Advertisement
ಈ ಕುರಿತು ಶಾಸಕಿ ರೂಪಾಲಿ ನಾಯ್ಕ ಅವರಿಗೆ ಮನವಿ ನೀಡಿದಾಗ, ಸರ್ಕಾರ ಗೋ ಹತ್ಯೆ ನಿಷೇಧಕ್ಕೆ ಬದ್ಧವಾಗಿದ್ದು, ಗೋಹತ್ಯೆ ನಿಷೇಧಿಸಿ ಸದ್ಯದಲ್ಲೇ ಕಠಿಣ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು. ಗೋಹತ್ಯೆ ನಿಷೇಧದ ಬಗ್ಗೆ ಸಚಿವರ ಗಮನ ಸೆಳೆದ ಶಾಸಕರು, ಗೋವುಗಳ ಹತ್ಯೆ, ಹಿಂಸಾತ್ಮಕ ಸಾಗಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕೂಡಲೇ ಬಲಿಷ್ಠ ಕಾನೂನಿನ ಮೂಲಕ ಇವುಗಳನ್ನು ತಡೆಗಟ್ಟುವ ಅನಿವಾರ್ಯತೆ ಎದುರಾಗಿದೆ ಎಂದು ವಿನಂತಿಸಿದರು.
Related Articles
Advertisement
ಗೋವುಗಳ ಹಿಂಸಾತ್ಮಕ ಸಾಗಾಟ ತಡೆಯಬೇಕು: ಈ ಹಿಂದೆ ಅಂದರೆ 1964ರಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿ ಅಲ್ಪಸ್ವಲ್ಪ ಬದಲಾವಣೆಗಳಾದರೂ ಗೋ ಹತ್ಯೆ ನಿಷೇಧ ಪರಿಣಾಮಕಾರಿಯಾಗಿ ಆಗಿಲ್ಲ. 2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜಾರಿಗೆ ಮುಂದಾಗಲಾಯಿತಾದರೂ ಕಾರಣಾಂತರಗಳಿಂದ ಕಾಯಿದೆ ಜಾರಿಗೆ ಬರಲಿಲ್ಲ. ಆದರೆ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಗೋ ಹತ್ಯೆ ನಿಷೇಧದ ಕಟ್ಟುನಿಟ್ಟಿನ ಕಾಯಿದೆ ಆದಷ್ಟು ಶೀಘ್ರದಲ್ಲಿ ಜಾರಿಗೆ ಬರುವಂತೆ ಕ್ರಮಕೈಗೊಳ್ಳಬೇಕಾಗಿ ಮನವಿ ಮಾಡಿದ್ದರು. ಜನತೆಯ ಧಾರ್ಮಿಕ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಪ್ಪಿಸಲು ಹಾಗೂ
ಗೋ ಸಂರಕ್ಷಣೆಯನ್ನು ಮಾಡುವ ಉದ್ದೇಶದಿಂದ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಆದಷ್ಟು ಶೀಘ್ರದಲ್ಲಿ ಜಾರಿಗೊಳಿಸುವಂತೆ ಶಾಸಕಿ ರೂಪಾಲಿ ನಾಯ್ಕ ಆಗ್ರಹಿಸಿದರು.