Advertisement

ಸದ್ಯ ಬೆಡ್‌ ಕೊರತೆ ನಿಯಂತ್ರಣಕ್ಕೆ ಬರುತ್ತಿದೆ : ಸಚಿವ ಬೊಮ್ಮಾಯಿ

12:57 AM May 19, 2021 | Team Udayavani |

ಬೆಂಗಳೂರು: ಸರಕಾರ ನಿಗದಿಪಡಿಸಿರುವಂತೆ ಬೆಡ್‌ಗಳನ್ನು ನೀಡದಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬೆಡ್‌ ಬ್ಲಾಕ್‌ ಮಾಡುವವರನ್ನು ಬಂಧಿಸಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ನಿಭಾಯಿಸಲು ಮುಖ್ಯಮಂತ್ರಿ ರಚನೆ ಮಾಡಿರುವ ಸಮಿತಿಯಲ್ಲಿ ಬೆಡ್‌ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿರುವ‌ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಉದಯವಾಣಿಯೊಂದಿಗೆ ಮಾತನಾಡಿ¨ªಾರೆ. ಸಚಿವರು ಉಡುಪಿ ಮತ್ತು ಹಾವೇರಿ ಜಿಲ್ಲೆಗಳ ಉಸ್ತುವಾರಿ ಸಚಿವರೂ ಆಗಿದ್ದಾರೆ.

– ನೀವು ಬೆಡ್‌ ಉಸ್ತುವಾರಿ ತೆಗೆದುಕೊಂಡ ಮೇಲೆ ಎಷ್ಟು ಬೆಡ್‌ ದೊರೆತಿದೆ?
ಮೊದಲನೆಯದಾಗಿ ವ್ಯವಸ್ಥೆ ಸರಿ ಮಾಡಲು ಸೆಂಟ್ರಲ್‌ ಮಾನಿಟರಿಂಗ್‌ ಸಿಸ್ಟಮ್‌ ಜಾರಿಗೆ ತಂದಿ ದ್ದೇವೆ. ಎರಡನೇಯದಾಗಿ ಖಾಸಗಿ ಆಸ್ಪತ್ರೆಗಳ ಬೆಡ್‌ಗಳ ಸಂಖ್ಯೆ 3,323 ಇತ್ತು. ಈಗ 4,200 ಬಂದಿದೆ. ಪ್ರತೀ ದಿನ 200ರಿಂದ 300 ಬರುತ್ತಿವೆ. ಒಟ್ಟು 6,847 ಬರಬೇಕು. ಅದನ್ನು ಪಡೆಯಲು ಪ್ರಯತ್ನ ನಡೆಸಿದ್ದೇವೆ. ನಾವೇ ಆಸ್ಪತ್ರೆಗೆ ಹೋಗಿ ರಿಯಾಲಿಟಿ ಚೆಕ್‌ ಮಾಡುತ್ತಿದ್ದೇವೆ.

– ಖಾಸಗಿ ವೈದ್ಯಕೀಯ ಕಾಲೇಜುಗಳಿಂದ ಎಷ್ಟು ಬೆಡ್‌ ಸಿಕ್ಕಿದೆ?
ಖಾಸಗಿ ವೈದ್ಯಕೀಯ ಕಾಲೇಜುಗಳಿಂದ 8,732 ಕೊಡಬೇಕು. ಮೇ 3ಕ್ಕೆ 5,349 ಕೊಟ್ಟಿದ್ದರು. ಈಗ 6,338 ಪಡೆದುಕೊಂಡಿದ್ದೇವೆ. ಮಿಕ್ಕಿದ್ದನ್ನು ಕೊಡಲು ಒಪ್ಪಿಕೊಂಡಿ¨ªಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.70 ಆಕ್ಸಿಜನ್‌ ಹಾಸಿಗೆಗಳಿಗೆ ಸರಕಾರವೇ ವೆಚ್ಚ ನೀಡುತ್ತದೆ. ಅದಕ್ಕೆ ಆಕ್ಸಿಜನ್‌ ಬೆಡ್‌ಗಳಾಗಿ ಪರಿವರ್ತಿಸಲು ಒಪ್ಪಿಕೊಂಡಿ¨ªಾರೆ. ಬಹಳಷ್ಟು ಜನರು ಡಿಸಾcರ್ಜ್‌ ಆದರೂ ಮಾಹಿತಿ ಕೊಡುತ್ತಿರಲಿಲ್ಲ. ಈಗ ಪ್ರತಿಯೊಂದು ಮಾಹಿತಿ ವ್ಯವಸ್ಥಿತವಾಗಿ ದೊರೆಯು ವಂತೆ ಮಾಡಲಾಗಿದೆ.

