Advertisement
ಕೋವಿಡ್-19 ವೈರಸ್‌ಗಳನ್ನು ಜೆನೋಟಿಕ್‌ಎಂದು ಕರೆಯುತ್ತಾರೆ.ಅಂದರೆ ಇವುಗಳು ಪ್ರಾಣಿಗಳ ಮತ್ತು ಮನುಷ್ಯರ ಮಧ್ಯೆ ಹರಡುತ್ತವೆೆ. ವಿಶ್ವಆರೋಗ್ಯ ಸಂಸ್ಥೆಯ ಪ್ರಕಾರ ಸಾರ್ಷ್-ಸಿಒವಿ ಜಾತಿಯ ವೈರಸ್, ಕಾಡು ಬೆಕ್ಕುಗಳು ಮತ್ತು ಒಂಟೆಗಳಿಂದ ಸುಲಭವಾಗಿ ಹರಡುವಂತದ್ದು. ಆದರೆ ಈ ವೈರಸ್‌ಗಳ ಮೂಲ ಬಾವಲಿಗಳು ಎಂದು ಹೇಳಲಾಗುತ್ತವೆ.
ಹಲವು ಸಂಶೋಧ ನೆಗಳ ಪ್ರಕಾರ ಈ ಜೆನೋಟಿಕ್ ವೈರಸ್‌ಗಳು ಸಾಮಾನ್ಯವಾಗಿ ಬಾವಲಿ ಗಳಲ್ಲಿದ್ದು, ಈ ಹಿಂದೆ ಜಗತ್ತಿನ ವಿವಿಧೆಡೆಗಳಲ್ಲಿ ವಿವಿಧ ಸಂದರ್ಭದಲ್ಲಿ ಹೊರ ಹೊಮ್ಮಿವೆ. ಈ ವೈರಸ್‌ಗಳಿಗೆ ಬಾವಲಿಗಳೇ ಆವಾಸಸ್ಥಾನಗಳು. ನಿಫಾ, ಹೆಂಡ್ರ, ಮಾರ್‌ಬರ್ಗ್ ಇತ್ಯಾದಿ ವೈರಸ್‌ಗಳು ಬಂದಿದ್ದು ಬಾವಲಿಗಳಿಂದಲೇ. 2002-04ರಲ್ಲಿ ಸಾರ್ಷ್ ವೈರಸ್ ಬಂದಾಗ ಸುಮಾರು 800 ಮಂದಿ ಪ್ರಾಣತೆತ್ತಿದ್ದರು. ಸುಮಾರು 50ರಷ್ಟು ದೇಶಗಳಲ್ಲಿ ತೀವ್ರತಲ್ಲಣ ಸೃಷ್ಟಿಸಿತ್ತು. 2017ರಲ್ಲಿ ಇದು ಬಾವಲಿಗಳಿಂದ ಹರಡಿದ್ದು ಎಂಬುದು ಗೊತ್ತಾಯಿತು. ವುಹಾನ್ ಇನ್‌ಸ್ಟಿಟ್ಯೂಟ್ ಆಫ್‌ಟೆಕ್ನಾಲಜಿಯ ಸಂಶೋಧಕರ ಪ್ರಕಾರ ಅಗಾಧ ಪ್ರಮಾಣದಲ್ಲಿ ವೈರಸ್‌ಗಳಿರುವ ಈ ಬಾವಲಿಗಳ ಮೂಲ ಚೀನಾದ ಯುನಾನ್ ಪ್ರಾಂತ್ಯದ ಗುಹೆಗಳು. ಹಲವು ವರ್ಷ ದಕ್ಷಿಣ ಚೀನಾದ ವಿವಿಧ ಭಾಗಗಳಲ್ಲಿರುವ ಗುಹೆಗಳನ್ನು ಅಧ್ಯಯನ ಮಾಡಿದ್ದು, ಹಾರ್ಸ್‌ಶೂ ಬಾವಲಿಗಳು ಎನ್ನುವ ಒಂದು ವರ್ಗ ಮಾನವರಿಗೆ ವೈರಸ್‌ಗಳನ್ನು ಹರಡುತ್ತದೆ ಎಂಬುದನ್ನು ಪತ್ತೆ ಹಚ್ಚಲಾಗಿತ್ತು. ಕೆಲವು ಸಂಶೋಧಕರ ಪ್ರಕಾರ ಇದೇ ಜಾತಿಯ ಬಾವಲಿಗಳಲ್ಲಿ ಕೋವಿಡ್ 19 ವೈರಸ್‌ಗಳು ಕೂಡ ಇರಬಹುದು ಎನ್ನುತ್ತಾರೆ.
