Advertisement

ದಾಖಲೆಯ ಎಂಟನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ ಬಸವರಾಜ ಹೊರಟ್ಟಿ

02:36 PM Jun 15, 2022 | Team Udayavani |

ಬೆಳಗಾವಿ: ವಾಯುವ್ಯ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ದಾಖಲೆಯ ಎಂಟನೇ ಬಾರಿಗೆ ಜಯ ದಾಖಲಿಸಿದ್ದಾರೆ.

Advertisement

ಗೆಲುವಿನ ಗುರಿಗೆ ಬೇಕಾಗಿದ್ದ ಮತಗಳನ್ನು ಸುಲಭವಾಗಿ ಪಡೆದ ಹೊರಟ್ಟಿ ಇನ್ನೂ ನಾಲ್ಕು ಸಾವಿರ ಮತಗಳ ಎಣಿಕೆ ಬಾಕಿ ಇರುವಾಗಲೇ ಜಯದ ನಗೆ ಬೀರಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ 76 ರ ಹರೆಯದ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಜೆಡಿಎಸ್ ನ ಶ್ರೀಶೈಲ ಗಡದಿನ್ನಿ, ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಕಣದಲ್ಲಿದ್ದರು.

ಹೊರಟ್ಟಿ ಅವರು ಪ್ರಥಮ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ. ಒಟ್ಟು 14,360 ಮತಗಳು ಚಲಾವಣೆ ಆಗಿದ್ದು, 1,223 ಮತಗಳು ತಿರಸ್ಕೃತ ಗೊಂಡಿವೆ. ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ 9,266 ಮತ ಪಡೆದರೆ, ಕಾಂಗ್ರೆಸ್ ನ ಬಸವರಾಜ ಗುರಿಕಾರ 4,597 ಮತಗಳನ್ನು ಪಡೆದಿದ್ದಾರೆ. ಉಳಿದಂತೆ ಜೆಡಿಎಸ್ ನ ಶ್ರೀಶೈಲ ಗಡದಿನ್ನಿ 273, ಪಕ್ಷೇತರರಾದ ಕರಿಬಸಪ್ಪ-60, ಕೃಷ್ಣವಾಣಿ-58, ಪ್ರೊ.ಎಫ್.ವಿ ಕಲ್ಲನಗೌಡರ-27, ಆಮ್ಆದ್ಮಿ ಪಕ್ಷ ಬೆಂಬಲಿತ ಗೋವಿಂದಗೌಡ ವೆಂಕನಗೌಡ 79 ಮತಗಳನ್ನು ಪಡೆದಿದ್ದಾರೆ.

Advertisement

ಅಭಿಮಾನಿಗಳ ವಿಜಯೋತ್ಸವ

ಹೊರಟ್ಟಿ ಗೆಲುವಿನ ನಗೆ ಬೀರಿದ್ದು, ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಕೇಸರಿ ಬಣ್ಣ ಎರಚಿ ಸಂಭ್ರಮಿಸಿದರು.ನಗರದ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಜ್ಯೋತಿ ಕಾಲೇಜಿನ ಮತ ಎಣಿಕೆ ಕೇಂದ್ರದ ಬಳಿ ಕ್ಲಬ್ ರಸ್ತೆಯಲ್ಲಿ ಬಸವರಾಜ ಹೊರಟ್ಟಿ ಪುತ್ರ ವಸಂತ ಹೊರಟ್ಟಿ ನೇತೃತ್ವದಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಶಿಕ್ಷಕರು ಬಂದಿದ್ದು, ಹೊರಟ್ಟಿ ಅವರು ಮುನ್ನಡೆ ಸಾಧಿಸುತ್ತಿದ್ದಂತೆ ಬೆಂಬಲಿಗರು ಅವರ ಪೋಟೊ ಹಿಡಿದುಕೊಂಡು ಕುಣಿದಾಡಿದರು. ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.‌ ಎಲ್ಲೆಡೆಯೂ ಕೇಸರಿ ಬಣ್ಣವೇ ರಾರಾಜಿಸುತ್ತಿದೆ.

ಇದನ್ನೂ ಓದಿ: ಮುಕ್ತವಾಗಿ ದೂರು ದುಮ್ಮಾನ ಹೇಳಿಕೊಳ್ಳಿ: ಲೋಕಾಯುಕ್ತ ನ್ಯಾ. ಬಿ.ಎಸ್‌. ಪಾಟೀಲ್‌ ಸಂದರ್ಶನ

1980 ರಿಂದ ಹೊರಟ್ಟಿ ಅವರು ನಿರಂತರವಾಗಿ ವಿಧಾನ ಪರಿಷತ್ ಗೆ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next