– ಗ್ರಾಮೀಣ ಭಾಗದಲ್ಲಿ ಐಸೊಲೇಶನ್‌ ಮಾಡಬೇಕು ಅಂತ ಡಿಸಿಎಂ ಹೇಳಿದ್ದಾರೆ. ಅಲ್ಲಿ ಬೆಡ್‌ ವ್ಯವಸ್ಥೆ ಮಾಡಿದ್ದೀರಾ?
ಕೊರೊನಾ ಮೂರನೇ ಅಲೆಯ ಸಿದ್ಧತೆಗಾಗಿ ಪಿಎಚ್‌ಸಿ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ಬೆಡ್‌ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಜಿÇÉಾ ಆಸ್ಪತ್ರೆಗಳ ಮೇಲಿನ ಭಾರ ಕಡಿಮೆಯಾಗಲಿದೆ.

Advertisement

– ಹಾವೇರಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡಲು ಏನು ಮಾಡುತ್ತಿದ್ದೀರಿ?
ಜಿÇÉಾಸ್ಪತ್ರೆಗಳಲ್ಲಿ ಆಕ್ಸಿನೇಟೆಡ್‌ ಬೆಡ್‌ ಮಾಡಿದ್ದೇವೆ. ಈಗಿರುವ ಅಂಕಿ ಸಂಖ್ಯೆಗೆ ಮ್ಯಾಚ್‌ ಮಾಡುತ್ತಿದ್ದೇವೆ. ಸದ್ಯಕ್ಕೆ ಬೆಡ್‌ ಸಿಗದೆ ತೊಂದರೆಯಾಗುವ ಪರಿಸ್ಥಿತಿ ಇಲ್ಲ. ತಾಲೂಕು ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಖಾಸಗಿ ವೈದ್ಯರನ್ನು ತೆಗೆದುಕೊಂಡಿದ್ದೇವೆ ಆಯುಷ್‌ ವೈದ್ಯರನ್ನು ಬಳಕೆ ಮಾಡಿಕೊಂಡಿದ್ದೇವೆ.

– ಉಡುಪಿ ಜಿÇÉೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆಯಾ?
ಉಡುಪಿಯಲ್ಲಿ ಜಿÇÉಾ ಆಸ್ಪತ್ರೆಗಿಂತಲೂ ಮಣಿಪಾಲದ ಕೆ.ಎಂ.ಸಿ. ಇದೆ. ಅವರು ಸಹಕಾರ ನೀಡಿದ್ದಾರೆ. ಅಲ್ಲಿ ಐಸಿಯು, ಆಕ್ಸಿನೇಟೆಡ್‌ ಬೆಡ್‌ಗಳಿವೆ. ಅವುಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಕಾರ್ಕಳ, ಕುಂದಾಪುರಗಳಲ್ಲಿ ಬೆಡ್‌ ಹೆಚ್ಚಳ ಮಾಡಿದ್ದೇವೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಉತ್ಪಾದನೆಗೆ ಆದ್ಯತೆ ನೀಡುತ್ತಿದ್ದೇವೆ. ಕೆಲವು ಕಡೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ವ್ಯವಸ್ಥೆ ಮಾಡಿದ್ದೇವೆ.

– ಖಾಸಗಿಯವರು ಬೆಡ್‌ ಕೊಡದಿದ್ದರೂ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?
ಹಲವಾರು ಕಡೆ ಕ್ರಮ ಕೈಗೊಂಡಿ ದ್ದೇವೆ. ಎಲ್ಲ ಕಡೆ ನೋಡಲ… ಆಫೀಸರ್‌ ಹಾಕಿದ್ದೇವೆ. ಕೆಲವು ಖಾಸಗಿ ಆಸ್ಪತ್ರೆಗಳ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಸರಕಾರಕ್ಕೆ ಬೆಡ್‌ ನೀಡಿದರೆ ನಿರ್ದಿಷ್ಟ ದರ ಪಡೆಯಬೇಕಾಗುತ್ತದೆ. ಹೀಗಾಗಿ ಬೆಡ್‌ಗಳನ್ನು ಖಾಸಗಿ ರೋಗಿಗೆ ನೀಡಿ ಹೆಚ್ಚಿನ ದರ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ.

– ಬೆಡ್‌ ಬ್ಲಾಕಿಂಗ್‌ ಪ್ರಕರಣ ಏನಾಯಿತು? ಯಾರ ಮೇಲಾದರೂ ಕ್ರಮ ಕೈಗೊಂಡಿದ್ದೀರಾ?
ಬೆಡ್‌ ಬ್ಲಾಕಿಂಗ್‌ ತನಿಖೆ ನಡೆ ಯುತ್ತಿದೆ. ಹತ್ತು ಜನರನ್ನು ಬಂಧಿಸಿದ್ದೇವೆ. ವಾರ್‌ ರೂಂನಲ್ಲಿ ಕೆಲಸ ಮಾಡುವವರು ಬಂಧಿತರು. ಖಾಸಗಿ ಆಸ್ಪತ್ರೆಯಲ್ಲಿ ಆಪ್ತಮಿತ್ರ ಆ್ಯಪ್‌ ಅಡೆjಸ್ಟ್‌ ಮಾಡುವವರನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next