Advertisement

Theft Case; ಬ್ಯಾಟರಿ, ಕಾಂಪೌಂಡ್‌ ಗೇಟ್‌ಗಳ ಕಳವು: ಆರೋಪಿಯ ಬಂಧನ

11:20 PM Jul 07, 2024 | Team Udayavani |

ಮಂಗಳೂರು: ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್‌ ಟವರ್‌ಗಳ ಬ್ಯಾಟರಿ ಮತ್ತು ಕಾಂಪೌಂಡ್‌ ಗೇಟ್‌ಗಳನ್ನು ಕಳವು ಮಾಡಿದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.

Advertisement

ಕೇರಳ ಕೊಲ್ಲಂನ ಇಟ್ಟಿ ಪನಿಕರ್‌ (58) ಬಂಧಿತ ಆರೋಪಿ. ಈತನಿಂದ ಮೊಬೈಲ್‌ ಟವರ್‌ಗೆ ಸಂಬಂಧಿಸಿದ ಒಟ್ಟು ಅಂದಾಜು 2.56 ಲಕ್ಷ ರೂ. ಮೌಲ್ಯದ 39 ಬ್ಯಾಟರಿಗಳು, ಅಂದಾಜು 52,000 ರೂ. ಮೌಲ್ಯದ 3 ಕಬ್ಬಿಣದ ಗೇಟ್‌ಗಳು, ಅಂದಾಜು 5 ಲಕ್ಷ ರೂ. ಮೌಲ್ಯದ ಪಿಕಪ್‌ ಗೂಡ್ಸ್‌ ಟೆಂಪೊ ಸೇರಿದಂತೆ 8.08 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್‌ ಮತ್ತು ದಿನೇಶ್‌ ಕುಮಾರ್‌ ನಿರ್ದೇಶನದಂತೆ ಎಸಿಪಿ ಮನೋಜ್‌ ಕುಮಾರ್‌, ಮೂಲ್ಕಿ ಠಾಣಾ ನಿರೀಕ್ಷಕ ವಿದ್ಯಾಧರ ಡಿ.ಬಾಯ್ಕೆರಿಕರ್‌, ಪಿಎಸ್‌ಐ ವಿನಾಯಕ ಭಾವಿಕಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್‌ಐ ಸಂಜೀವ ಎ.ಪಿ., ಹೆಡ್‌ಕಾನ್‌ಸ್ಟೆಬಲ್‌ ಕಿಶೋರ್‌ ಕೋಟ್ಯಾನ್‌, ಮಹೇಶ್‌, ಶಶಿಧರ, ಚಂದ್ರಶೇಖರ್‌, ವಿಶ್ವನಾಥ, ವೀರೇಶ್‌, ಕಾನ್‌ಸ್ಟೆಬಲ್‌ಗ‌ಳಾದ ಅರುಣ್‌ ಕುಮಾರ್‌, ಸುನೀಲ್‌, ಚಿತ್ರಾ ಅವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next