Advertisement

ಬವೇರಿಯಾ: ಹೊಟೇಲ್‌ ಉದ್ಯಮಕ್ಕೆ ಸಮ್ಮತಿ

11:51 AM May 06, 2020 | sudhir |

ಬವೇರಿಯಾ: ಜರ್ಮನಿಯೊಂದಿಗೆ ಗಡಿ ಹಂಚಿಕೊಂಡಿರುವ ಬವೇರಿಯಾ ಕೂಡ ಇದೀಗ ಲಾಕ್‌ಡೌನ್‌ ಸಡಿಲಿಕೆಗೆ ಮುಂದಾಗಿದೆ.
ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗ‌ಳನ್ನು ಈ ತಿಂಗಳ ಅಂತ್ಯದಲ್ಲಿ ಮತ್ತೆ ಪುನರಾರಂಭಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯದ ಅಧ್ಯಕ್ಷ ಮಾರ್ಕಸ್‌ ಸೋಡರ್‌ ಮಂಗಳವಾರ ನಡೆದ ಮಾದ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಜರ್ಮನ್‌ ಫೆಡರಲ್‌ ರಾಜ್ಯಗಳಲ್ಲಿ ಒಂದಾದ ಬವೇರಿಯಾ, ಲಾಕ್‌ಡೌನ್‌ ತೆರೆಯುವಿಕೆ ಕುರಿತಾಗಿ ಬವೇರಿಯನ್‌ ಪ್ಲಾನ್‌ ಫಾರ್‌ ಕೋವಿಡ್ ಯೋಜನೆಯನ್ನು ರೂಪಿಸಿದೆ. ಅದರ ಮಾರ್ಗಸೂಚಿಗಳಂತೆ ಹಂತ ಹಂತವಾಗಿ ಲಾಕ್‌ಡೌನ್‌ ನಿಯಮವನ್ನು ಸಡಿಲಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಹೊಟೇಲ್‌ ಉದ್ಯಮ ಪ್ರಾರಂಭ
ಲಾಕ್‌ಡೌನ್‌ ಮೊದಲನೇ ಹಂತದ ತೆರೆಯುವಿಕೆ ಹಿನ್ನಲೆಯಲ್ಲಿ ಕಳೆದ ಕೆಲ ವಾರಗಳಿಂದ ಸ್ಥಗಿತಗೊಂಡಿದ್ದ ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳನ್ನು ಮೇ.18ರಿಂದ ತೆರೆಯಲು ಅನುಮತಿ ನೀಡಿದೆ.

ಆದರೆ ಮೇ.23ರವರೆಗೆ ಕೇವಲ ಹೊರಾಂಗಣ ಪ್ರದೇಶದಲ್ಲಿ ಕಾರ್ಯಾಚರಿಸುವಂತೆ ಸೂಚನೆ ನೀಡಿದ್ದು, ಅನಂತರದ ದಿನಗಳಲ್ಲಿ ಒಳಾಂಗಣ ಪ್ರದೇಶದಲ್ಲಿ ಆಸನ ವ್ಯವಸ್ಥೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕುಟುಂಬಸ್ಥರ ಭೇಟಿಗೂ ಅವಕಾಶ
ಮೇ 6 ರಿಂದ, ಬವೇರಿಯಾದ ಪ್ರಜೆಗಳು ಇತರ ಪ್ರದೇಶಗಳಲ್ಲಿ ನೆಲೆಸಿರುವ ತಮ್ಮ ಕುಟುಂಬ ವರ್ಗ, ಸ್ನೇಹಿತರನ್ನು ಭೇಟಿ ಮಾಡಲೂ ಅವಕಾಶ ನೀಡಲಾಗಿದೆ. ಜನರೂ ಮುಂಜಾಗ್ರತ ಕ್ರಮಗಳನ್ನು ಪಾಲಿಸುವ ಮೂಲಕ ಪುನ: ಸಹಜ ಸ್ಥಿತಿಗೆ ತೆರಳಲು ಸಹಕರಿಸಬೇಕು. ಈ ಹಿನ್ನೆ°ಲೆಯಲ್ಲಿ ಸರಕಾರ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಕೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next