Advertisement

ಕೋವಿಡ್ ಸಂಕಷ್ಟದಲ್ಲೂ ಮೂಲ ಸೌಲಭ್ಯ: ಶಾಸಕ ಪೂಜಾರ

12:31 PM Aug 14, 2020 | Suhan S |

ರಾಣಿಬೆನ್ನೂರ: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್ ಹರಡುವಿಕೆಯ ಸಂಕಷ್ಟದಲ್ಲಿದ್ದರೂ ಸಹ ಸಾರ್ವಜನಿಕರ ಆರೋಗ್ಯ ಸಂರಕ್ಷಣೆಯ ಜೊತೆಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

Advertisement

ಗುರುವಾರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಬಸ್‌ ನಿಲ್ದಾಣದ ಆವರಣದಲ್ಲಿ ಕಾಂಕ್ರೀಟ್‌ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಆರೋಗ್ಯ ಲೆಕ್ಕಿಸದೇ ಜನರ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿದ್ದಾರೆ ಎಂದರು.

ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಿಂದ ತಾಲೂಕಿನಲ್ಲಿ ಮನೆಗಳು ಬಿದ್ದಿವೆ. ಅವುಗಳನ್ನು ಸರ್ವೇ ಮಾಡಿ ಮನೆ ಬಿದ್ದ ಫಲಾನುಭವಿಗಳಿಗೆ 10 ಸಾವಿರ ರೂ. ಪರಿಹಾರ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ಈಗಾಗಲೇ ತಾಲೂಕಿನಲ್ಲಿ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಿ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರ ಕೊಡಲಾಗುವುದು ಎಂದರು.

ಗ್ರಾಪಂ ಸದಸ್ಯ ತಿಪ್ಪೇಶ ಮಡಿವಾಳರ, ಎಂ.ಎನ್‌. ಬಾಳಣ್ಣನವರ, ನೂರ್‌ ಸಾಬ್‌ ಕುಪ್ಪೇಲೂರು, ನಾರಾಯಣಪ್ಪ ದುರಗೇರಿ, ನವೀನ್‌ ಗಡ್ಡದ, ಮಂಜುನಾಥ ಗಂಜಾಮದ, ಶಿವು ಗುರುಂ, ಬಸವರಾಜ ಕೇಲಗಾರ, ರಮೇಶ ಪಾಟೀಲ, ಕುಬೇರಪ್ಪ ಒದರರ, ಮಾರುತಿ ಬೆನಕನಕೊಂಡ, ಮಾರುತಿ ದೊಡ್ಮನಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next