Advertisement

ಕುರುಬಖೇಳಗಿಯಲ್ಲಿ ಬಸವೇಶ್ವರ ಜಾತ್ರೆ

01:15 PM May 04, 2022 | Team Udayavani |

ಭಾಲ್ಕಿ: ವಿಶ್ವಗುರು ಬಸವಣ್ಣನವರ ಸಂದೇಶಗಳು ಸಾರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಪ್ರತಿಪಾದಿಸಿದರು.

Advertisement

ತಾಲೂಕಿನ ಕುರುಬಖೇಳಗಿ ಗ್ರಾಮದ ಬಸವೇಶ್ವರ ಮಂದಿರದ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಬಸವದರ್ಶನ ಪ್ರವಚನ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಮ್ಮ ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರಗಳಿವೆ. ಆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಹೀಗಾಗಿ ಸಮಸ್ಯೆಗಳಿಗೆ ಹೆದರಿ ಓಡಿ ಹೋಗಲು ನೋಡುತ್ತೇವೆ. ಇದು ಮೂರ್ಖರ ಲಕ್ಷಣ. ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಎಲ್ಲ ರೀತಿಯ ಸಮಸ್ಯೆಗಳಿಗೂ ಪರಿಹಾರಗಳಿವೆ. ನಾವು ಸಂಸಾರದಲ್ಲಿ ಕೆಸರಿನಲ್ಲಿ ಹುಟ್ಟಿದ ಕಮಲದಂತೆ ಯಾವುದಕ್ಕೂ ಅಂಟಿಕೊಳ್ಳದೆ ಇದ್ದೂ ಇಲ್ಲದಂಗಿರಬೇಕು. ಇದು ಉತ್ತಮ ಪುರುಷನ ಲಕ್ಷಣ ಎಂದರು.

ಕಪಲಾಪುರ ಭವಾನಿ ಮಂದಿರದ ಮಾತಾಜಿ ಎಂದೇ ಪ್ರಖ್ಯಾತರಾದ ಜಯವಂತ ಮಹಾರಾಜರು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮದ ಪ್ರಮುಖ ರಾಚಪ್ಪಾ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ಬಸವಣ್ಣನವರ ವಿಚಾರಧಾರೆಗಳು ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಕ.ಸಾ.ಪ ತಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಡಾ| ವಿಕ್ರಮ ಬಸವರಾಜ ಭಾಲ್ಕೆ, ಪತ್ರಕರ್ತ ರಾಜೇಶ ಮುಗಟೆ, ಡಾ| ಭಿಮರಾವ್‌ ಗುರುನಾಥ ಪಾಟೀಲ, ರಾಜಕುಮಾರ ಬಾಲಕುಂದೆ, ಸುಭಾಷ ಮಾಲಿಪಾಟೀಲ, ಶಿವರಾಜ ಕೋಟೆ, ಪರಮೇಶ್ವರ ಕರಡ್ಯಾಳೆ, ಶಿವಶರಣಪ್ಪ ಸೊನಾಳೆ, ಸಿದ್ರಾಮ ಪಾಟೀಲ, ಮಲ್ಲಪ್ಪಾ ಪನಶೆಟ್ಟೆ ದಾಡಗಿ, ರಾಜಕುಮಾರ ಮಾಸಿಮಾಡೆ ಇದ್ದರು.

ದೇವಿಕಾ ಬಸವರಾಜ ಹೊನ್ನಾಳೆ ಪ್ರಾರ್ಥನಾಗೀತೆ ನಡೆಸಿಕೊಟ್ಟರು. ಪ್ರಕೃತಿ ಶಿವಶರಣಪ್ಪ ಮಠಪತಿ ವಚನನೃತ್ಯ ನಡೆಸಿಕೊಟ್ಟರು. ಶಾಂತಕುಮಾರ ಪ್ರಭುಶೆಟ್ಟೆಪ್ಪಾ ಮಾಸಿಮಾಡೆ ಸ್ವಾಗತಿಸಿದರು. ವಿಷ್ಣುಕೋಟೆ ನಿರೂಪಿಸಿದರು. ಗುರುರಾಜ ಸೊನಾಳೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next