ಶಿರಸಿ: ನೆರೆಯ ಹಾವೇರಿ ಜಿಲ್ಲೆ ಬ್ಯಾಡಗಿ ಹಾಗೂದೇವನೂರು ತಳಿಯ ಮೆಣಸಿನಕಾಯನ್ನೇ ಹೆಚ್ಚಾಗಿ ಇಷ್ಟಪಡುವ ಉತ್ತರ ಕನ್ನಡದ ರೈತರು ಇದೀಗ ಸ್ವತಃಅದೇ ತಳಿಯ ಬೇಸಾಯಕ್ಕೆ ಮುಂದಾಗಿದ್ದಾರೆ.ಅಲ್ಲದೇ ಈ ಭಾಗದಲ್ಲಿ ಗುಂಟೂರು ತಳಿಗೆ ಬೇಡಿಕೆ ಕಡಿಮೆ.
ವಿಶೇಷ ಎಂದರೆ, ಈಚೆಗೆ ಹಾವೇರಿ ಜಿಲ್ಲೆಯ ಹಲವೆಡೆ ಮೆಣಸು ಬೆಳೆಗಾರರೂ ಅಡಕೆಬೆಳೆಯುತ್ತಿದ್ದಾರೆ. ಅಲ್ಲಿ ಶಿರಸಿ ಅಡಕೆ ಸಸಿಗಳಿಗೆ ಅಪಾರ ಬೇಡಿಕೆ ಕೂಡ ಇದೆ!
ಇಲ್ಲಿ ಹೊಸ ಸಾಹಸ: ಶಿರಸಿ ಸಮೀಪದ ಅಡಕೆ ಬೆಳೆಗಾರರೊಬ್ಬರು ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾಗಿದ್ದಾರೆ. ಆಧುನಿಕ ಪದ್ಧತಿಯಲ್ಲಿ ಮೆಣಸಿನ ಕೃಷಿ ಮಾಡುತ್ತಿದ್ದಾರೆ. ಬರುವ ಡಿಸೆಂಬರ್ ವೇಳೆಗೆಇದರ ಕೊಯ್ಲು ಕೂಡ ಆಗಬಹುದು ಎಂಬುದುಅವರ ನಿರೀಕ್ಷೆ. ಬರೂರು ಪಕ್ಕದ ಕಬ್ಬಗಾರಿನ ಜಯಂತ ಸೋಮೇಶ್ವರ ಹೆಗಡೆ ಈ ಸಾಧನೆಗೆಮುಂದಾಗಿದ್ದಾರೆ. ತೋಟಗಾರಿಕಾ ಇಲಾಖೆಯ ನೆರವು ಪಡೆದು ಸ್ವತಃ 8.50 ಲಕ್ಷ ರೂ. ವಿನಿಯೋಗಿಸಿ 20 ಗುಂಟೆ ಕ್ಷೇತ್ರದಲ್ಲಿ ಪಾಲಿಹೌಸ್ ನಿರ್ಮಾಣಮಾಡಿಕೊಂಡರು. ತೋಟಗಾರಿಕಾ ಇಲಾಖೆಯ ಮಹಾಬಲೇಶ್ವರ ಹೆಗಡೆ, ತೋಟಗಾರಿಕಾ ಕಾಲೇಜಿನ, ಕೆವಿಕೆ ವಿಜ್ಞಾನಿಗಳು ನೆರವಾದರು.
ಕಹಿಯಾದ ಸೌತೆ: ಕಳೆದ ಫೆಬ್ರವರಿ ನಂತರ ಪ್ರಥಮ ಬಾರಿಗೆ ಸೌತೆ ಬೇಸಾಯ ಮಾಡಿದರು. ಅದ್ಭುತ ಬೆಳೆಬಂತು. ಆದರೆ, ಆ ವೇಳೆಗೆ ಕೋವಿಡ್ ಲಾಕ್‌ಡೌನ್‌ಶುರುವಾಯಿತು. ಭರಪೂರ ಬೆಳೆ ಬಂತು. ಆದರ,ಮಾರುಕಟ್ಟೆಯೇ ಇಲ್ಲವಾಯಿತು. ಟನ್‌ಗಳಷ್ಟುಇದ್ದಾಗಲೇ ನಿರ್ವಹಣೆ ಮಾಡಲಾಗದೆ ಬೇಸಾಯಕ್ಕೆ ವಿದಾಯ ಹೇಳಿದರು. ಸವಿಯಾಗಬೇಕಿದ್ದ ಸೌತೆಕಹಿಯಾಯಿತು. ಇನ್ನೂ ಸೌತೆ ಖರೀದಿಸಿದವರಲ್ಲಿ ಕೆಲವರು ಹಣ ಪಾವತಿಸಬೇಕಾಗಿದ್ದೂ ಸುಳ್ಳಲ್ಲ!
