Advertisement

ಅಂಟಾರ್ಟಿಕದಲ್ಲಿ ಬತ್ತುತ್ತಿವೆ ಗುಪ್ತ ಸರೋವರಗಳು!

08:13 AM Feb 14, 2017 | Harsha Rao |

ವಾಷಿಂಗ್ಟನ್‌: ಭೂ ತಾಪಮಾನ ಹೆಚ್ಚುತ್ತಿರುವ ಬಗ್ಗೆ ಇದೀಗ ಮತ್ತೂಂದು ಎಚ್ಚರಿಕೆ ಮೊಳಗಲಾರಂಭಿಸಿದೆ. ಪಶ್ಚಿಮ ಅಂಟಾರ್ಟಿಕದಲ್ಲಿ ಕರಗುತ್ತಿರುವ ಹಿಮಗಡ್ಡೆಯಡಿ ಯಲ್ಲಿರುವ ಗುಪ್ತ ಸರೋವರಗಳು ಬತ್ತುತ್ತಿರುವ ಸೂಚನೆ ಸಿಕ್ಕಿದೆ.

Advertisement

 ಥೈವೈಟ್ಸ್‌ ಹೆಸರಿನ ದೊಡ್ಡ ನೀರ್ಗಲ್ಲ ನದಿ ಅತಿ ವೇಗವಾಗಿ ಸಮುದ್ರದಲ್ಲಿ ಕರಗುತ್ತಿರುವ ಬಗ್ಗೆ ಮೊದಲೇ ವಿಜ್ಞಾನಿಗಳು ಹೇಳಿದ್ದರು. ಇದರ ಕೆಳಭಾಗದಲ್ಲಿ ಗುಪ್ತ ಸರೋವರಗಳಿದ್ದು, ಅವುಗಳು ಬತ್ತುತ್ತಿರುವ ಸಂಗತಿ ಈಗ ಗೊತ್ತಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಾಗತಿಕ ಸಮುದ್ರ ಮಟ್ಟ ಏರಿಕೆಯಾಗುವ ಭೀತಿ ಕಂಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡದಾದ ನೀರ್ಗಲ್ಲು ಗಳು ಕರಗುವ ಸೂಚನೆ ಸಿಕ್ಕಿದೆ. 

ವಾಷಿಂಗ್ಟನ್‌ ವಿವಿ, ಲಂಡನ್‌ನ ಎಡಿನ್‌ಬರ್ಗ್‌ ವಿವಿ ತಜ್ಞರ ತಂಡ ಉಪಗ್ರಹ ಚಿತ್ರಗಳ ಮೂಲಕ ಈ ಅಂಶವನ್ನು ಪತ್ತೆ ಮಾಡಿದ್ದಾರೆ. ಸಂಶೋಧಕರ ಪ್ರಕಾರ ನೀರ್ಗಲ್ಲ ಅಡಿ ಇರುವ ಸರೋವರಗಳು ಪರಸ್ಪರ ಸಂಪರ್ಕ ಹೊಂದಿದ್ದು, 2013 ಜೂನ್‌ನಿಂದ 2014 ಜನವರಿ ಅವಧಿಯಲ್ಲಿ ಬತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next