Advertisement

ವಿಜೃಂಭಣೆಯಿಂದ ನಡೆದ ಬಸವೇಶ್ವರಸ್ವಾಮಿ ರಥೋತ್ಸವ

04:12 PM May 08, 2019 | Suhan S |

ಮಾಗಡಿ: ಇತಿಹಾಸ ಪ್ರಸಿದ್ಧ ಕರ‌್ಲಹಳ್ಳಿ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಅತ್ಯಂತ ವಿಜೃಂಭಣೆಯಿಂದ ರಥೋತ್ಸವ ಜರುಗಿತು.

Advertisement

ಶಾಸಕ ಎ.ಮಂಜು, ಎಂಎಲ್ಸಿ ಆ.ದೇವೇಗೌಡ, ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಜಿಪಂ ಸದಸ್ಯೆ ಚಂದ್ರಮ್ಮ, ಟ್ರಸ್ಟ್‌ ಅಧ್ಯಕ್ಷ ರಂಗಸ್ವಾಮಯ್ಯ ಸೇರಿದಂತೆ, ಸಹಸ್ರಾರು ಭಕ್ತರು, ಗಣ್ಯರು ಬಸವೇಶ್ವರಸ್ವಾಮಿ ರಥೋತ್ಸವವನ್ನು ಭಕ್ತಿ ಭಾವದಿಂದ ಎಳೆದು ದೇವರಿಗೆ ಬಾಳೆಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು.

ದೇವಾಲಯ ಪ್ರದಕ್ಷಿಣೆ: ರಥೋತ್ಸವದ ಅಂಗವಾಗಿ ರೈತರು ತಮ್ಮ ರಾಸುಗಳನ್ನು ದೇವಸ್ಥಾನದ ಬಳಿ ಕರೆತಂದು ಭಕ್ತಿಯಿಂದ ಪೂಜಿಸಿ ದೇವಸ್ಥಾನದ ಸುತ್ತಲು ಪ್ರದಕ್ಷಿಣೆ ಹಾಕಿಸಿ ರಾಸುಗಳಿಗೆ ರೋಗಗಳು ಬಾರದಂತೆ ಪ್ರಾರ್ಥಿಸಿದರು. ಮಹಿಳೆಯರು ತಂಬಿಟ್ಟಿನಾರತಿ ಹೊತ್ತು ರಥೋತ್ಸವದ ಪ್ರದಕ್ಷಿಣೆ ಹಾಕಿ ದೇವರಿಗೆ ನೈವೆದ್ಯ ಅರ್ಪಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಸಾಮೂಹಿಕ ಅನ್ನ ಸಂತರ್ಪಣೆ: ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಜಾತ್ರಾ ಮಹೋತ್ಸವದ ಗ್ರಾಮೀಣ ಸೊಗಡು ನಿಜಕ್ಕೂ ಎಲ್ಲರನ್ನೂ ವಿಸ್ಮಯಗೊಳಿಸಿತ್ತು. ರೈತರು ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಧವನ ಧಾನ್ಯಗಳನ್ನು ತುಂಬಿಕೊಂಡು ಬಂದು ಮರದ ಕೆಳಗಡೆ ಸಂಪ್ರದಾಯದಂತೆ ಕೊಪ್ಪರಿಕೆಯಲ್ಲಿ ಮುದ್ದೆ, ಕಾಳು ಸಾರು ತಯಾರಿಸಿ ಸಾಮೂಹಿಕ ಅನ್ನಸಂತರ್ಪಣೆ ಸಂಜೆವರೆವಿಗೂ ಅವಿರತವಾಗಿ ನಡೆಯಿತು.

ನಾಟಕ ಪ್ರದರ್ಶನ: ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜಗಜೋತಿ ಬಸವೇಶ್ವರರ ನಾಟಕ ಪ್ರದರ್ಶನ ಸಹ ನಡೆಯಿತು. ಈ ಭಾಗದ ರೈತರು ಈ ಬಸವಣ್ಣ ದೇವರನ್ನು ನಂಬಿ ಕೃಷಿ ಚಟುವಟಿಕೆ ಆರಂಭಿಸುವುದು.

Advertisement

ಸಂಪ್ರದಾಯ ಮರೆಯದ ಭಕ್ತರು: ನಂಬಿದವರನ್ನು ಈ ಕಲ್ಲು ಬಸವಣ್ಣ ಕೈಬಿಡುವುದಿಲ್ಲ ಎಂಬ ನಂಬಿಕೆಯಿಂದ ಸಹಸ್ರಾರು ಭಕ್ತರು ಈ ದೇವರಿಗೆ ಹರಿಕೆ ಹೊತ್ತು ಈ ಕಲ್ಲು ಬಸವಣ್ಣನನ್ನು ಮೇಲೆತ್ತಿ ತಮ್ಮ ಇಚ್ಛಾನುಸಾರ ಭಕ್ತಿ ಸಮರ್ಪಿಸುವುದು ಹರಿಕೆ ತೀರಿಸುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ಮುಖಂಡರಾದ ಕರಲಮಂಗಲದ ಮಂಜುನಾಥ್‌, ಚೆನ್ನರಾಜು, ಗೋವಿಂದರಾಜು, ವೆಂಕಟೇಶ್‌, ಶ್ರೀನಿವಾಸ್‌ ಇತರರು ಇದ್ದರು.

ವಿವಿಧಡೆ ಬಸವ ಜಯಂತಿ: ತಾಲೂಕಿನ ವಿವಿಧೆಡೆ ಜಗಜೋತಿ ಬಸವಣ್ಣನವರ ಜನ್ಮದಿನಾಚರಣೆ ಅದ್ಧೂರಿಯಾಗಿ ನಡೆಯಿತು. ಡೂ.ಲೈಟ್ ವೃತ್ತ, ಕಲ್ಯಾ, ಸಾತನೂರು, ವಿ.ಜಿ.ದೊಡ್ಡಿ, ತಿಪ್ಪಸಂದ್ರ, ಸೋಲೂರು, ಗುಡೇಮಾರನಹಳ್ಳಿ ಇತರೆಡೆ ಬಹಳ ಅದ್ದೂರಿಯಾಗಿ ಬಸವಣ್ಣನವರ ಜಯಂತಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next