Advertisement
ಶನಿವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವುದೇ ಸರ್ಕಾರ ಇರಲಿ, ಬಸವೇಶ್ವರರ ಜನ್ಮಭೂಮಿ ಅಭಿವೃದ್ಧಿ ವಿಷಯದಲ್ಲಿ ನೈಜ ಕಾಳಜಿ ತೋರುತ್ತಿಲ್ಲ. ನಾವೇ ಶಾಸಕರು, ಸಚಿವರೆ ಸರ್ಕಾರದೊಂದಿಗೆ ಜಗಳಕ್ಕಿಳಿದು ಅಭಿವೃದ್ಧಿಗೆ ಅನುದಾನ ತರುವ ದುಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಹೀಗಾಗಿ ವಿಜಯಪುರ ಜಿಲ್ಲೆಗೆ ಬಸವೇಶ್ವರ ಹೆಸರು ನಾಮಕರಣದಿಂದ ವಿಶೇಷ ಏನೂ ಬದಲಾವಣೆ ಆಗದು. ಜಿಲ್ಲೆಗೆ ಬಸವೇಶ್ವರ ಹೆಸರು ನಾಮಕರಣ ಮಾಡಿದ ಮೇಲೆ ಕರೆಯುವುದೂ ಕಷ್ಟವಾಗುತ್ತದೆ ಎಂದರು.
ರಾಜ್ಯಕ್ಕೆ ಬಸವನಾಡು ಎಂದು ಹೆಸರಿಡುವ ವಿಚಾರಕ್ಕೂ ಸಹಮತ ವ್ಯಕ್ತಪಡಿಸದ ಸಚಿವ ಶಿವಾನಂದ,ಇದು ಸ್ತ್ಯೂಕ್ತ ವಿಚಾರವೇ ಅಲ್ಲ. ರಾಜಕೀಯ ಗಿಮಿಕ್ ಗಾಗಿ ಇಂಥ ನಡೆ ಅನುಸರಿಸುವುದು ಸರಿಯಾದ ಕ್ರಮವಲ್ಲ ಎಂದರು. ಮಹಾನ್ ಸಂತರನ್ನು ಮಹಾಪುರುಷರನ್ನು ರಾಷ್ಟ್ರೀಯ ದೃಷ್ಠಿಕೋನದಿಂದ ನೋಡಬೇಕೇ ಹೊರತು ರಾಜಕೀಯ ದೃಷ್ಠಿಕೋನದಿಂದಲ್ಲ ಎಂದರು. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಇಂಥ ವಿಷಯ ಪ್ರಸ್ತಾಪಿಸುವುದೇ ಸರಿಯಲ್ಲ. ಆ ರೀತಿ ಮಾಡುವುದೇ ತಪ್ಪು. ಇಂಥದ್ದನ್ನು ನಮ್ಮವರೇ ಮಾಡಲಿ, ಬೇರೆ ಯಾರೇ ಮಾಡಲಿ, ಅದು ತಪ್ಪೇ ಎಂದರು ಬಸವೇಶ್ವರರ ಕರ್ಮಭೂಮಿ ಬೀದರ ಜಿಲ್ಲೆ ಇದ್ದು, ನಮ್ಮ ಜಿಲ್ಲೆಗೆ ಹೆಸರಿಡಿ ಎಂಬ ಬೇಡಿಕೆ ಬಾರದೇ ಇರದು. ಒಂದಕ್ಕೊಂದು ಇತಿಹಾಸ ತಿರುಚಲು ನಾವು ಪ್ರಯತ್ನ ಮಾಡಬಾರದು ಎಂದರು. ಬಸವೇಶ್ವರ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರ ರಚಿಸುವುದಾಗಿ ಚುನಾವಣೆ ಪ್ರಚಾರಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದರು. ನಾವು ಕೂಡ ಈ ವಿಷಯವಾಗಿ ಮುಖ್ಯಮಂತ್ರಿಗೆ ಒತ್ತಾಯಿಸುತ್ತೇವೆ. ಹಾಗಂತ ಕೇವಲ ಪ್ರಾಧಿಕಾರ ಘೋಷಿಸಿದರೆ ಸಾಲದಯ, ಅಗತ್ಯ ಅನುದಾನವನ್ನೂ ನೀಡಿದರೆ ಅಭಿನಂದಿಸುವುದಾಗಿ ಸಚಿವ ಶಿವಾನಂದ ಪಾಟೀಲ ಹೇಳಿದರು. ನೇಕಾರರ ಮಕ್ಕಳಿಗೂ ಕಟ್ಟಡ ಕಾರ್ಮಿಕರ ಮಕ್ಕಳ ಸೌಲಭ್ಯ ಕಲ್ಪಿಸಲು ಯತ್ನ
ನೇಕಾರರ ಮಕ್ಕಳಿಗೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಸೌಲಭ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ, ಅದಕ್ಕಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಜವಳಿ ನೀತಿ ಇದೆ. ಕಟ್ಟಡ ಕಾರ್ಮಿಕರ ಪಟ್ಟಿಗೆ ಜವಳಿ ಕಾರ್ಮಿಕರನ್ನು ಸೇರಿಸಿ ಎಂಬುದು ನಮ್ಮ ಒತ್ತಾಯ. ಕಾರ್ಮಿಕ ಸಚಿವರಿಗೆ ಈ ವಿಷಯವಾಗಿ ಒತ್ತಾಯ ಮಾಡಿದ್ದೇನೆ ಎಂದರು. ನಮ್ಮ ಮನವಿಗೆ ಕಾರ್ಮಿಕ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದು, ನಮ್ಮ ಬೇಡಿಕೆ ಈಡೇರಿದರೆ ದೇಶದ ನೇಕಾರರ ಮಕ್ಕಳಿಗೆ ಅನುಕೂಲ ಆಗಲಿದೆ ಎಂದರು.