Related Articles
ರೇಬಿಸ್ ವೈರಸ್‌ಒಂದನ್ನು ಹೊರತು ಪಡಿಸಿ, ಉಳಿದ ರೀತಿಯ ವೈರಸ್‌ಗಳನ್ನು ಬಾವಲಿಗಳು ತಮ್ಮ ದೇಹದಲ್ಲಿ ಹೊಂದಿರುತ್ತವೆ. ಹಾಗಾಗಿ ಏನೂ ಆಗದು. ಸಂಶೋಧಕರ ಪ್ರಕಾರ, ಬಾವಲಿಗಳು ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ವಿಕಾಸದ ಸಂದರ್ಭದಲ್ಲಿ ಬಾವಲಿಗಳನ್ನು ಹಾರಲೂ ಅನುವು ಮಾಡಿಕೊಟ್ಟದ್ದು ಇದೇ ಎನ್ನಲಾಗಿದೆ. ಅಧ್ಯಯನಗಳ ಪ್ರಕಾರ ಬಾವಲಿ ಹಾರುವ ಸಂದರ್ಭದಲ್ಲಿ ಅವುಗಳಲ್ಲಿ ಶಕ್ತಿ ಉತ್ಪಾದನೆಯ ವೇಳೆಗೆ ದೇಹದಲ್ಲಿರುವ ಜೀವಕೋಶಗಳು ಎರಡಾಗಿ ಡಿಎನ್‌ಎಗಳು ಸಣ್ಣದಾಗಿ ಒಡೆಯಲು ಕಾರಣವಾಗುತ್ತವೆ. ಮನುಷ್ಯನಲ್ಲಾದರೆ ಇದೇ ಪ್ರಕ್ರಿಯೆ ಯಾದಾಗ ಒಡೆದ ಡಿಎನ್‌ಎ ದೇಹಕ್ಕೆ ಹೊಸ ಪ್ರವೇಶವೆಂದು ಭಾವಿಸಿ ಜೀವಕೋಶಗಳು ಸೆಣಸಲು ಆರಂಭಿಸುತ್ತವೆ (ಜ್ವರ ಬರುವುದು ) ಆದರೆ ಬಾವಲಿಗಳಲ್ಲಿ ಹೀಗಾಗದೇ ಇರುವುದರಿಂದ ಪ್ರತಿಕ್ರಿಯಿಸುವುದಿಲ್ಲ. ಇದೇ ವೈರಸ್‌ಗಳ ಆವಾಸ ತಾಣವಾಗಲು ಕಾರಣವಾಯಿತು ಎನ್ನಲಾಗಿದೆ.
Advertisement
2007ರಲ್ಲೇ ಊಹೆಅಮೆರಿಕನ್ ಸೊಸೈಟಿಆಫ್ ಮೈಕ್ರೊಬಯಲಾಜಿ 2007ರಲ್ಲೇ ಸಾರ್ಸ್‌ರೀತಿಯ ಸಾಂಕ್ರಾಮಿಕ ಕಾಯಿಲೆ ಹರಡುವ ಬಗ್ಗೆ ಊಹಿಸಿತ್ತು. ಕೋವಿಡ್ ವೈರಸ್ ವಂಶವಾಹಿಗೆ ಬದಲಾಗುವ ಗುಣ ಹೊಂದಿರುವುದರಿಂದ ಹೊಸ ಮಾದರಿಯ ಸಾಂಕ್ರಾಮಿಕ ಕಾಯಿಲೆ ಹರಡುವ ಸಾಧ್ಯತೆ ಇದೆ. ಸದ್ಯ ಸಾರ್ಷ್-ಸಿಒವಿ ವೈರಸ್‌ಗಳ ಆವಾಸ ಸ್ಥಾನವಾದ ಹಾರ್ಸ್‌ಶೂ ಬಾವಲಿಗಳು ದಕ್ಷಿಣ ಚೀನದಲ್ಲಿ ವ್ಯಾಪಕವಾಗಿದ್ದು, ಇದು ಒಂದು ಟೈಂ ಬಾಂಬ್‌ನಂತೆಯೇ ಇದೆ. ಸಾರ್ಷ್ ಮತ್ತೆ ಉದ್ಭವವಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಪೂರ್ವ ಸಿದ್ಧತೆ ನಡೆಸುವುದು ಸೂಕ್ತ ಎಂದು ಸಂಶೋಧಕರು ತಿಳಿಸಿದ್ದರು ಎನ್ನಲಾಗಿದೆ.