್ಶನ, ಸುಗಮ ಸಂಗೀತ, ಸಣ್ಣಾಟ ಪ್ರದರ್ಶನ, ಸಮೂಹ ಗೀತ ಗಾಯನ, ದೊಡ್ಡಾಟದ ಕುಣಿತ, ಶ್ರೀಕೃಷ್ಣ ಪಾರಿಜಾತ, ಶಹನಾಯಿ ಹಾಗೂ ಜಾನಪದ ನೃತ್ಯ ರೂಪಕಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಬಯಲಾಟ ಸಿರಿ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಪಾರಂಪರಿಕ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಯಲಾಟ ಅಕಾಡೆಮಿ ವತಿಯಿಂದ ರಾಜ್ಯದ 10 ಕಡೆ ತರಬೇತಿ ಶಿಬಿರ ಆರಂಭಿಸಲಾಗುತ್ತಿದ್ದು, ಈಗಾಗಲೇ ಬೆಳಗಾವಿ, ದಾವಣಗೆರೆ, ಹಾವೇರಿ, ವಿಜಯನಗರ, ಸವದತ್ತಿ ಹಾಗೂ ಹಳಿಯಾಳದಲ್ಲಿ ಪ್ರಾರಂಭಿಸಲಾಗಿದೆ. ಹೂವಿನಹಡಗಲಿ, ಅಥಣಿ ಹಾಗೂ ಬಾಗಲಕೋಟೆಯ ಲೋಕಾಪುರದಲ್ಲಿಯೂ ಸಹ ತರಬೇತಿ ಶಿಬಿರ ಪ್ರಾರಂಭಿಸಬೇಕಾಗಿದೆ. ಇದರಿಂದ ಕಲಾವಿದರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್‌ ಹೇಮಾವತಿ ಎನ್‌ ಉಪಸ್ಥಿತರಿದ್ದರು.

2020ನೇ ಸಾಲಿನ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾದ ಮಂಡ್ಯ ಜಿಲ್ಲೆಯ ನಾಗಮ್ಮ ಕೃಷ್ಣಯ್ಯ, ಬಾಗಲಕೋಟೆಯ ಶಾಂತಪ್ಪ ಬಾಡದ, ಕೊಪ್ಪಳದ ಹನಮಂ ತಪ್ಪ ಎಲಿಗಾರ, ಧಾರವಾಡದ ಎಂ.ಎಸ್‌.ಮಾಳವಾಡ ಹಾಗೂ ದಾವಣಗೆರೆಯ ಡಿ.ಬಿ. ಶಿವಣ್ಣರವರಿಗೆ 50 ಸಾವಿರ ರೂ. ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು. ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಬೀದರ ಜಿಲ್ಲೆಯ ರಾಮಶೆಟ್ಟಿ ಬಂಬುಳಗೆ, ಬೆಳಗಾವಿಯ ನಾಗಪ್ಪ ಸೂರ್ಯವಂಶಿ, ಬಾಗಲಕೋ ಟೆಯ ದುರಗವ್ವ ಮುಧೋಳ, ಹಾವೇರಿಯ ರಾಮಪ್ಪ ಕುರಬರ, ಬೆಳಗಾವಿಯ ನಿಂಗೌಡ ಪಾಟೀಲ, ವಿಜಯಪುರ ಜಿಲ್ಲೆಯ ರೇವಗೊಂಡ ಬಿರಾದಾರ, ಬಳ್ಳಾರಿ ಜಿಲ್ಲೆಯ ಕೆ.ಹೇಮಾರೆಡ್ಡಿ, ಜಿ.ವೀರನಗೌಡ, ಬೆಳಗಾವಿಯ ಶಿವಪ್ಪ ಕುಂಬಾರ ಅವರಿಗೆ 25 ಸಾವಿರ ರೂ. ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next