Advertisement

ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಗೆ ನರೇಂದ್ರ ಬಾತ್ರಾ ನೂತನ ಅಧ್ಯಕ್ಷ

07:30 AM Dec 15, 2017 | |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ (ಎಐಎಚ್‌) ಅಧ್ಯಕ್ಷರಾಗಿರುವ ನರೇಂದ್ರ ಬಾತ್ರಾ ಅವರು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಇದಕ್ಕೂ ಮೊದಲು ಅಖೀಲ ಭಾರತೀಯ ಟೆನಿಸ್‌ ಸಂಸ್ಥೆ (ಎಐಟಿಎ) ಅಧ್ಯಕ್ಷ ಅನಿಲ್‌ ಖನ್ನಾ ಹಾಗೂ ಭಾರತೀಯ ವೇಟ್‌ಲಿಫ್ಟಿಂಗ್‌ ಒಕ್ಕೂಟ (ಐಡಬ್ಲ್ಯುಎಫ್) ಮುಖ್ಯಸ್ಥ ಬೀರೇಂದ್ರ ಬೈಶ್ಯ ಚುನಾವಣೆಗೆ ಸ್ಪರ್ಧಿಸಿದ್ದರು. ಕೊನೆಯ ಕ್ಷಣದಲ್ಲಿ ಇವರಿಬ್ಬರೂ ನಾಮಪತ್ರವನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಹೀಗಾಗಿ ಬಾತ್ರಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜೀವ್‌ ಮೆಹ್ತಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next