ಹೊರಳಿದ ಕೃಷಿ: ಸೌತೆ ತೆಗೆದ ಬೆಳೆಗಾರ ಜಯಂತ, ಅಧಿಕಾರಿಗಳ, ವಿಜ್ಞಾನಿಗಳ ಹಾಗೂ ನಾಗರಾಜಹೆಗಡೆ ಅವರ ಸಲಹೆ ಸಹಕಾರ ಪಡೆದು ಕಳೆದಜೂನ್‌ದಲ್ಲಿ ಮಡಿಯಲ್ಲಿ ಸಸಿ ತಯಾರಿಸಿ 20ಗುಂಟೆಯಲ್ಲೂ ಮೆಣಸು ಕೃಷಿ ಆರಂಭಿಸಿದರು. ಒಂದು ಅಡಿಗೆ ಒಂದರಂತೆ, ಮೂರು ಅಡಿಅಗಲ ಇಟ್ಟು 4 ಸಾವಿರಕ್ಕೂ ಅಧಿಕ ಸಸಿ ನೆಟ್ಟರು. ಸಾವಯವ ಗೊಬ್ಬರ, ಟ್ರೈಕೋಡರ್ಮಾ ಕೊಟ್ಟರು.
ನಂತರ ರಸಾವರಿ ಕೊಟ್ಟರು. ಪ್ಲಾಸ್ಟಿಕ್ ಹೊದಿಕೆ ಕೂಡ ಮಾಡಿದರು. ನೆಟ್ಟ ಒಂದುವರೆ ತಿಂಗಳಿಗೆ ಹೂವೂಬಂತು. ಕೆಲವು ಉದುರಿದ್ದು ಈಗ ಮತ್ತೆ ಹೂವುಕಚ್ಚುತ್ತಿದೆ. ಕೆಲವು ಒಳ್ಳೆ ಫಲ ಕೊಡುತ್ತಿದೆ ಎನ್ನುತ್ತಾರೆ.
ಇಡೀ ಕುಟುಂಬ ಭಾಗಿ: ತೋಟಗಾರಿಕಾ ಪದವಿ ಪಡೆಯುತ್ತಿದ್ದು, ತಾಯಿ, ಹೆಂಡತಿ, ಇನ್ನೊಬ್ಬ ಮಗನಿಗೂ ಕೃಷಿಯಲ್ಲಿ ಆಸಕ್ತಿ. ಎಲ್ಲರೂ ಜೊತೆಯಾಗಿ ಅಡಕೆ ಬೇಸಾಯದ ಜೊತೆ ಹೊಸತನದ ಕೃಷಿ ಮಾಡುತ್ತಿರುವುದಾಗಿ ಹೇಳುತ್ತಾರೆ. ಆಸಕ್ತ ರೈತರು ಮಾಹಿತಿಗಾಗಿ ಮೊ.ಸಂ: 9449480772ಗೆ ಸಂಪರ್ಕಿಸಬಹುದು.
ಈಗಾಗಲೇ ಸುಮಾರು 60 ಸಾವಿರ ರೂ. ಖರ್ಚಾಗಿದೆ. ಸುಮಾರು 25 ಕ್ವಿಂಟಾಲ್ ಒಣ ಮೆಣಸಿನ ನಿರೀಕ್ಷೆ ಇದೆ.
– ಜಯಂತ ಹೆಗಡೆ, ರೈತ
ಜಯಂತರಿಗೆ ಸೌತೆಕಾಯಿ ಲಾಭ ತರಲಿಲ್ಲ.ಈಗ ಮೆಣಸಿನ ಬೆಳೆ ಚೆನ್ನಾಗಿ ಬರುತ್ತಿದೆ. ಖಾಲಿ ಭೂಮಿ ಸದ್ಬಳಕೆಯ ಅವರ ಆಶಯ ಈಡೇರಲಿ.
-ದಿನೇಶ ಹೆಗಡೆ ಕರ್ಕಿಸವಲ್, ರೈತ
-ರಾಘವೇಂದ್ರ ಬೆಟ್ಟಕೊಪ್ಪ