Advertisement

BJP “ಪ್ರಕರಣಗಳಿದ್ದರೆ ತನಿಖೆ ನಡೆಸಲಿ’: ಸಂಸದ ಬಸವರಾಜ ಬೊಮ್ಮಾಯಿ

11:43 PM Sep 05, 2024 | Team Udayavani |

ಮಂಗಳೂರು: ಬಿಜೆಪಿ ಅವಧಿಯಲ್ಲಿ ಏನು ಕೇಸುಗಳಿದ್ದರೂ ಎದುರಿಸಲು ಸಿದ್ಧ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬಿಜೆಪಿ ಸರಕಾರದ ಅವಧಿಯ ಹಗರಣಗಳ ತನಿಖೆ ಮಾಡು ವುದಾಗಿ ರಾಜ್ಯ ಸರಕಾರದ ಹೇಳಿ ಕೆಗೆ ಪ್ರತಿಕ್ರಿಯಿಸಿದ ಅವರು, ಏನು ಬರು ತ್ತದೋ ನೋಡೋಣ ಎಂದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ಬಗ್ಗೆ ಭವಿಷ್ಯ ನುಡಿ ಯುವುದು ಸರಿಯಲ್ಲ. ಅದೇನಿದ್ದರೂ ಕೋರ್ಟ್‌ನಲ್ಲಿ ತೀರ್ಮಾನ ಆಗುತ್ತದೆ ಎಂದು ಹೇಳಿದರು.

ಲೈಂಗಿಕ ದೌರ್ಜನ್ಯ: ತನಿಖೆಯಾಗಲಿ
ರಾಜಕೀಯದ ಲೈಂಗಿಕ ದೌರ್ಜನ್ಯಗಳ ಬಗ್ಗೆಯೂ ತನಿಖೆಯಾಗಲಿ ಎಂಬ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಮಂಜು ಳಾರ ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲೇ ದೌರ್ಜನ್ಯ ಆಗಿದ್ದರೂ ಅದರ ಬಗ್ಗೆ ತನಿಖೆ ಆಗಲಿ. ತನಿಖೆಯ ಸ್ವರೂಪ ಸರಕಾರಕ್ಕೆ ಬಿಟ್ಟದ್ದು ಎಂದರು.

ಶಿಕ್ಷಕ ವರ್ಗಕ್ಕೆ ಅವಮಾನ: ಹಿಜಾಬ್‌ ನಿಷೇಧಿಸಿದ್ದ ಕುಂದಾಪುರದ ಪ್ರಾಂಶುಪಾಲರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಯನ್ನು
ತಡೆ ಹಿಡಿದ ಬಗೆಗಿನ ಪ್ರಶ್ನೆಗೆ, ಹಿಜಾಬ್‌ ಶಕ್ತಿಗಳು ಇನ್ನೂ ಕೆಲಸ ಮಾಡುತ್ತಿವೆ. ದೇಶದ್ರೋಹಿ ಶಕ್ತಿ ಇನ್ನೂ ಸಕ್ರಿಯವಾಗಿದೆ. ಆವತ್ತು ಪ್ರಾಂಶುಪಾಲರು ತಮ್ಮ ಕರ್ತವ್ಯವನ್ನಷ್ಟೇ ಮಾಡಿದ್ದರು. ಹಿಜಾಬ್‌ ಪ್ರಕರಣ ಈಗಲೂ ಸುಪ್ರೀಂಕೋರ್ಟ್‌ನಲ್ಲಿದೆ. ಇಂತಹ ಸಂದರ್ಭ ದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದವರನ್ನು ಕೊನೇ ಕ್ಷಣದಲ್ಲಿ ಕೈಬಿಟ್ಟದ್ದು ಶಿಕ್ಷಕ ವರ್ಗಕ್ಕೆ ಮಾಡಿದ ಅವಮಾನ ಎಂದರು.

Advertisement

ಅಭ್ಯರ್ಥಿ ಆಯ್ಕೆಗೆ
ಅಭಿಪ್ರಾಯ ಸಂಗ್ರಹ
ದಕ್ಷಿಣ ಕನ್ನಡ-ಉಡುಪಿ ವಿಧಾನ ಪರಿಷತ್‌ ಸ್ಥಾನದ ಉಪಚುನಾವಣೆ ಹಿನ್ನೆಲೆಯಲ್ಲಿ ಎಲ್ಲರ ಬಳಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ನಾಯ ಕರು ಹಾಗೂ ಹಿರಿಯರ ಜತೆ ಚರ್ಚಿಸುತ್ತೇವೆ. ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.