Advertisement

ಎಂಇಎಸ್‌ ಪುಂಡಾಟಿಕೆಗೆ ರಾಜ್ಯ ಸರ್ಕಾರ ಸೂಕ್ತ ಉತ್ತರ ನೀಡಲಿ: ಬಸವರಾಜ ಹೊರಟ್ಟಿ

04:17 PM Jan 23, 2021 | Team Udayavani |

ಹುಬ್ಬಳ್ಳಿ: ಕನ್ನಡದ ನೆಲದಲ್ಲಿ ಕನ್ನಡ ಧ್ವಜ ಹಾರಿಸಲು ಯಾರ ಅಪ್ಪಣೆಯೂ ಬೇಕಿಲ್ಲ. ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜ ತೆಗೆಯಬಾರದು. ನಾಡದ್ರೋಹಿ ಎಂಇಎಸ್‌ ಹದ್ದುಬಸ್ತಿನಲ್ಲಿಡಲು ಸರ್ಕಾರ ಇಚ್ಛಾಶಕ್ತಿ ತೋರಬೇಕೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಬೆಳಗಾವಿ ಪಾಲಿಕೆ ಕಚೇರಿ ಎದುರು ಹಾರಿಸಲಾಗಿರುವ ಕನ್ನಡಧ್ವಜ ತೆಗೆಯುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಒತ್ತಾಯಿಸುವ ಮೂಲಕ ಅಶಾಂತಿ ವಾತಾವರಣ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಕನ್ನಡಪರ ಸಂಘಟನೆಗಳು ಪಾಲಿಕೆ ಕಚೇರಿ ಮುಂದೆ ಹಾರಿಸಿರುವ ಕನ್ನಡ ಧ್ವಜ ತೆಗೆಯಲು ಎಂಇಎಸ್‌ ನವರು ಗಡುವು ನೀಡಿರುವುದು ಉದ್ಧಟತನದ ಪ್ರತೀಕ. ಇಂತಹ ನಾಡದ್ರೋಹ ಕೆಲಸವನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸಬಾರದು. ಎಂಇಎಸ್‌ ಅಥವಾ ಮಹಾರಾಷ್ಟ್ರ ಪ್ರೇರಿತ ಯಾರೇ ಹೋರಾಟಕ್ಕೆ ಮುಂದಾದರೂ ಅದಕ್ಕೆ ಪರವಾನಗಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಮೀಸಲಾತಿ; ಹಿಂದುಳಿದ ವರ್ಗಕ್ಕೆ  ಹೆಚ್ಚು  ಸ್ಥಾನ

ಎಂಇಎಸ್‌ನವರು ಮಹಾರಾಷ್ಟ್ರದಿಂದ ಕೆಲ ನಾಯಕರನ್ನು ಹಾಗೂ ಬೆಳಗಾವಿ ಜಿಲ್ಲೆಯ ಹಳ್ಳಿಗಳಿಂದ ಜನರನ್ನು ಕರೆಸಿ ಹೋರಾಟ ಮಾಡುವುದಾಗಿ ತಿಳಿಸಿದ್ದು, ಇದಕ್ಕೆ ಯಾವುದೇ ರೀತಿಯಿಂದ ಅವಕಾಶ ನೀಡಬಾರದು. ಕನ್ನಡತನಕ್ಕೆ ಧಕ್ಕೆಯಾದರೆ ಸರ್ಕಾರ ಸಹಿಸದು ಎಂಬ ಕಠೊರ ನಿಲುವಿನ ಎಚ್ಚರಿಕೆ ಸಂದೇಶ ನೀಡಬೇಕು. ಮುಂದೆಂದೂ ನಾಡದ್ರೋಹ ಕೆಲಸಕ್ಕೆ ಎಂಇಎಸ್‌ ನವರು ಮುಂದಾಗದಂತೆ ಸರ್ಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸಿ ಕನ್ನಡಿಗರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next