Advertisement
ಅವರು ಇಂದು ಮೈಸೂರಿನಲ್ಲಿ ಸಾರ್ವಜನಿಕ ರೋಡ್ ಶೋಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಘೋಷಣೆ ಮಾಡಿದ್ದ ಯೋಜನೆಗಳಲ್ಲಿ 65% ಅವರೇ ಮಾಡಿಲ್ಲ. ಮೊದಲು ಅವರು ರಿಪೋರ್ಟ್ ಕಾರ್ಡ್ ಕೊಡಲಿ. ನಮ್ಮ ಕಾಲದಲ್ಲಿ ಕೋವಿಡ್ ಬಂದಿದ್ದರಿಂದ ಸ್ವಲ್ಪ ಮಾರ್ಪಾಡು ಮಾಡಿಕೊಂಡು ಹೊಸ ಸ್ಕೀಂಗಳನ್ನು ಕೊಟ್ಟಿದ್ದೇವೆ. ಇದನ್ನು ವಿಧಾನಸಭೆಯಲ್ಲೂ ಹೇಳಿದ್ದೇನೆ. ನಾನು ಬಜೆಟ್ ನಲ್ಲೇ ವಿದ್ಯಾರ್ಥಿನಿಯರಿಗೆ ಮತ್ತು ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೆ. ಎಸ್ಸಿ ಎಸ್ಟಿ ಕುಟುಂಬಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದೆ, ಅದನ್ನೇ ಕಾಂಗ್ರೆಸ್ ಅವರು ಕಾಪಿ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
Related Articles
ಮೋದಿ ಮತ್ತು ಅಮಿತ್ ಶಾ ಅವರು ಪ್ರಚಾರಕ್ಕೆ ಬಂದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತೆ. ಪ್ರಧಾನಿ ಮೋದಿ ನೆನ್ನೆ ಮೈಸೂರಿಗೆ ಬಂದು ಹೋದ ಮೇಲೆ ಜನರಲ್ಲಿ ಬಹಳ ದೊಡ್ಡ ಉತ್ಸಾಹ ಕಾಣುತ್ತಿದೆ. ಇದರಿಂದ ಹೆಚ್ಚಿನ ಪರ್ಸೆಂಟೇಜ್ ಓಟಿಂಗ್ ಕೂಡ ಆಗುತ್ತದೆ. ಸೋಲುವ ಹತಾಶೆಯಲ್ಲಿ ವಿರೋಧ ಪಕ್ಷಗಳು ತಮ್ಮ ಸ್ಥಿಮಿತವನ್ನು ಕಳೆದುಕೊಂಡು ಪ್ರಧಾನಿ ವಿರುದ್ಧ ಮಾತನಾಡುತ್ತಿದ್ದಾರೆ. ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಈಗ ಅವರ ಮಗನ ಸರದಿ. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
Advertisement
ವರುಣಾದಲ್ಲಿ ಗಲಾಟೆ ಆಗಬಾರದುಕಾಂಗ್ರೆಸ್ ಅವರು ಸೋಲುತ್ತೇವೆಂದು ಹತಾಶರಾಗಿ ಗಲಾಟೆ ಮಾಡಿಸುತ್ತಿದ್ದಾರೆ. ಬಹಳ ಸುಲಭವಾಗಿ ಗೆಲ್ಲುತ್ತೀವಿ ಎಂಬ ಭ್ರಮೆ ಅವರಲ್ಲಿತ್ತು. ಕಾಂಗ್ರೆಸ್ ಓಟ್ ಬ್ಯಾಂಕ್ ಅವರಿಂದ ಸರಿಯುತ್ತಿದೆ. ಗಲಾಟೆ ಮಾಡಿದ್ರೆ ನಾವು ಗೆಲ್ಲಬಹುದು ಮತ್ತು ನಮ್ಮ ಪ್ರಚಾರವನ್ನು ತಡೆಯಬಹುದು ಎಂದು ಅವರು ಗಲಾಟೆ ಮಾಡುತ್ತಿದ್ದಾರೆ. ತಳಮಟ್ಟದಲ್ಲಿ ಬಹಳ ಬದಲಾವಣೆ ಆಗ್ತಿದೆ. ನಾವು ಗೆಲುವಿನ ಕಡೆಗೆ ಸಾಗುತ್ತಿದ್ದೇವೆ. ಜನ ಜಾಗೃತರಾಗಿದ್ದಾರೆ. ಹಳೇ ಪದ್ಧತಿ ಈಗ ನಡೆಯಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಇದನ್ನೂ ಓದಿ: Watch Video: ಮಾರ್ಗ ಮಧ್ಯೆ ದಿಢೀರ್ ಬಂದ ಆನೆಗಳ ಹಿಂಡಿಗೆ ದಾರಿಬಿಟ್ಟುಕೊಟ್ಟ ಹುಲಿ!