Advertisement

Basavaraj Horatti: ಸಂವಿಧಾನ ಸ್ವಾತಂತ್ರ್ಯ ಭಾರತದ ಮೈಲಿಗಲ್ಲು: ಹೊರಟ್ಟಿ

11:25 PM Nov 27, 2024 | Team Udayavani |

ಬೆಂಗಳೂರು: ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನವಾಗಿರುವ ನಮ್ಮ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿಶ್ವಗುರು ಬುದ್ಧ ಪೊ›ಡಕ್ಷನ್ಸ್‌ ಸಂಸ್ಥೆಯವರು ಶಾಸಕರ ಭವನದಲ್ಲಿ ಆಯೋಜಿಸಿದ್ದ ಸಂವಿಧಾನಕ್ಕೆ 75ನೇ ವರ್ಷ – ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಿ.ಆರ್‌. ಅಂಬೇಡ್ಕರ್‌ ಭಾರತದಲ್ಲಿ ಹುಟ್ಟಿರದಿದ್ದರೆ, ನಮ್ಮ ಸಂವಿಧಾನದಲ್ಲಿರುವ ಪರಿಕಲ್ಪನೆಯೇ ಇರುತ್ತಿರಲಿಲ್ಲ. ಅವರು ನೀಡಿರುವ ಸಂವಿಧಾನ ಸ್ವಾತಂತ್ರ್ಯ ಭಾರತದ ಮೈಲಿಗಲ್ಲು. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವಗುರು ಬುದ್ಧ ಪೊ›ಡಕ್ಷನ್ಸ್‌ ಸಂಸ್ಥೆಯಿಂದ ನಿರ್ಮಿಸಿರುವ “ಮನೆ ಮನಕ್ಕೆ ಸಂವಿಧಾನ’ ಡಾಕ್ಯೂ ಡ್ರಾಮಾ ಸಾಕ್ಷ್ಯಚಿತ್ರವನ್ನು ಹೊರಟ್ಟಿ ಅವರು ಬಿಡುಗಡೆಗೊಳಿಸಿದರು. ಅಲ್ಲದೆ ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್‌ ಪ್ರಸ್ತುತಿಯ ಸಂವಿಧಾನ ಗೀತೆಯನ್ನು ಬಿಡುಗಡೆಗೊಳಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ವಿಧಾನಸಭೆ ಮುಖ್ಯ ಸಚೇತಕ ಅಶೋಕ್‌ ಪಟ್ಟಣ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌, ವಿಧಾನ ಪರಿಷತ್ತು ಸಚಿವಾಲಯದ ಕಾರ್ಯದರ್ಶಿ ಕೆ.ಆರ್‌. ಮಹಾಲಕ್ಷ್ಮೀ, ವಿಧಾನ ಪರಿಷತ್ತು ಸಚಿವಾಲಯದ ಕಾರ್ಯದರ್ಶಿ ಎಸ್‌. ನಿರ್ಮಲಾ, ವಿಧಾನಸಭೆ ಸಚಿವಾಲಯದ ಉಪಕಾರ್ಯದರ್ಶಿ ಮೊಹಮ್ಮದ್‌ ಗೌಸ್‌ ಕೆ., ವಿಧಾನ ಪರಿಷತ್ತು ಸಚಿವಾಲಯದ ಅಧೀನ ಕಾರ್ಯದರ್ಶಿ ಮೀನಾ ನಾಯಕ್‌, ವಿಧಾನಸೌಧ ಭದ್ರತಾ ವಿಭಾಗದ ಉಪ ಪೊಲೀಸ್‌ ಆಯುಕ್ತ ಎಂ.ಎನ್‌. ಕರಿಬಸವನಗೌಡ ಇತರರಿದ್ದರು. ವಿಶ್ವಗುರು ಬುದ್ಧ ಪೊ›ಡಕ್ಷನ್‌ ನ ಪ್ರಧಾನ ನಿರ್ದೇಶಕ ಅರುಣ ಕುಮಾರ್‌ ನಾಗರಾಜ್‌ ದಿವಾಣಜಿ, ಯೋಜನೆಯ ವ್ಯವಸ್ಥಾಪಕ ಕನ್ನಾಯಕನಹಳ್ಳಿ ಕುಮಾರ್‌ ರಾಮೇಗೌಡ, ಸಂಚಾಲಕರಾದ ಎಚ್‌. ಸತೀಶ್‌ ಕುಮಾರ್‌, ಸಿದ್ದಲಿಂಗ ಮೂರ್ತಿ, ಬಿ.ಆರ್‌. ಬೀರೇಶ್‌, ಸಂಯೋಜಕರುಗಳಾದ ಸುರೇಶ್‌ ಪಿ.ಬಿ., ಶರಣಕುಮಾರ್‌ ದಿವಾಣಜಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next