Advertisement

ಕನ್ನಡದಲ್ಲಿ ಬ್ಯಾಟಲ್‌ ಆಫ್ ಕೋರೆಗಾಂವ

02:06 PM Mar 26, 2018 | |

ನಿರ್ದೇಶಕ ನಾಗೇಂದ್ರ ಮಾಗಡಿ ಅವರು “ನರಗುಂದ ಬಂಡಾಯ’ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆ ಚಿತ್ರದ ಬಳಿಕ ಅವರು ಶಿವರಾಜಕುಮಾರ್‌ ಅಭಿನಯದ ಹೊಸ ಚಿತ್ರಕ್ಕೂ ಅಣಿಯಾಗುತ್ತಿದ್ದಾರೆ. ಇದರ ಜೊತೆಗೆ ಅವರು ಮತ್ತೂಂದು ಮಹತ್ವದ ಕಥೆ ಇಟ್ಟುಕೊಂಡು ಚಿತ್ರ ಮಾಡುವ ಯೋಚನೆಯಲ್ಲಿದ್ದಾರೆ. ಆ ಕಥೆ ಬೇರಾವುದೂ ಅಲ್ಲ, ಬ್ರಿಟಿಷರ ವಿರುದ್ಧ ದಂಗೆ ಎದ್ದ ಹೋರಾಟಗಾರನೊಬ್ಬನ ಕಥೆ. ಅದಕ್ಕೆ ಅವರು ಇಡಬೇಕೆಂದಿರುವ ಹೆಸರು “ಬ್ಯಾಟಲ್‌ ಆಫ್ ಕೋರೆಗಾಂವ’. ಈಗಾಗಲೇ ಬ್ರಿಟಿಷರ ವಿರುದ್ಧ ಹೋರಾಡಿದ ಅನೇಕ ಮಹನೀಯರ ಹೋರಾಟ ಕುರಿತು ಸಿನಿಮಾಗಳು ಬಂದಿವೆ. ಈಗ ಮತ್ತೂಂದು ಹೋರಾಟಗಾರನ ಕಥೆ ಚಿತ್ರವಾಗುತ್ತಿದೆ. ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರು ಕೋರೆಗಾಂವ ಚಳವಳಿಯನ್ನ ಸಿನಿಮಾ ಮಾಡುವ ಆಸೆಯನ್ನು ಹೊರಹಾಕಿದ್ದರು. ಅದಕ್ಕೆ ತಕ್ಕ ಕಥೆ ಕೂಡ ಸಿದ್ಧವಾಗಿದ್ದು, ಆ ಕಥೆಗೆ “ಬ್ಯಾಟಲ್‌ ಆಫ್‌ ಕೋರೆಗಾಂವ’ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. ಇನ್ನಷ್ಟೇ ಚಿತ್ರದ ಶೀರ್ಷಿಕೆ ನೋಂದಣಿ ಮಾಡಿಸಬೇಕಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕ ನಾಗೇಂದ್ರ ಮಾಗಡಿ. 

Advertisement

“ಬ್ಯಾಟಲ್‌ ಆಫ್ ಕೋರೆಗಾಂವ’ ಚಿತ್ರದಲ್ಲಿ ಹೋರಾಟಗಾರನೊಬ್ಬನ ದೇಶ ಪ್ರೇಮದ ಜೊತೆಗೆ ಜನರಲ್ಲಿರುವ ಮೌಡ್ಯಗಳನ್ನು ಹೋಗಲಾಡಿಸುವ ಹಲವು ವಿಷಯಗಳನ್ನು ಹೇಳಲಾಗುತ್ತಿದೆ. ಸದ್ಯಕ್ಕೆ ಸತೀಶ ಜಾರಕಿಹೊಳಿ ಅವರ ನಿರ್ಮಾಣದ “ಹೈಕಮಾಂಡ್‌’ ಚಿತ್ರ ಚುನಾವಣೆ ಬಳಿಕ ಶುರುವಾಗಲಿದೆ.”ಹೈಕಮಾಂಡ್‌’ ಚಿತ್ರದಲ್ಲಿ ಅನೇಕ ಅಂಶಗಳಿವೆ. ಆದರೆ, ಕಥೆ ಎಳೆ ಮಾತ್ರ ಗೌಪ್ಯವಾಗಿಡಲಾಗಿದೆ ಎನ್ನುತ್ತಾರೆ ನಾಗೇಂದ್ರ.

ಸದ್ಯಕ್ಕೆ ಅವರು “ನರಗುಂದ ಬಂಡಾಯ’ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಚಿತ್ರದಲ್ಲಿ ರಕ್ಷಿತ್‌, ಸಾಧುಕೋಕಿಲ, ಶುಭಾಪೂಂಜಾ ಮತ್ತಿತರರು ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next