Advertisement
ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಭಾಪತಿ ಬಸವರಾಜ್ ಹೊರಟ್ಟಿಯವರು ಇತ್ತೀಚಿಗೆ ಬಿಜೆಪಿಯ ಅಮಿತ್ ಶಾ ಅವರನ್ನ ಭೇಟಿಯಾಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂದು ಘೋಷಿಸಿದ್ದಾರೆ. ಸಾಕಷ್ಟು ಹಿರಿಯರಾಗಿ, ಶಾಸಕರಾಗಿ ಅನುಭವ ಇರುವ ಹೊರಟ್ಟಿ ಅವರಿಂದ ನಾವು ನಿರೀಕ್ಷೆ ಮಾಡಿರಲಿಲ್ಲ. ಸಂವಿಧಾನದ ಪೀಠದಲ್ಲಿದ್ದು ಬಿಜೆಪಿ ಸೇರ್ಪಡೆಯ ಮಾತು ಸಂವಿಧಾನಕ್ಕೆ ಮಾಡಿದ ಅಪಚಾರ ಇದು. ಪಕ್ಷ ಸಿದ್ದಾಂತಗಳನ್ನ ಒಪ್ಪಿ ಯಾರು ಬೇಕಾದರೂ ಯಾವುದೇ ಪಕ್ಷವನ್ನ ಸೇರಬಹುದು, ಆದರೆ ಸಂವಿಧಾನ ಪೀಠದಲ್ಲಿರುವವರು ನಡೆದುಕೊಳ್ಳುವ ರೀತಿ ಇದಲ್ಲ ಎಂದರು.
Related Articles
ಎಂದು ತೀವ್ರ ವಾಗ್ದಾಳಿ ನಡೆಸಿದರು.
Advertisement
ಅಣ್ಣಾ ಹಜಾರೆ ಎಲ್ಲಿ ಮಲಗಿದ್ದಾರೆ ?
ರಾಜ್ಯದಲ್ಲಿ 300 ಕೋಟಿ ರೂ. ಪಿಎಸ್ ಐ ನೇಮಕ ಹಗರಣ ನಡೆದಿದೆ. ಆದರೆ ಅಣ್ಣಾ ಹಜಾರೆ ಎಲ್ಲಿ ಮಲಗಿದ್ದಾರೆ ? ಎಂದು ಹರಿಪ್ರಸಾದ್ ಕಿಡಿ ಕಾರಿದರು.
ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮವಾಗಿದೆ.ಅಕ್ರಮ ಸಂಬಂಧ ೨೭ ಜನರನ್ನ ಬಂಧಿಸಿದ್ದಾರೆ.ಅಕ್ರಮ ಆಗಿಲ್ಲದಿದ್ರೆ ಯಾಕೆ ಬಂಧಿಸುತ್ತಿದ್ರು.ದಿವ್ಯಾ ಹಾಗರಗಿ ಯಾರು,ಬಿಜೆಪಿ ನಾಯಕಿಯಲ್ಲವೇ?ಈಗ ಹಾಗರಗಿಯನ್ನ ಪೊಲೀಸರು ಬಂಧಿಸಿಲ್ಲವೇ? ಎಂದು ಪ್ರಶ್ನಿಸಿದರು.
ಉನ್ನತ ಶಿಕ್ಷಣ ಇಲಾಖೆಯಲ್ಲಿ ಅವ್ಯವಹಾರ ಆಗಿಲ್ಲವೇ?ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ ಆಗಿಲ್ವೇ ? ಯಾಕೆ ಇದರ ಬಗ್ಗೆ ಮಾತನಾಡ್ತಿಲ್ಲ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದಲ್ಲಿ ಯಾವ ಸಿಎಂ ಜೈಲಿಗೆ ಹೋಗಿರಲಿಲ್ಲ. ಆದರೆ ಬಿಜೆಪಿ ಮುಖ್ಯಮಂತ್ರಿ ಹೋಗಿದ್ದರು. ಅಮಿತ್ ಶಾ ಯಾಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ ? ಅವರ ಮಗನ ಮೇಲೂ ಭ್ರಷ್ಟಾಚಾರ ಆರೋಪವಿದೆ. ಅದಕ್ಕಾಗಿ ಅವರು ಮಾತನಾಡುತ್ತಿಲ್ಲ. ಹಾವಿನಪುರದಲ್ಲಿಸುಳ್ಳು ಮ್ಯಾನ್ಯುಫ್ಯಾಕ್ಚರಿಂಗ್ ಫ್ಯಾಕ್ಟರಿಯಿದೆ ಎಂದು ಆರೋಪಿಸಿದರು.