Advertisement
ಶ್ರೀ ಬೀರಲಿಂಗೇಶ್ವರ ಸ್ವಾಮಿ, ಶ್ರೀ ಕೋಡಿ ಮಾರಮ್ಮ, ಶ್ರೀ ಏಕನಾಥೇಶ್ವರಿ ದೇವಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವರುಗಳು ರಥದ ಸುತ್ತಾ ಪ್ರದಕ್ಷಿಣೆ ಹಾಕಿದವು. ನಂತರ ಹಿರಿಯರು ರಥಕ್ಕೆ ಪೂಜೆ ಸಲ್ಲಿಸಿ ರಥದ ಗಾಲಿಗೆ ತೆಂಗಿನಕಾಯಿ ಒಡೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಮರ್ಪಿಸಿದರು. ಮೆರವಣಿಗೆಯಲ್ಲಿ ಕೀಲುಕುದುರೆ, ಭಜನಾ ಮೇಳ, ಝಾಂಜ್, ಕುದುರೆ ಕುಣಿತ, ಹಲಗೆ ಮತ್ತು ಡೊಳ್ಳು ತಂಡಗಳು ಪಾಲ್ಗೊಂಡಿದ್ದವು. ರಥೋತ್ಸವದ ಪ್ರಯುಕ್ತ ಜಾತ್ರಾ ಅಂಗಡಿಗಳು ಇದ್ದವು. ಪೊಲೀಸರು ಭದ್ರತೆ ಒದಗಿಸಿದ್ದರು. ಹರಿಹರ -ಹೊನ್ನಾಳಿ ಮುಖ್ಯ ರಸ್ತೆಯನ್ನು ರಥೋತ್ಸವ ಮುಗಿಯುವವರೆಗೆ ಬಂದ್ ಮಾಡಲಾಗಿತ್ತು. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದ ಪ್ರಾರಂಭದಲ್ಲಿ ಶ್ರೀ ಬೀರಲಿಂಗೇಶ್ವರ ಕಾರ್ಣಿಕ ನಡೆಯಿತು. ಆವಾಹಿತನು ಬಿಲ್ಲನ್ನು ಏರಿ ಸದ್ದು ಎಂದು “ಬಂಗಾರದ ಕಳಸ ಬಿರಿ ಬಿಟ್ಟಿತಲೆ ಅದಕ್ಕೆ ನಾನಿದೀನಿ’ ಎಂದು ಕಾರ್ಣಿಕ ನುಡಿದನು.
Related Articles
ಜಗಳೂರು: ತಾಲೂಕಿನ ಬಿದರಕರೆ ಗ್ರಾಮದ ಶ್ರೀಗುರು ಸಿದ್ದೇಶ್ವರ ಸ್ವಾಮಿ ದೊಡ್ಡ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
Advertisement
ಸೋಮವಾರ ಸಂಜೆ ಶ್ರೀಗುರು ಸಿದ್ದೇಶ್ವರ ದೊಡ್ಡಸ್ವಾಮಿ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಪೂಜಾರಿ ತೇರಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ದೇವರನ್ನು ಸ್ಮರಿಸುತ್ತ ರಥವನ್ನು ಎಳೆದರು. ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಹಿಸಿದ್ದರು. ಮಾಜಿ ಶಾಸಕ ಎಚ್.ಪಿ ರಾಜೇಶ್, ತಾಪಂ ಸದಸ್ಯ ಬಸವರಾಜ್, ಮುಖಂಡರಾದ ಸತೀಶ್ ಇತರರು ಇದ್ದರು.