– ಬಿಜೆಪಿಗೆ ಸತ್ವಪರೀಕ್ಷೆ, ಕೈಗೆ ಅಗ್ನಿಪರೀಕ್ಷೆ, ಆಪ್‌ಗೆ ಮೊದಲ ಪರೀಕ್ಷೆ
ನವದೆಹಲಿ: ಐದು ರಾಜ್ಯಗಳ ಪೈಕಿ ಪಂಜಾಬ್ ಮತ್ತು ಗೋವಾ ವಿಧಾನಸಭೆಗೆ ಫೆ.4ರಂದು ಮತದಾನ ನಡೆಯಲಿದೆ. ಈ ಮೂಲಕ ಒಂದೂವರೆ ತಿಂಗಳ ಮತದಾನ ಪ್ರಕ್ರಿಯೆ ಶುರುವಾಗಲಿದೆ. ಅದಕ್ಕೆ ಪೂರಕವಾಗಿ ಬಿರುಸಿನ ಚುನಾವಣಾ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ. ಆಡಳಿತ ರೂಢ ಬಿಜೆಪಿಗೆ ನೋಟು ಅಪನಗದೀಕರಣದ ಬಳಿಕ ಎರಡು ಪುಟ್ಟ ರಾಜ್ಯಗಳಲ್ಲಿ ಸತ್ವಪರೀಕ್ಷೆ. ಅತ್ತ ಕಾಂಗ್ರೆಸ್‌ಗೆ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಪಸ್ಥಿತಿಯಲ್ಲಿ ಚುನಾವಣೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿಗೆ ಅಗ್ನಿ ಸವಾಲಾಗಿದ್ದರೆ, ಎರಡೂ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ.
Advertisement
ಮೊದಲ ಹಂತದಲ್ಲಿ ಪಂಜಾಬ್‌ನ 117, ಗೋವಾದ 40 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟಿÉ, ಸ್ಮತಿ ಇರಾನಿ, ಮನೋಹರ್ ಪರ್ರಿಕರ್ ಈಗಾಗಲೇ ಎರಡೂ ರಾಜ್ಯಗಳಲ್ಲಿ ಪ್ರಚಾರ ಮಾಡಿದ್ದಾರೆ. ಹತ್ತಿರ ಒಂದು ದಶಕದಿಂದ ಪಂಜಾಬ್‌ನಲ್ಲಿ ಅಕಾಲಿ ದಳದ ಜತೆಗೆ ಬಿಜೆಪಿಯ ಮೈತ್ರಿ ಸರ್ಕಾರವಿದ್ದು, ಡ್ರಗ್ ಮಾಫಿಯಾವನ್ನೇ ಸರ್ಕಾರದ ವೈಫಲ್ಯವೆಂದು ಬಿಂಬಿಸುತ್ತಿರುವ ಆಪ್ ಇಲ್ಲಿ ಅಧಿಕಾರದ ಮೇಲೆ ಕಣ್ಣಿಟ್ಟಿದೆ. ಸಿಎಂ ಅಮರಿಂದರ್ ಸಿಂಗ್ ಜೊತೆಗೆ ಬಿಜೆಪಿಯ ಸಿದ್ದು ಸೇರ್ಪಡೆಯೂ ಕೈಪಾಳಯದಲ್ಲಿ ಕೊಂಚ ಬಲ ಹೆಚ್ಚಿಸಿದೆ.
