ಬಸವಕಲ್ಯಾಣ: ಉನ್ನತ ವೈದ್ಯಕೀಯ ಶಿಕ್ಷಣ ಪಡೆದ ವೈದ್ಯಾಧಿಕಾರಿಗಳು ನಗರದೆಡೆಗೆ ಮುಖ ಮಾಡದೇ ಗ್ರಾಮೀಣ ಭಾಗದ ಬಡಜನರ ಸೇವೆ ಮಾಡುವಲ್ಲಿ ಆಸಕ್ತಿ ವಹಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಕಾರ್ಮಿಕ ಸಚಿವ ಸಂಭಾಜಿರಾವ್ ಪಾಟೀಲ ಹೇಳಿದರು. ಹುಲಸೂರನಲ್ಲಿ ಚಾಕೋತೆ ಪರಿವಾರ ನಿರ್ಮಿಸಿದ ಬಸವೇಶ್ವರ ಆಸತ್ರೆ ನೂತನ ಕಟ್ಟದ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮಹಿಳಾ ವೈದ್ಯಾಧಿಕಾರಿಗಳು ಇಲ್ಲದೆ ಮಹಿಳಾ ರೋಗಿಗಳಿಗೆ ತೊಂದರೆಯಾಗುತ್ತಿದೆ. ತಾವು ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ನಿರ್ಮಿಸಿ ಚಾಕೋತೆ ಪರಿವಾರದವರು ರೋಗಿಗಳ ಹಿತ ಕಾಪಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಡಾ| ಮಲ್ಲಿಕಾರ್ಜುನ ಶಂಕದ್ ಮಾತನಾಡಿದರು. ಡಾ| ಶಿವಾನಂದ ಮಹಾಸ್ವಾಮೀಜಿ, ಸಾಯಗಾಂವನ ಶ್ರೀ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಜಿಪಂ ಸದಸ್ಯ ಸುಧೀರ ಕಾಡಾದಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಓಂಪ್ರಕಾಶ ಚಾಕೋತೆ, ಲಾತೂರ ಜಿಪಂ ಅಧ್ಯಕ್ಷಮೀಲಿಂದ ಲಾತೂರೆ, ನಿಲಂಗಾ ತಾಪಂ ಅಧ್ಯಕ್ಷ ಅಜೀತ ಮಾನೆ, ಡಾ| ಸುಜಾತಾ ಚಾಕೋತೆ, ಪ್ರಮುಖರಾದ ಸಂಜಯ ದುರವೆ, ಮಲ್ಲಿಕಾರ್ಜುನ ಚಾಕೋತೆ, ದಗಡು ಸಾಳಂಕೆ ಉಪಸ್ಥಿತರಿದ್ದರು. ನವಲಿಂಗ ಪಾಟೀಲ ನಿರೂಪಿಸಿದರು