Advertisement
30 ವರ್ಷದ ಬಳಿಕ ಮೆಲ್ಬರ್ನ್ ಕ್ರಿಕೆಟ್ ಅಂಗಳದಲ್ಲಿ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವಾಡುತ್ತಿರುವ ಕಿವೀಸ್ ಸರಣಿ ಸಮಬಲಗೊಳಿಸಲು ಹೋರಾಡಲಿದೆ. ಇದಕ್ಕಾಗಿ ತಂಡದಲ್ಲಿ ಕೆಲವು ಬದಲಾವಣೆ ಮಾಡಲು ಬಯಸಿದೆ. ಬೌಲಿಂಗ್ ಪಡೆ ಬಲಿಷ್ಠಗೊಳಿಸಲು ಮೊದಲ ಟೆಸ್ಟ್ ವೇಳೆ ಹೊರಗಿದ್ದ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ.
Related Articles
ಆರಂಭಕಾರ ಡೇವಿಡ್ ವಾರ್ನರ್ ಮತ್ತು ಯುವ ಆಟಗಾರನಾದ ಮಾರ್ನಸ್ ಲಬುಶೇನ್ ಅವರ ಪ್ರಚಂಡ ಬ್ಯಾಟಿಂಗ್ ಫಾರ್ಮ್ ಆಸೀಸ್ ತಂಡಕ್ಕೆ ಹೆಚ್ಚಿನ ಬಲ ತಂದಿದೆ. ಪಂದ್ಯದಿಂದ ಪಂದ್ಯಕ್ಕೆ ಅಮೋಘ ಪ್ರದರ್ಶನ ನೀಡುತ್ತಿರುವ ಇವರಿಬ್ಬರು ಆಸೀಸ್ ಪಾಲಿಗೆ ಹೆಚ್ಚಿನ ಭರವಸೆಯ ಆಟಗಾರರಾಗಿದ್ದಾರೆ.
Advertisement
ಗಾಯದ ಸಮಸ್ಯೆಗೆ ತುತ್ತಾಗಿರುವ ಜೋಸ್ ಹ್ಯಾಝಲ್‌ವುಡ್ ಅವರ ಸ್ಥಾನಕ್ಕೆ ಜೇಮ್ಸ್ ಪಾಟಿನ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಬೌಲಿಂಗ್‌ನಲ್ಲಿಯೂ ಆಸೀಸ್ ಹೆಚ್ಚು ಘಾತಕವಾಗಿದೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ನಥನ್ ಲಿಯಾನ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಕಿವೀಸ್‌ಗೆ ಹಲವು ಸವಾಲುಟೆಸ್ಟ್ ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಈ ಒತ್ತಡದ ನಡುವೆ ನಾಯಕ ಕೇನ್ ವಿಲಿಯಮ್ಸನ್ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎನ್ನುವುದೇ ಪಂದ್ಯದ ಕುತೂಹಲ. ಈ ಪಂದ್ಯವನ್ನು ಜಯಿಸಿದ್ದೇ ಆದಲ್ಲಿ ಕೇನ್ ವಿಲಿಯಮ್ಸನ್ ಓರ್ವ ಸಮರ್ಥ ಟೆಸ್ಟ್ ನಾಯಕನಾಗಿ ಹೊರಹೊಮ್ಮಬಹುದು. ಆದರೆ ಆಸೀಸ್ ಬೌಲರ್‌ಗಳನ್ನು ಎದುರಿಸಲು ಸಮರ್ಥ ಆಟಗಾರರು ಕಿವೀಸ್ ಪಾಳಯದಲ್ಲಿರದಿರುವುದೇ ತಂಡಕ್ಕೆ ದೊಡ್ಡ ಚಿಂತೆಯಾಗಿದೆ. ತಂಡಗಳು
ಆಸ್ಟೇಲಿಯ: ಟೀಮ್ ಪೈನ್ (ನಾಯಕ), ಡೇವಿಡ್ ವಾರ್ನರ್, ಜೋ ಬರ್ನ್ಸ್, ಮಾರ್ನಸ್ ಲಬುಶೇನ್, ಸ್ಟಿವನ್ ಸ್ಮಿತ್, ಮ್ಯಾಥ್ಯೂ ವೇಡ್, ಟ್ರ್ಯಾವಿಸ್ ಹೆಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಥನ್ ಲಿಯಾನ್, ಜೇಮ್ಸ್ ಪಾಟಿನ್ಸನ್, ಮಿಚೆಲ್ ನಸೀರ್, ಪೀಟರ್ ಸಿಡ್ಲ್. ನ್ಯೂಜಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆ್ಯಸ್ಲೆ, ಟಾಮ್ ಬ್ಲಿಂಡೆಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಲಾಕಿ ಫರ್ಗ್ಯುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಂ, ಹೆನ್ರಿ ನಿಕೋಲ್ಸ್, ಜೆಟ್ ರಾವೆಲ್, ಮಿಚೆಲ್ ಸ್ಯಾಂಟ್ನರ್, ಟೀಂ ಸೌಥಿ, ರಾಸ್ ಟೇಲರ್, ಬಿ.ಜೆ. ವ್ಯಾಟಿÉಂಗ್, ನೀಲ್ ವ್ಯಾಗ್ನರ್.