ಪಂಜಾಬ್‌ನ ಸಂಗ್ರೂರ್‌ನಲ್ಲಿ ಕೊನೆಯ ದಿನದ ಪ್ರಚಾರ ಭಾಷಣ ಮಾಡಿದ ರಾಹುಲ್ ಗಾಂಧಿ, ಮೂರು ದಿನದ ಹಿಂದೆ ನಡೆದ ಮೌರ್ ಮಾಂಡಿ ಕಾರು ಸ್ಫೋಟವನ್ನು ಪುನಃ ನೆನಪಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹರ್ಮಿಂದರ್ ಸಿಂಗ್ ಜಸ್ಸಿ ಪ್ರಚಾರ ಸಭೆ ಮುಗಿದ ಕೂಡಲೇ ಈ ಸ್ಫೋಟವಾಗಿತ್ತು. “ಪಂಜಾಬಿನ ಶಾಂತಿ ಕದಡು¤ತಿರುವ ಶಕ್ತಿಗಳ ಪರ ಆಪ್‌ನ ಅರವಿಂದ್ ಕೇಜ್ರಿವಾಲ್ ಧ್ವನಿ ಎತ್ತುತ್ತಿದ್ದಾರೆ’ ಎಂದು ನೇರ ಆರೋಪಿಸಿದರು. “ಆಪ್- ಬಿಜೆಪಿ ಎರಡೂ ಸೈದ್ಧಾಂತಿಕವಾಗಿ ಅತಿರೇಕ ಹೊಂದಿರುವಂಥವು. ಇಂಥ ನಾಯಕರಿಂದಲೇ ಭಯಗ್ರಸ್ಥ ವಾತಾವರಣದಲ್ಲಿ ಪಂಜಾಬಿಗರು ಬದುಕುವಂತಾಗಿದೆ. ಇಲ್ಲಿನವರ ಉದ್ಯೋಗಗಳನ್ನು ಪಕ್ಕದ ಜಾರ್ಖಂಡ್, ಚತ್ತೀಸ್‌ಗಢ್ ಮಂದಿ ಕಸಿಯುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗಳು ನಿವಾರಣೆ ಆಗಲಿವೆ’ ಎಂದರು.
Related Articles
“ಬಿಜೆಪಿ ಚುನಾವಣೆ ವೇಳೆ ಮಾತ್ರವೆ ಏಕೆ ರಾಮ ಮಂದಿರ ನಿರ್ಮಾಣವನ್ನು ಪ್ರಸ್ತಾಪಿಸುತ್ತದೆ? ಅಧಿಕಾರ ಹಿಡಿದ ಈ ಎರಡೂವರೆ ವರ್ಷದಲ್ಲಿ ಯಾಕೆ ಅವರಿಗೆ ರಾಮ ನೆನಪಾಗಲಿಲ್ಲ?’ ಕಾಂಗ್ರೆಸ್ ನೇತಾರ ಪ್ರದೀಪ್ ಮಾಥುರ್ ಹೀಗೊಂದು ಪ್ರಶ್ನೆ ಎಸೆದಿದ್ದಾರೆ. ಮಥುರಾ ಕ್ಷೇತ್ರದ ಅಭ್ಯರ್ಥಿ ಆಗಿರುವ ಮಾಥುರ್, “ಬಿಜೆಪಿಗೆ ರಾಮಮಂದಿರ ವಿವಾದ ಸದಾ ಜೀವಂತ ವಸ್ತುವಾಗಿರಬೇಕು. ಅದಕ್ಕೆ ತಾರ್ಕಿಕ ಅಂತ್ಯ ಕೊಡಲು ಅವರಿಗೆ ಮನಸ್ಸಿಲ್ಲ’ ಎಂದು ಕುಟುಕಿದ್ದಾರೆ.
Advertisement
ಅಸ್ವಸ್ಥರಾದರೂ ಬಾದಲ್ ಪ್ರಚಾರನಿರಂತರ ಚುನಾವಣಾ ಪ್ರಚಾರದಿಂದಾಗಿ ಪಂಜಾಬ್‌ನ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅಸ್ವಸ್ಥರಾಗಿದ್ದರೂ, ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. ವೈದ್ಯ ತಂಡ ಬಾದಲ್ ಅವರನ್ನು ಪರೀಕ್ಷಿಸಿ, ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದರೂ ಅದನ್ನು ಅವರು ನಿರ್ಲಕ್ಷಿಸಿದ್ದಾರೆ. ಶಿರೋಮಣಿ ಅಕಾಲ ದಳದ ಅಭ್ಯರ್ಥಿಗಳ ಪರ ಸಮ್ರಾಲಾ, ಶಾರ್ದುಲ್‌ಗಢ್ ಮತ್ತು ಸುನಮ್‌ನಲ್ಲಿ ಪಾಲ್ಗೊಳ್ಳುವುದಾಗಿ 89 ವರ್ಷದ ಬಾದಲ್ ಹೇಳಿದ್ದಾರೆ.