Advertisement
ಈ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಕಾನೂನು ತಜ್ಞರು ಹಾಗೂ ಜಲ ತಜ್ಞರ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.
Related Articles
Advertisement
ಕಾನೂನು ಹೋರಾಟಕ್ಕೆ ದಿಲ್ಲಿ ಟೀಂ :
ಅಂತಾರಾಜ್ಯ ಜಲ ವಿವಾದಗಳು ಸೇರಿದಂತೆ ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ದಾವೆಗಳಲ್ಲಿ ಕಾನೂನು ಹೋರಾಟ ನಡೆಸುವ ಜವಾಬ್ದಾರಿಯನ್ನು ದಿಲ್ಲಿ ವಕೀಲರ ತಂಡದ ಹೆಗಲಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಶುಕ್ರವಾರದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, 2018ಕ್ಕಿಂತ ಮುಂಚೆ ಇದ್ದ ಕಾನೂನು ಹೋರಾಟದ ವ್ಯವಸ್ಥೆಯನ್ನು ಮುಂದುವರಿಸಲಾಗುವುದು. 2018ಕ್ಕಿಂತ ಮುಂಚೆ ದಿಲ್ಲಿ ವಕೀಲರ ತಂಡ ಕಾನೂನು ಹೋರಾಟದ ಮುಂದಾಳತ್ವ ವಹಿಸುತ್ತಿತ್ತು. 2018ರ ಅನಂತರ ಬೆಂಗಳೂರು ವಕೀಲರ ತಂಡಕ್ಕೆ ವಹಿಸಲಾಗಿತ್ತು. ಇದೀಗ ಕಾವೇರಿ-ಮಹದಾಯಿ ಸೇರಿದಂತೆ ರಾಜ್ಯದ ಜಲ ವಿವಾದಗಳಲ್ಲಿ ನ್ಯಾಯಾಧೀಕರಣ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರಕಾರವನ್ನು ಪ್ರತಿನಿಧಿಸುತ್ತಿದ್ದ ದಿಲ್ಲಿ ವಕೀಲರ ತಂಡ, ಮುಂದಿನ ಕಾನೂನು ಹೋರಾಟದ ನೇತೃತ್ವದ ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.