ನಾರಾಯಣಪುರ: ಬಸವಸಾಗರ ಜಲಾಶಯಕ್ಕೆ ಶನಿವಾರ ಸಂಜೆ 3.30 ಲಕ್ಷ ಕ್ಯೂಸೆಕ್‌ನಷ್ಟಿದ್ದ ಒಳಹರಿವು ರವಿವಾರ ಸಂಜೆ 2.93 ಲಕ್ಷ ಕ್ಯೂಸೆಕ್‌ಗೆ ತಲುಪಿದ್ದರೂ, ಮುಂಜಾಗ್ರತಕ್ರಮವಾಗಿ ಜಲಾಶಯದ 30 ಕ್ರಸ್ಟ್ಗೇಟ್‌ಗಳನ್ನು ತೆರದು ೨.೮೮ ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ.
ಪ್ರವಾಸಿಗರಿಂದ ಜಲ ವೈಭವ ವೀಕ್ಷಣೆ: ರಜಾ ದಿನವಾದ ರವಿವಾರದಂದು ಕಲ್ಯಾಣ ಕರ್ನಾಟಕದ ಪ್ರಮುಖ ಜಲಾಶಯವಾಗಿರುವ ಬಸವಸಾಗರ ಜಲಾಶಯ ವೀಕ್ಷಣೆಗೆ ಸುತ್ತಮುತ್ತಲಿನ ಜಿಲ್ಲೆಗಳ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸಿ ಜಲಧಾರೆ ಸೌಂದರ್ಯ ಕಣ್ತುಂಬಿಕೊಂಡು ಸಂಭ್ರಮಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕಿದ್ದ ಪ್ರವಾಸಿಗರು ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳುವದು ಮರೆತಂತೆ ಕಾಣುತಿತ್ತು.
ಬಸವಸಾಗರ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ನಾರಾಯಣಪುರ ಲಿಂಗಸೂಗುರ ಮಾರ್ಗದಲ್ಲಿ ಪ್ರವಾಸಿಗರ ವಾಹನ ಹೆಚ್ಚಾಗಿದ್ದರಿಂದ ಕೆಲಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಸದ್ಯ ಜಲಾಶಯದಲ್ಲಿ ೪೯೨.೨೫೨ ಗರಿಷ್ಠ ಮಟ್ಟದಲ್ಲಿ ೪೮೯.೪೧ ಮೀಟರಿಗೆ ನೀರು ಬಂದು ತಲುಪಿದ್ದು ೩೩.೩೧೩ ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದಲ್ಲೆ ೨೧.೮೯ ಟಿಎಂಸಿ ಅಡಿ ನೀರು ಸಂಗ್ರಹಗೊಂಡಿದೆ.