Advertisement

ವಿಧಾನಪರಿಷತ್ ಗೆ ಮಾಧ್ಯಮದವರಿಗೆ ಪ್ರವೇಶ; ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸೂಚನೆ:ಹೊರಟ್ಟಿ

05:41 PM Feb 12, 2021 | Team Udayavani |

ಹುಬ್ಬಳ್ಳಿ: ಜನರಿಗಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧ ಸರಿಯಲ್ಲ. ಈ ನಿಟ್ಟಿನಲ್ಲಿ ವಿಧಾನಪರಿಷತ್ತಿಗೆ ಮಾಧ್ಯಮದವರಿಗೆ ಪ್ರವೇಶ ನೀಡುವಂತೆ ತಿಳಿಸಿದ್ದೇನೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಸೂಚಿಸುತ್ತೇನೆ. ಸರಕಾರ ನಿರ್ಧರಿಸಿರುವ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಲು ಸೂಚಿಸುವುದಾಗಿ  ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಸಭಾಪತಿಯಾದ ನಂತರ ಮೊದಲ ಬಾರಿಗೆ ಆಗಮಿಸಿದ ಬಸವರಾಜ ಹೊರಟ್ಟಿ ಅವರನ್ನು ನಗರದ ಹೊರ ವಲಯ ಗಬ್ಬೂರು ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಲವತ್ತು ವರ್ಷಗಳ ಹಿಂದಿನ ಮಾದರಿಯಲ್ಲಿ ವಿಧಾನಪರಿಷತ್ತು ಕಲಾಪ ನಡೆಸುತ್ತೇನೆ. ಹಿಂದೆ ಹೊರಟ್ಟಿ ಅಂತ ಒಬ್ಬರು ಸಭಾಪತಿಗಳಿದ್ದರು ಎಂದು ಮುಂದಿನ ಜನಾಂಗ  ನೆನಪಿಟ್ಟುಕೊಳ್ಳುವ ಹಾಗೆ ಮಾದರಿಯಾಗಿ ಕೆಲಸ ನಿರ್ವಹಿಸುವೆ ಎಂದು ತಿಳಿಸಿದರು.

ಇದನ್ನೂ ಓದಿ:ಯಾವುದಕ್ಕೂ ಅಂಜುವುದಿಲ್ಲ..ಒಂಟಿಸಲಗ ನಾನು: ಶೋಕಾಸ್ ನೋಟಿಸ್ ಸುದ್ದಿಗೆ ಯತ್ನಾಳ್ ಪ್ರತಿಕ್ರಿಯೆ

ಮೇಲ್ಮನೆ ಸೋತವರ ಆಶ್ರಯ ತಾಣವಾಗಬಾರದು. ಆದರೆ ಇಂದಿನ ರಾಜಕೀಯದಲ್ಲಿ ಇದು ಆಗಿದೆ. ಡಿಸೆಂಬರ್ 15 ರಂದು ನಡೆದ ಘಟನೆಯನ್ನು ಮರೆಯುತ್ತೇವೆ. ಅಂತಹ ಘಟನೆ ಮರುಕಳಿಸದಂತೆ ಮೇಲ್ಮನೆಯ ಕಲಾಪ ನಡೆಯುತ್ತದೆ. ಸದನದ ಹೆಡ್ ಮಾಸ್ತರ್ ಆಗಿ ಕಾರ್ಯ ನಿರ್ವಹಿಸುತ್ತೇನೆ. ಸದನ ಹೇಗೆ ನಡೆಯಬೇಕು ಎನ್ನುವುದರ ಕುರಿತು ಪ್ರತಿ ವಾರ ಎಲ್ಲಾ ಪಕ್ಷದಿಂದ ಐವರು ಸದಸ್ಯರನ್ನು ಕರೆದು ಚರ್ಚಿಸುತ್ತೇನೆ ಹಾಗೂ ಮುಖಂಡರೊಂದಿಗೆ ಮಾತನಾಡುತ್ತೇನೆ. ಈ ಸ್ಥಾನ ಅಲಂಕರಿಸಲು ಕೆಲವರು ಹಿಂಜರಿಯುತ್ತಾರೆ. ಆದರೆ ನನಗೆ ತುಂಬ ಸಂತಸ ತಂದಿದೆ. ಇದನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next