Advertisement

Basavaraj Bommai ಕಾಂಗ್ರೆಸ್‌ನಿಂದ 56 ಬಾರಿ ರಾಜಭವನ ದುರ್ಬಳಕೆ

11:44 PM Aug 04, 2024 | Team Udayavani |

ಬೆಂಗಳೂರು: ರಾಜಭವನವನ್ನು ಅತೀ ಹೆಚ್ಚು ಬಾರಿ ದುರುಪಯೋಗ ಪಡೆಸಿಕೊಂಡಿರುವ ಶ್ರೇಯಸ್ಸು ಕಾಂಗ್ರೆಸ್ಸಿಗಿದೆ.

Advertisement

ದೇಶದಲ್ಲಿ 56ಕ್ಕಿಂತಲೂ ಹೆಚ್ಚು ಬಾರಿ ರಾಜಭವನವನ್ನು ದುರುಪಯೋಗ ಮಾಡಿಕೊಂಡು ಸರಕಾರಗಳನ್ನು ಉರುಳಿಸಿದ್ದು ಕಾಂಗ್ರೆಸ್‌ ಎಂದು ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.

ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ರಾಜಭವನವನ್ನು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಬಳಸಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ರವಿವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿ, ಅಂಥವರು ನಮ ಗೇನು ಪಾಠ ಹೇಳುವುದು ಎಂದು ಉತ್ತರಿಸಿದರು.

ವರ್ಗಾವಣೆಯಲ್ಲಿ ದುಡ್ಡು ಮಾಡಲು ಶಾಸಕ ರಿಗೆ ಸೂಚನೆ: ಈ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ವರ್ಗಾವಣೆ ದಂಧೆ ಆರಂಭವಾಗಿದೆ. ಅಭಿವೃದ್ಧಿ ಕೆಲಸಕ್ಕೆ ನಯಾಪೈಸೆ ಕೊಡುತ್ತಿಲ್ಲ. ಶಾಸಕರೆಲ್ಲ ಗಂಟು ಬಿದ್ದಿದ್ದಾರೆ. ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್‌ ನಾಯಕರೆಲ್ಲ ವರ್ಗಾವಣೆಯಲ್ಲಿಯೇ ದುಡ್ಡು ಮಾಡುವಂತೆ ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next