Advertisement

ಮೂಲ ಸೌಲಭ್ಯ ವಂಚಿತ ಶಾಲೆ

03:55 PM Jan 02, 2020 | Team Udayavani |

ಮುಂಡಗೋಡ: ಪಟ್ಟಣದ -ಯಲ್ಲಿ ಮೂಲ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಸರಕಾರ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳೆ ಉತ್ತಮ ಎಂಬ ಭಾವನೆ ಜನರಲ್ಲಿ ನಿರ್ಮಾಣವಾಗುತ್ತಿದೆ. ಆದರೆ ಮುಂಡಗೋಡ ಸಿಂಡಿಕೇಟ್‌ ಬ್ಯಾಂಕ್‌ ಪಕ್ಕದಲ್ಲಿ ಭಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಮೌಲಾನಾ ಆಜಾದ್‌ ಆಂಗ್ಲ ಮಾಧ್ಯಮ ಮಾದರಿ ಶಾಲೆ ವಿದ್ಯಾರ್ಥಿಗಳು ಮಾತ್ರ ಮೂಲ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಶಾಲೆಯಲ್ಲಿ ಸದ್ಯ ಆರು, ಏಳು ಹಾಗೂ ಎಂಟನೇ ತರಗತಿಯಲ್ಲಿ ಒಟ್ಟು 145ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಭಾಡಿಗೆ ಕಟ್ಟಡ: ಪಪಂ ವಾಣಿಜ್ಯ ಮಳಿಗೆಯನ್ನು ಕಳೆದ 3 ವರ್ಷದಿಂದ ಈ ಶಾಲೆ ನಡೆಸಲು ಭಾಡಿಗೆ ಪಡೆದುಕೊಳ್ಳಲಾಗಿದೆ. ಆದರೆ ಕಟ್ಟಡ ತುಂಬಾ ಹಳೆಯದಾಗಿದೆ. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿಲ್ಲ. ವಿದ್ಯುತ್‌ ವ್ಯವಸ್ಥೆ, ಶೌಚಾಲಯವಿಲ್ಲ. ಶುದ್ಧ ಕುಡಿಯುವ ನೀರಿನ ಯಂತ್ರ ಸರಕಾರದಿಂದ ಬಂದಿದೆ. ಆದರೆ ಶಾಲೆಯಲ್ಲಿ ವಿದ್ಯುತ್‌ ಇಲ್ಲದ ಕಾರಣ ಅದನ್ನು ಅಳವಡಿಸಿಲ್ಲ. ಶಾಲೆಯ ಕೆಳಗಡೆಯಿಂದ ನೀರನ್ನು ತಂದು ಮಕ್ಕಳಿಗೆ ಕೊಡಲಾಗುತ್ತಿದೆ. ಈ ಕಟ್ಟಡ ಹಳೆಯದಾಗಿರುವುದರಿಂದ ಅಲ್ಲಲ್ಲಿ ವಿದ್ಯುತ್‌ ವಾಯರ್‌ಗಳು ಜೋತು ಬಿದ್ದಿವೆ. ಅಲ್ಲದೆ ಶಾಲೆಯ ಮೇಲ್ಭಾಗದ ಕಟ್ಟಡದಲ್ಲಿ ಎರಡು ಶೌಚಾಲಯಗಳಿದ್ದು ಅವುಗಳನ್ನೆ ಸದ್ಯ ಬಳಸ ಲಾಗುತ್ತಿದೆ. ಶಾಲೆಗೆ ಅಧಿಕೃತ ಶೌಚಾಲಯಗಳಿಲ್ಲ.

ಶಿಕ್ಷಕರ ಕೊರತೆ: ಸರಕಾರವು ಮೌಲಾನಾ ಆಜಾದ್‌ ಆಂಗ್ಲ ಮಾಧ್ಯಮ ಮಾದರಿ ಶಾಲೆಯನ್ನು ಕಳೆದ 3ವರ್ಷಗಳ ಹಿಂದೆ ತಾಲೂಕಿಗೆ ಮಂಜೂರಿ ಮಾಡಿತು. ಆದರೆ ಶಾಲೆ ಆರಂಭಿಸಲು ಬೇರೆ ತಾಲೂಕಿನ ಶಿಕ್ಷಕರೊಬ್ಬರನ್ನು ನಿಯೋಜನೆ ಮಾಡಿದ್ದು ಇನ್ನೂ ಐದು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ.

ಬೇರೆ ಶಾಲೆಯಿಂದ ಬಿಸಿಯೂಟ: ಈ ಶಾಲೆಯಲ್ಲಿ ಸ್ಥಳದ ಕೊರತೆ ಇರುವುದರಿಂದ ಬಿಸಿಯೂಟ ತಯಾರಿಕಾ ಕೊಠಡಿ ಹಾಗೂ ದಾಸ್ತಾನು ಕೊಠಡಿ ಇಲ್ಲದ ಕಾರಣ ಪಟ್ಟದಲ್ಲಿರುವ ಶಾಸಕರ ಮಾದರಿ ಶಾಲೆಯಿಂದಲೆ ಬಿಸಿಯೂಟ ಹಾಗೂ ಹಾಲು ತಯಾರಿಸಿ ರಿಕ್ಷಾ ಮೂಲಕ ಈ ಶಾಲೆಗೆ ಊಟ, ಹಾಲು ತಂದು ಮಕ್ಕಳಿಗೆ ಕೊಡಲಾಗುತ್ತದೆ.

Advertisement

ಭಯದಲ್ಲಿ ಮಕ್ಕಳು: ಶಾಲಾ ಕೊಠಡಿಯ ಹೊರ ಭಾಗದಲ್ಲಿ ಐದಾರು ಕಡೆ ದೊಡ್ಡ ಪ್ರಮಾಣದ ಹೆಜ್ಜೆನು ಗಳು ಗೂಡು ಕಟ್ಟಿಕೊಂಡಿವೆ. ಈ ಜೇನು ಹುಳುಗಳು ಆಗಾಗ ಹಾರಾಡುತ್ತಿರುತ್ತವೆ. ಇದರಿಂದ ವಿದ್ಯಾರ್ಥಿಗಳು ಭಯದಲ್ಲಿಯೇ ಪಾಠ ಕಲಿಯಬೇಕಾದ ಪರಿಸ್ಥಿತಿಯಿದೆ. ಈ ಕುರಿತು ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಕ್ಕಳಿಗೆ ಮೂಲ ಸೌಲಭ್ಯ ಒದಗಿಸುವುದರ ಮೂಲಕ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲಿ.

ಸದ್ಯದಲ್ಲಿಯೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು.ಬಸವರಾಜ ಬಡಿಗೇರ, ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next