Advertisement

ತಗ್ಗಿದ ಹರಿವು; ಪ್ರವಾಹ ಇಳಿಮುಖ

04:41 PM Aug 24, 2020 | Suhan S |

ರಾಯಚೂರು: ಕಳೆದ ಒಂದು ವಾರದಿಂದ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿಯಲ್ಲಿ ರವಿವಾರ ನೀರಿನ ಹರಿವು ಕಡಿಮೆಯಾದ ಕಾರಣ ಪ್ರವಾಹ ತುಸು ಇಳಿಮುಖ ಕಂಡಿದೆ. ರವಿವಾರ ಬೆಳಗ್ಗೆ 1.60 ಲಕ್ಷ ಕ್ಯೂಸೆಕ್‌ ಇದ್ದ ಹರಿವಿನ ಪ್ರಮಾಣ ಸಂಜೆ ವೇಳೆಗೆ 98 ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿದೆ.

Advertisement

ಕಳೆದ ಒಂದು ವಾರದಿಂದ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ 2.50 ಲಕ್ಷಕ್ಕೂ ಅಧಿಕ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿತ್ತು. ಇದರಿಂದ ರಾಯಚೂರು, ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹೆಚ್ಚಾಗಿತ್ತು. ಜಿಲ್ಲಾಡಳಿತ ಕೂಡ ಪ್ರವಾಹ ಸ್ಥಿತಿ ನಿಭಾಯಿಸಲು ಸನ್ನದ್ಧವಾಗಿತ್ತು. ಕಳೆದ ವರ್ಷ 9 ಲಕ್ಷ ಕ್ಯೂಸೆಕ್‌ಗಿಂತ ಅಧಿ ಕ ನೀರು ಹರಿದರೂ ದೊಡ್ಡ ಪ್ರಮಾಣದ ಜೀವ ಹಾನಿಯಾಗಿರಲಿಲ್ಲ. ಆದರೆ, ಈ ಬಾರಿ 2.90 ಲಕ್ಷ ಕ್ಯೂಸೆಕ್‌ ನೀರು ಹರಿಸಿದರೂ ನಾಲ್ವರು ಕೊಚ್ಚಿಕೊಂಡು ಹೋಗುವ ಮೂಲಕ ಭಾರೀ ಪ್ರಮಾಣದ ಅನಾಹುತವೇ ಸಂಭವಿಸಿತು. ತಾಲೂಕಿನ ನಡುಗಡ್ಡೆಯಾದ ಕುರುವಪುರದ ನಾಲ್ವರು ಕೃಷ್ಣೆ ಪ್ರವಾಹಕ್ಕೆ ಸಿಲುಕಿ ಜೀವ ಕಳೆದುಕೊಂಡರು. ಅದು ಅಲ್ಲದೇ, ಗುರ್ಜಾಪುರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಭತ್ತದ ಜಮೀನಿಗೆ ನೀರು ನುಗ್ಗಿತ್ತು. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿಲ್ಲ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಎನ್‌ ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ಲಿಂಗಸುಗೂರು ತಾಲೂಕಿನ ನಡುಗಡ್ಡೆಗಳ ಜನರ ಸ್ಥಳಾಂತರಕ್ಕೆ ಒತ್ತು ನೀಡಿದರು.

ಅಧಿಕ ನೀರಿನ ಹರಿವಿಲ್ಲದ್ದರಿಂದ ಅಲ್ಲಿನ ಜನ ಬರಲೊಪ್ಪದ ಕಾರಣ ಕೆಲವರನ್ನು ಮಾತ್ರ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಇನ್ನು ನೀರಿನ ಹರಿವು ಕಡಿಮೆಯಾದ ಕಾರಣ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next