Advertisement

ಮೂಲ ಸೌಲಭ್ಯ ಮೇಲ್ದರ್ಜೆಗೇರಿಸಿ

10:35 PM Jul 09, 2021 | Team Udayavani |

ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿನಗರೋತ್ಥಾನಯೋಜನೆಯಮೂಲಕ ಮೂಲ ಸೌಲಭ್ಯ ಒದಗಿಸುವ ಸಲುವಾಗಿಜಾರಿಗೊಳಿಸಿರುವ ವಿಶೇಷ ಅನುದಾನದಲ್ಲಿಕೈಗೊಂಡಿರುವ ಕಾಮಗಾರಿಗಳನ್ನು ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಮುಖ್ಯ ಅಭಿಯಂತರ ಸತ್ಯನಾರಾಯಣ, ಸಹಾಯಕ ಕಾರ್ಯಪಾಲಕಅಭಿಯಂತರ ಪ್ರಸಾದ್‌ ಅವರ ನೇತೃತ್ವದ ತಂಡಚಿಕ್ಕಬಳ್ಳಾಪುರ ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ವೇಳೆಯಲ್ಲಿ ನಗರದ ವಿವಿಧ ವಾರ್ಡ್‌ಗಳಿಗೆಭೇಟಿನೀಡಿ,ಈಗಾಗಲೇನಗರೋತ್ಥಾನಯೋಜನೆಯಡಿಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನುಪರಿಶೀಲಿಸಲಾಯಿತು.ಅಲ್ಲದೆ,ನಗರೋತ್ಥಾನಯೋಜನೆಮೂಲಕ ವಿಶೇಷ ಅನುದಾನದಡಿ ಕೈಗೊಂಡಿರುವಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆಪ್ರಗತಿ ಪರಿಶೀಲಿಸಿದರು.

ಚಿಕ್ಕಬಳ್ಳಾಪುರ ನಗರ ಮಾದರಿಯಾಗಿ ಅಭಿವೃದ್ಧಿಗೊಳಿಸಲು ವಿಶೇಷ ಕ್ರಮ ವಹಿಸಬೇಕೆಂದು ಸೂಚನೆನೀಡಿದರಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಗರೋತ್ಥಾನಯೋಜನೆ ಮೂಲಕ ಮೂಲ ಸೌಲಭ್ಯಗಳನ್ನುಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆನೀಡಿದರು.

ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಕಾಳಜಿವಹಿಸಿ ನಗರಗಳ ಸೌಂದರ್ಯವನ್ನು ಹೆಚ್ಚಿಸಲು ಆದ್ಯತೆನೀಡಬೇಕು ಎಂದು ವಿವರಿಸಿದರು. ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ಎಂ.ರೇಣುಕಾ,ಕಾರ್ಯಪಾಲಕ ಅಭಿಯಂತರ ಪುರಂದರ್‌, ಸಹಾಯಕಕಾರ್ಯಪಾಲಕ ಅಭಿಯಂತರ ವಹಿದಾ ಬೇಗಂ,ನಗರಸಭೆಯ ಪೌರಾಯುಕ್ತ ಡಿ.ಲೋಹಿತ್‌, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next